Belagavi

ಅತಿ ಕಡಿಮೆ ದರದಲ್ಲಿ “ಇ ಬೈಕ್, ಇ ಸೈಕಲ್” ರೈಡಿಂಗ್ ಲಭ್ಯ ಸಾರ್ವಜನಿಕರು ಬಳಸುವಂತೆ ಕರೆ ನೀಡಿದ ಶಾಸಕ ಅನಿಲ ಬೆನಕೆ

Share

ಬೆಳಗಾವಿ: ಜನರ ಓಡಾಟಕ್ಕಾಗಿ ಅನುಕೂಲವಾಗಲು ಸ್ಮಾರ್ಟ್ ಸಿಟಿ ಸಹಯೋಗದಲ್ಲಿ ಇ ಸೈಕಲ್ ಹಾಗೂ ಇ ಬೈಕ್ ಗಳನ್ನು ಶಾಸಕ ಅನಿಲ ಬೆನಕೆ ಅವರು ಚಾಲನೆ ನೀಡಿದರು.

ಬೆಳಗಾವಿಯ ಚನ್ನಮ್ಮ ವೃತ್ತದ ಹತ್ತಿರ ಇ ಸೈಕಲ್ ಹಾಗೂ ಇ ಬೈಕ್ ಗಳಿಗೆ ಚಾಲನೆ ನೀಡದರು. ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ಅನಿಲ ಬೆನಕೆ ಅವರು, 100 ಇ ಸೈಕಲ್, 100 ಇ ಬೈಕ್ ಹಾಗೂ 100 ಸೈಕಲ್ ಹೀಗೆ 300 ಎಲೆಕ್ಟ್ರಿಕಲ್ ಸೈಕಲ್ ಬೈಕ್ ಹಾಗೂ ಸೈಕಲ್ ಗಳುನ್ನು ನಗರದಲ್ಲಿ 20 ಸ್ಟೇಷನ್‌ ಮಾಡಿ, ಜನರ ಬಳಕೆಗೆ ಜಾರಿಗೆ ತರಲಾಗಿದೆ.

ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕು. ಇವುಗಳಿಗೆ ಬೇಡಿಕೆ ಜಾಸ್ತಿ ಆದರೆ ಇನ್ನು ಹೆಚ್ಚಿನ ಸ್ಟೇಷನ್‌ ಮಾಡಿ ಹೆಚ್ಚುವರಿ ಸೈಕಲ್ ಹಾಗೂ ಬೈಕ್ ಗಳನ್ನು ಜನರ ಅನುಕೂಲಕ್ಕಾಗಿ ಜಾರಿಗೆ ತರಲಿದ್ದೇವೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಸ್ಮಾರ್ಟ್ ಸಿಟಿ ಎಂಡಿ ಪ್ರವೀಣ್ ಬಾಗೇವಾಡಿ ಅವರು, ಸಾರ್ವಜನಿಕರು ಇ ಬೈಕ್ ಹಾಗೂ ಇ ಸೈಕಲ್ ಬಳಕೆ ಮಾಡಬೇಕು ಇದರಿಂದ ಪರಿಸರ ರಕ್ಷಣೆ ಜೊತೆಗೆ ಸಂಚಾರ ದಟ್ಟಣೆ ತಪ್ಪಿಸಬೇಕು. ಇ ಸೈಕಲ್ ಹಾಗೂ ಇ ಬೈಕ್ ಗಳುನ್ನು ಬಳಕೆ ಮಾಡಲು “ಯಾನಾ” ಎಂಬ ಆಫ್ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಬೇಕು. ಅರ್ಧ ಗಂಟೆಗೆ ಇ ಸೈಕಲ್ ಗಳಿಗೆ 15 ರೂಪಾಯಿ ಸೈಕಲ್ ಗಳಿಗೆ 5 ರೂಪಾಯಿ ಹಾಗೂ ಇ ಬೈಕ್ ಗೆ 30 ರೂಪಾಯಿ ದರ ನಿಗದಿ ಮಾಡಲಾಗಿದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ನಿತೀಶ್ ಪಾಟೀಲ್, ಎಇಇ ಬಿ ಎಸ್ ಕಮ್ತೆ, ಶಾಲಿನಿ ಬಿರಾದರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು

Tags: