Belagavi

ಆರ್‍ಸಿಯು ವಿರುದ್ಧ ಭುಗಿಲೆದ್ದ ಹಿರೇಬಾಗೇವಾಡಿ ರೈತರ ಆಕ್ರೋಶ

Share

ಈ ಹಿಂದೆ ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಸ್ಥಾಪನೆಗಾಗಿ ಹೋರಾಟ ಮಾಡಿದ್ದ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಗ್ರಾಮಸ್ಥರು ಈಗ ವಿಶ್ವವಿದ್ಯಾಲಯ ಬೇಡ ಎನ್ನುವ ಹೋರಾಟಕ್ಕೆ ಅಣಿಯಾಗಿದ್ದಾರೆ.
ವಾ.ಒ: ಹೌದು ಹಿರೇಬಾಗೇವಾಡಿ ಗ್ರಾಮದ ಗುಡ್ಡದ ಮಲ್ಲಪ್ಪನ ಬಳಿ ನಿರ್ಮಾಣ ಆಗುತ್ತಿರುವ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಜಾಗೆಯ ಸ್ಥಳಕ್ಕೆ ಬಂದಿದ್ದ ವಿವಿ ಅಧಿಕಾರಿಗಳು ಮತ್ತು ಬೆಳಗಾವಿ ಎಸಿ ಅವರಿಗೆ ರೈತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

: ಗುಡ್ಡದ ಮಲ್ಲಪ್ಪನ ಬಳಿ ಇರುವ ಸುಮಾರು ನೂರು ಎಕರೆ ಪ್ರದೇಶದಲ್ಲಿ ರಾಣಿ ಚನ್ನಮ್ಮ ವಿವಿಯವರು ಕಟ್ಟಡ ನಿರ್ಮಿಸುತ್ತಿದ್ದಾರೆ. ಈ ಸ್ಥಳಕ್ಕೆ ಹೋಗುವುದಕ್ಕಾಗಿ ರಸ್ತೆ ನಿರ್ಮಾಣದ ಸಂದರ್ಭದಲ್ಲಿ ವಿವಿಯವರು ರೈತರ ಫಲವತ್ತಾದ ಜಮೀನನ್ನು ಕಬಳಿಕೆ ಮಾಡುತ್ತಿರುವುದು ಅವರ ಆಕ್ರೋಶಕ್ಕೆ ಕಾರಣವಾಗಿದೆ. ಇಲ್ಲಿ ರೈತರು ಈ ರಸ್ತೆ ನಿರ್ಮಾಣಕ್ಕಾಗಿ 20 ಅಡಿ ಅಗಲದ ಬದಲು ಇನ್ನೂ ಹತ್ತಡಿ ಹೆಚ್ಚು ಅಗಲ ಜಮೀನನ್ನು ಬಿಟ್ಟು ಕೊಟ್ಟಿದ್ದಾರೆ, ಆದರೆ ವಿವಿಯವರು ಯಾವುದೇ ಮಾಹಿತಿ ನೀಡದೇ ರೈತರ ಜಮೀನು ಮಧ್ಯದಲ್ಲಿ ಮತ್ತೊಂದು ರಸ್ತೆ ಮಾಡುವುದು ಅμÉ್ಟೀ ಅಲ್ಲ ಅಲ್ಲಿ ಬೆಳೆದಿರುವ ಬೆಳೆಯನ್ನು ಜೆಸಿಬಿ ಮೂಲಕ ನಾಶ ಮಾಡುವ ಕೆಲಸ ಮಾಡುತ್ತಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಕಳೆದ ಹಲವು ತಿಂಗಳುಗಳಿಂದ ರೈತರು ತಮ್ಮ ಅಳಲನ್ನು ವಿವಿಯ ಅಧಿಕಶರಿಗಳ ಮುಂದೆ ಪ್ರಸ್ಪಾಪ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಈ ಹಿನ್ನೆಲೆಯಲ್ಲಿಂದು ಗುಡ್ವದ ಮಲ್ಲಪ್ಪನ ಸ್ಥಳಕ್ಕೆ ಆಗಮಿಸಿದ್ದ ವಿವಿ ಅಧಿಕಾರಿಯನ್ನು ರೈತರು ತರಾಟೆಗೆ ತೆಗೆದುಕೊಂಡರು.

: ರೈತರ ಮೇಲೆ ಇದೇ ರೀತಿ ದೌರ್ಜನ್ಯ ಮುಂದುವರೆಸಿದರೆ ರಾಣಿ ಚನ್ನಮ್ಮ ವಿವಿ ಬೇಡ ಎನ್ನುವ ಹೋರಾಟ ಮಾಡಬೇಕಾದ ಪರಿಸ್ಥಿತಿ ಬರಬಹುದು ಎನ್ನುವ ಎಚ್ಚರಿಕೆ ನೀಡಿದರು. ಆದ್ದರಿಂದ ಇಲ್ಲಿ ತೆಗೆದುಕೊಳ್ಳಲಾಗುವ ಕಾಮಗಾರಿ ಬಗ್ಗೆ ನೀಲನಕ್ಷೆಯನ್ನು ರೈತರ ಮುಂದಿಟ್ಟು ಮುಂದಿನ ಕೆಲಸ ಮಾಡಬೇಕು. ಅಲ್ಲಿಯವರೆಗೆ ರಸ್ತೆ ನಿರ್ಮಾಣ ಕಾರ್ಯ ಆರಂಭಿಸಬಾರದು. ರೈತರ ಜಮೀನನ್ನು ಅನ್ಯಾಯವಾಗಿ ಕಬಳಿಸಿ ವಿವಿ ನಿರ್ಮಾಣಕ್ಕೆ ಮುಂದಾದರೆ ಉಗ್ರ ಹೋರಾಟಕ್ಕೆ ಮುಂದಾಗಬೇಕಾಗುತ್ತದೆ. ಇದರಿಂದ ಮುಂದಾಗು ಅನಾಹುತಕ್ಕೆ ಸರ್ಕಾರ ಮತ್ತು ವಿಶ್ವವಿದ್ಯಾಲಯವೇ ಕಾರಣ ಎಂದು ಅವರು ಎಚ್ಚರಿಕೆ ಕೊಟ್ಟಿದ್ದಾರೆ.

: ಒಟ್ಟಿನಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ದಬ್ಬಾಳಿಕೆ ವಿರುದ್ಧ ಹಿರೇಬಾಗೇವಾಡಿ ರೈತರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು ಈ ವೇಳೆ ಕಂಡು ಬಂತು.

Tags: