Belagavi

109.200 ಲೀಟರ ಗೋವಾ ಮದ್ಯ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿರುವಾಗ ಪತ್ತೆ

Share

ದಿನಾಂಕ:17-12-2022 ರಂದು ಬೆಳಿಗ್ಗೆ 8-00 ಗಂಟೆಯ ಸುಮಾರಿಗೆ ಅಬಕಾರಿ ನಿರೀಕ್ಷಕರು, ಬೆಳಗಾವಿ ಉಪ ವಿಭಾಗ ಹಾಗೂ ಸಿಬ್ಬಂದಿ ಜನರು ಪಂಚರು ಕೂಡಿಕೊಂಡು ಕಣಕುಂಬಿ ತನಿಖಾ ಠಾಣೆಯ ಸಿಬ್ಬಂದಿಯವರು ನೀಡಿದ ಬಾತ್ಮೀಯ ಮೇರೆಗೆ ಬೆಳಗಾವಿ ತಾಲೂಕಿನ ಸಂತಿಬಸ್ತವಾಡ ಸಮೀಪದ ಬೆಳಗಾವಿ-ಜಾಂಬೋಟಿ ರಸ್ತೆಯ ವಿಶ್ವೇಶ್ವರಯ್ಯಾ ತಾಂತ್ರಿಕ ವಿಶ್ವವಿದ್ಯಾಲಯದ ಗೇಟ ಹತ್ತಿರ ರಸ್ತೆಯಲ್ಲಿ ರಸ್ತೆಗಾವಲು ಮಾಡುತ್ತಿರುವಾಗ ಒಂದು ಬೂದು ಬಣ್ಣದ ಇನೋವಾ ಕ್ರಿಸ್ಟಾ ನಾಲ್ಕು ಚಕ್ರ ವಾಹನ  ನೇದ್ದರ ವಾಹನವನ್ನು ತಪಾಸಣೆ ಮಾಡಿದಾಗ ವಾಹನದಲ್ಲಿ ಗೋವಾ ರಾಜ್ಯದಲ್ಲಿ ಮಾರಾಟಕ್ಕೆ ಅಂತಾ ನಮೂದಿರುವ ವಿವಿದ ನಮೂನೆಯ ಒಟ್ಟ್ಟು 109.200 ಲೀಟರ ಗೋವಾ ಮದ್ಯವನ್ನು ತಾಬಾ ಹೊಂದಿ ಅಕ್ರಮವಾಗಿ ಕ್ರಿಸ್‍ಮಸ್ ಹಾಗೂ ಹೊಸ ವರ್ಷಾಚರಣೆ ನಿಮಿತ್ಯ ಸಾಗಾಣಿಕೆ ಮಾಡುತ್ತಿರುವಾಗ ಪತ್ತೆಯಾಗಿರುತ್ತದೆ. ಆರೋಪಿತನಾದ ಎ-1 ಪ್ರಶಾಂತಕುಮಾರ ಬಿ.ಎಲ್ 2, ಸಿಂಗನಾಯಕನ ಹಳ್ಳಿ ಯಲಹಂಕಾ ಹೋಬಳಿ, ಸಿಂಗನಾಯಕನ ಹಳ್ಳಿ ಬೆಂಗಳೂರು- ಇತನನ್ನು ಸ್ಥಳದಲ್ಲಿಯೇ ಬಂದಿಸಿದ್ದು ಇರುತ್ತದೆ.

ಎ-2 ಒಂದು ಬೂದು ಬಣ್ಣದ ಇನೋವಾ ಕ್ರಿಸ್ಟಾ ನಾಲ್ಕು ಚಕ್ರ ವಾಹನ ಸಂಖ್ಯೆ  ನೇದ್ದರ ವಾಹನದ ಮಾಲೀಕನನ್ನು ಪತ್ತೆ ಹಚ್ಚಿ ಬಂಧಿಸಬೇಕಾಗಿದೆ. ಗುನ್ನೆಯ ಮುಂದಿನ ಕ್ರಮಕ್ಕಾಗಿ ವಾಹನ ಹಾಗೂ ಮುದ್ದೆಮಾಲನ್ನು ಪಂಚನಾಮೆ ಪ್ರಕಾರ ಜಪ್ತು ಮಾಡಿಕೊಂಡು ಸರ್ಕಾರದ ವಶಕ್ಕೆ

ಸದರಿ ದಾಳಿಯನ್ನು ಮಾನ್ಯ ಡಾ:ವೈ ಮಂಜುನಾಥ ಅಬಕಾರಿ ಅಪರ ಆಯುಕ್ತರು ಕೇಂದ್ರ ಸ್ಥಾನ ಬೆಳಗಾವಿ,  ಫೀರೋಜಖಾನ ಕಿಲ್ಲೇದಾರ ಅಬಕಾರಿ ಜಂಟಿ ಆಯುಕ್ತರು, (ಜಾ&ತ) ಬೆಳಗಾವಿ ವಿಭಾಗ, ಬೆಳಗಾವಿ,  ಜಯರಾಮೇಗೌಡ, ಅಬಕಾರಿ ಉಪ ಆಯುಕ್ತರು, ಬೆಳಗಾವಿ (ದಕ್ಷಿಣ) ಜಿಲ್ಲೆ, ಬೆಳಗಾವಿರವರ ಮಾರ್ಗದರ್ಶನದಲ್ಲಿ ಹಾಗೂ ರವಿ ಎಂ ಮುರಗೋಡ, ಅಬಕಾರಿ ಉಪ ಅಧೀಕ್ಷಕರು ಬೆಳಗಾವಿ ಉಪ ವಿಭಾಗ, ಬೆಳಗಾವಿರವರ ನೇತೃತ್ವದಲ್ಲಿ ಮಂಜುನಾಥ ಗಲಗಲಿ ಅಬಕಾರಿ ನಿರೀಕ್ಷಕರು, ಬೆಳಗಾವಿ ಉಪ ವಿಭಾಗ, ಬೆಳಗಾವಿ ಇವರು ಪ್ರಕರಣವನ್ನು ದಾಖಲಿಸಿಕೊಂಡಿರುತ್ತಾರೆ. ಸದರಿ ದಾಳಿಯಲ್ಲಿ ಸಿದ್ದಪ್ಪ ಯರಗಟ್ಟಿ ಅಬಕಾರಿ ಉಪ ನಿರೀಕ್ಷಕರು, ಕಣಕುಂಬಿ ತನಿಖಾ ಠಾಣೆ, ಮಂಜುನಾಥ ಮಾಸ್ತಮರಡಿ, ಬನಪ್ಪ ಮೆಳವಂಕಿ,

ಗುಂಡು ಪೂಜಾರಿ, ಅಮೃತ ಪೂಜಾರಿ ಅಬಕಾರಿ ಪೇದೆ, ಕಣಕುಂಬಿ ತನಿಖಾ ಠಾಣೆ ಮತ್ತು ಸುನೀಲ ಪಾಟೀಲ, ಎಂ.ಎಫ್.ಕಟಗೆನ್ನವರ ಅಬಕಾರಿ ಪೇದೆ, ಉಪ ವಿಭಾಗ, ಬೆಳಗಾವಿರವರು ದಾಳಿಯಲ್ಲಿ ಪಾಲ್ಗೊಂಡಿರುತ್ತಾರೆ. ಸದರ ಗುನ್ನೆಯಲ್ಲಿ ಜಪ್ತುಪಡಿಸಿದ ವಾಹನ ರೂ: 20,00,000/- ಹಾಗೂ ಮುದ್ದೇಮಾಲು 35,688/- ಹೀಗೆ ಒಟ್ಟು ಮೌಲ್ಯ ರೂ. 20,35,688/- ಆಗುತ್ತದೆ.

Tags: