Belagavi

ಸಮ್ಮಿಶ್ರ ವೈದ್ಯ ಪದ್ಧತಿ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ಮಂದ್ಯಂತರ ಆದೇಶವನ್ನು ಪಾಲಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಪ್ರತಿಭಟನೆ ನಡೆಸಿದರು.

Share

ಬೆಳಗಾವಿ: ಸಮ್ಮಿಶ್ರ ವೈದ್ಯ ಪದ್ಧತಿ ಬಗ್ಗೆ ಸುಪ್ರೀಂ ಕೋರ್ಟ್ ನೀಡಿರುವ ಮಂದ್ಯಂತರ ಆದೇಶವನ್ನು ಪಾಲಿಸಬೇಕು ಎಂದು ಆಗ್ರಹಿಸಿ ಶುಕ್ರವಾರ ಸುವರ್ಣ ಸೌಧದ ಎದುರಿನ ಬಸ್ತವಾಡ ಪ್ರತಿಭಟನಾ ವೇದಿಕೆಯಲ್ಲಿ ರಾಷ್ಟ್ರೀಯ ಇಂಟಿಗ್ರೆಟೆಡ್ ಮೆಡಿಕಲ್ ಅಸೋಸಿಯೇಷನ್ ಸದಸ್ಯರು ಪ್ರತಿಭಟನೆ ನಡೆಸಿದರು.
ಸರ್ಕಾರಿ ಆಯುಷ ಇಲಾಖೆಯಲ್ಲಿ ಖಾಲಿ ಇರುವ ಶಿಕ್ಷಕರ, ವೈದ್ಯಾಧಿಕಾರಿಗಳ, ಕೆಪಿಎಸ್‌ಸಿ ಸಂಸ್ಥೆಯ ಮೂಲಕ ಹುದ್ದೆಗಳನ್ನು ಭರ್ತಿ ಮಾಡಬೇಕು. ಕೇಂದ್ರ ಸರ್ಕಾರಿ ವೈದ್ಯಾಧಿಕಾರಿಗಳಿಗೆ ಮಹಾರಾಷ್ಟ್ರ, ಹರಿಯಾಣಾ ಮಾದರಿಯಲ್ಲಿ ಸಮಾನ ವೇತನ ಜಾರಿಗೊಳಿಸಲು ಪ್ರತಿಭಟನಾಕಾರರು ಆಗ್ರಹಿಸಿದರು.

ಸಂಘದ ಅಧ್ಯಕ್ಷ ಡಾ. ರಾಜಶೇಖರ ಭೂಸನೂರಮಠ, ಡಾ. ಸಿ.ಎಸ್. ಕರಮುಡಿ, ಡಾ. ಬಿ.ಎಲ್. ಕಲ್ಮಠ, ಡಾ. ಕೆ.ಸಿ. ಬಲ್ಲಾಳ, ಡಾ. ತ್ಯಾಗರಾಜ ಸಿ. ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Tags: