Belagavi

ಕ್ಯಾಂಪ್ ಕೇಂದ್ರೀಯ ವಿದ್ಯಾಲಯದ ಅದ್ಧೂರಿ 40ನೇ ವಾರ್ಷಿಕ ಕ್ರೀಡಾಕೂಟ

Share

ಬೆಳಗಾವಿ ಕ್ಯಾಂಪ್‍ನಲ್ಲಿರುವ ಕೇಂದ್ರೀಯ ವಿದ್ಯಾಲಯ ನಂ-2ರ 40ನೇ ವಾರ್ಷಿಕ ಕ್ರೀಡಾ ದಿನವನ್ನು ಮಂಗಳವಾರ ವಿದ್ಯಾಲಯದ ಆಟದ ಮೈದಾನದಲ್ಲಿ ಅತ್ಯಂತ ಅದ್ಧೂರಿಯಾಗಿ ಆಚರಿಸಲಾಯಿತು.
ವಾ.ಓ: ಎಂಎಲ್‍ಐಆರ್‍ಸಿಯ ಕಮಾಂಡೆಂಟ್ ಬ್ರಿಗೇಡಿಯರ್ ಜೋಯದೀಪ್ ಮುಖರ್ಜಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಮುಖ್ಯ ಅತಿಥಿಗಳಿಗೆ ಶಾಲೆಯ ವರ್ಣರಂಜಿತ ಬ್ಯಾಂಡ ತಂಡದಿಂದ ಗೌರವ ವಂದನೆ ನೀಡಲಾಯಿತು. ಪ್ರಾಂಶುಪಾಲರಾದ ಶ್ರೀನಿವಾಸ ರಾಜಾ ಸ್ವಾಗತಿಸಿ ಶಾಲಾವಾರ್ಷಿಕ ವರದಿಯನ್ನು ಮಂಡಿಸಿದರು. 9ರಿಂದ 12ನೇ ತರಗತಿಯ ಗಂಗಾ, ಯಮುನಾ, ಕೃಷ್ಣ ಮತ್ತು ಕಾವೇರಿ ನಾಲ್ಕು ಮನೆಗಳ ವಿದ್ಯಾರ್ಥಿಗಳು ಆಕರ್ಷಕವಾಗಿ ಪಥಸಂಚಲನ ನಡೆಸಿದರು.

: ನಂತರ ಪ್ರಾದೇಶಿಕ ಮತ್ತು ರಾಷ್ಟ್ರೀಯ ಕ್ರೀಡಾ ಆಟಗಾರರ 26 ವಿದ್ಯಾರ್ಥಿಗಳು ಜ್ಯೋತಿಯೊಂದಿಗೆ ಓಡಿ ಜ್ಞಾನ ಮತ್ತು ಜೀವನದ ಜ್ಯೋತಿಯನ್ನು ಬೆಳಗಿಸಿದರು. ಶಾಲೆಯ ವರ್ಣರಂಜಿತ ಬ್ಯಾಂಡ ತಂಡವು ಬ್ಯಾಂಡ ಪ್ರದರ್ಶನವನ್ನು ಪ್ರಸ್ತುತಪಡಿಸಿತು. 6, 8 ಮತ್ತು 7ನೇತರಗತಿಯ ನಾಲ್ವರು ಮನೆ ವಿದ್ಯಾರ್ಥಿಗಳು ವರ್ಣರಂಜಿತ ಪಿಟಿ ವ್ಯಾಯಾಮಗಳು, ಡಂಬಲ್ಸ ವ್ಯಾಯಾಮಗಳನ್ನು ಕ್ರಮವಾಗಿ ಸೂಕ್ತವಾದ ರೀತಿಯಲ್ಲಿ ಪ್ರದರ್ಶಿಸಿದರು. ಒಬ್ಬ ಪ್ರಾಥಮಿಕ ಹುಡುಗನೊಂದಿಗೆ ಮಾಧ್ಯಮಿಕ ಹುಡುಗಿಯರು ಸಂಗೀತದ ಜೊತೆಗೆ ಯೋಗ ನೃತ್ಯವನ್ನು ಪ್ರಸ್ತುತಪಡಿಸಿದರು. ಸೆಕೆಂಡರಿ ಹುಡುಗರು ವಿವಿಧ ಪಿರಮಿಡ ರಚನೆಗಳನ್ನು ಪ್ರದರ್ಶಿಸಿದರು ಪ್ರಾಥಮಿಕ ವಿದ್ಯಾರ್ಥಿಗಳು ಕಪ್ಪೆ ಜಿಗಿತ, ಬಲೂನಗಳನ್ನು ಸಿಡಿಸುವುದು ಮತ್ತು ತಮಾμÉಯ ಕ್ರೀಡಾಕೂಟಗಳನ್ನುಆಯೋಜಿಸಲಾಗಿತ್ತು. 6 ರಿಂದ 12 ವಿದ್ಯಾರ್ಥಿಗಳ ವಿವಿಧ ಟ್ರ್ಯಾಕ್, ಗುಂಪು ಕ್ರೀಡೆಗಳು ಮತ್ತು ಕ್ರೀಡಾಕೂಟಗಳನ್ನು ನಡೆಸಲಾಯಿತು. ಮುಖ್ಯಅತಿಥಿಗಳು ಪ್ರಾದೇಶಿಕ ಮತ್ತು ರಾಷ್ಟ್ರೀಯ ಕ್ರೀಡಾ ಆಟಗಾರರನ್ನು ಸನ್ಮಾನಿಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಬ್ರಿಗೇಡಿಯರ್ ಜೋಯದೀಪ್ ಮುಖರ್ಜಿ ಮಾತನಾಡಿ ಕೇಂದ್ರೀಯ ವಿದ್ಯಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾಗಲು ಮತ್ತು ಈ ಕ್ರೀಡಾ ದಿನದ ಮುಖ್ಯ ಅತಿಥಿಯಾಗಿ ಮನಸ್ಸಿಗೆ ಮುದ ನೀಡುವ ಕ್ರೀಡಾ ದಿನದ ಚಟುವಟಿಕೆಗಳಿಗೆ ಸಾಕ್ಷಿಯಾಗಲು ತುಂಬಾಸಂತೋಷವಾಯಿತು. ಕ್ರೀಡೆ, ಆಟಗಳು, ಸಹ ಪಠ್ಯ ಮತ್ತು ಶೈಕ್ಷಣಿಕವಾಗಿ ಶಾಲೆಯ ಎಲ್ಲಾ ಚಟುವಟಿಕೆಗಳಲ್ಲಿ ವಿದ್ಯಾರ್ಥಿಗಳು ಸಕ್ರಿಯವಾಗಿ ಭಾಗವಹಿಸಿ ದೈಹಿಕವಾಗಿ ಮತ್ತು ಮಾನಸಿಕವಾಗಿ ತಮ್ಮ ಅತ್ಯುತ್ತಮ ಕಾರ್ಯಕ್ಷಮತೆಯನ್ನು ತೋರಿಸಬೇಕೆಂದು ಎಂದು ಕರೆ ನೀಡಿದರು. ಪಿಜಿಟಿ ಜೀವಶಾಸ್ತ್ರ ಶಿಕ್ಷಕಿ ಜಿ.ಕೆ.ವಿನಾಗಯಂ ವಂದಿಸಿದರು.

 


ವೇದಿಕೆಯಲ್ಲಿ ಗಣ್ಯರು, ವಿದ್ಯಾಲಯ ವ್ಯವಸ್ಥಾಪನಾ ಸಮಿತಿ ಸದಸ್ಯರು ಹಾಗೂ ಮಾಧ್ಯಮ ಪ್ರತಿನಿಧಿಗಳು ಉಪಸ್ಥಿತರಿದ್ದರು. ಹೆಚ್ಚಿನ ಸಂಖ್ಯೆಯ ಪೆÇೀಷಕರ ಉಪಸ್ಥಿತಿಯು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿತು. ವಂದೇಮಾತರಂ ಗೀತೆಯೊಂದಿಗೆ ಕ್ರೀಡಾದಿನ ಮುಕ್ತಾಯವಾಯಿತು.

Tags: