Agriculture

ಮಡ್ಡಿ ಭೂಮಿಗಳು ಎಂ.ಬಿ.ಪಾಟೀಲರ ಪ್ರಯತ್ನದಿಂದ ಬಂಗಾರ ಬೆಳೆಯುವ ಭೂಮಿಯಾಗಿವೆ: ಡಾ.ಮಹಾಂತೇಶ ಬಿರಾದಾರ

Share

ನಿರ್ಜನವಾಗಿದ್ದ, ಮಡ್ಡಿ ಭೂಮಿ ಹೊಂದಿದ್ದ ಈ ಪ್ರದೇಶ ಎಂ.ಬಿ.ಪಾಟೀಲರವರ ಪ್ರಯತ್ನದ ಫಲವಾಗಿ ನೀರಾವರಿಗೆ ಒಳಪಟ್ಟು ಇಂದು ಬಂಗಾರವನ್ನು ಬೆಳೆಯುವ ಭೂಮಿಯಾಗಿದೆ. ಭೂಮಿಯ ದರವೂ ಹೆಚ್ಚಿದೆ ಎಂದು ಡಾ.ಮಹಾಂತೇಶ ಬಿರಾದಾರ ಹೇಳಿದರು.

 

ಮಲಘಾಣದ ಲಕ್ಷ್ಮಣ ಶಿವಪ್ಪ ನಿಂಗನೂರ ಅವರ ತೋಟದಲ್ಲಿ ವಿಸ್ಕ್ ಆಗ್ರೋದವರು ಏರ್ಪಡಿಸಿದ ಈರುಳ್ಳಿ ಬೆಲೆ ಕ್ಷೇತ್ರೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಮಲಘಾಣದಿಂದ ರೋಣಿಹಾಳ ರಸ್ತೆ ಸಂಪೂರ್ಣ ಮಡ್ಡಿ ಪ್ರದೇಶವಾಗಿದ್ದು, ಇಡೀ ಭೂಮಿ ಬರಡು ಆಗಿತ್ತು. ಇಂದು ಮುಳವಾಡ ಏತನೀರಾವರಿ, ಮಲಘಾಣ ಪಶ್ಚಿಮ ಕಾಲುವೆ, ಬಬಲೇಶ್ವರ ಶಾಖಾ ಕಾಲುವೆಗಳಿಂದ ಇಡೀ ಪ್ರದೇಶ ಎಲ್ಲಲ್ಲೂ ಹಸಿರುಮಯವಾಗಿ, ನಂದನವನವಾಗಿದೆ. ರೈತರು ಕಬ್ಬು, ಈರುಳ್ಳಿ, ದ್ರಾಕ್ಷಿ, ಬಾಳೆ ಮತ್ತಿತರ ಬೆಳೆ ಬೆಳೆಯುತ್ತಿದ್ದಾರೆ. ಉತ್ತಮ ದರ ದೊರೆತರೆ ನಮ್ಮ ರೈತರ ಬಾಳು ನಿಜವಾಗಿಯೂ ಬಂಗಾರವಾಗುತ್ತದೆ ಎಂದರು.

ಕೇವಲ ಆರು ಎಕರೆ ಭೂಮಿ ಹೊಂದಿದ್ದ ಕಲಕುರ್ಗಿ ಗ್ರಾಮದ ರೈತ ಬಸಪ್ಪ ಆಸಂಗಿಯವರು ಈರುಳ್ಳಿ ಬೆಳೆಯನ್ನು ಬೆಳೆದೆ ಇವತ್ತು 36 ಎಕರೆ ಜಮೀನಿನ ಒಡೆಯರಾಗಿದ್ದಾರೆ. ಅಲ್ಲದೇ, ಈರುಳ್ಳಿ ನೆನಪಿಗಾಗಿ ಬಂಗಾರದ ಈರುಳ್ಳಿಯನ್ನು ಮಾಡಿಸಿ ಪೂಜಿಸುತ್ತಿದ್ದಾರೆ. ನಮ್ಮ ಯುವ ರೈತರಿಗೆ ಇವರು ಮಾದರಿ. ನಮ್ಮ ಗ್ರಾಮದ ಮಹಾಂತೇಶ ಶಿರೂರ ಇಡೀ ದೇಶದ ಕೃಷಿ ಇಲಾಖೆಯ ನೀತಿ, ನಿರ್ವಹಣೆಗಳನ್ನು ರೂಪಿಸುವ ಮಹತ್ವದ ಸಂಸ್ಥೆಯಾದ ಮ್ಯಾನೇಜ್ ಹೈದ್ರಾಬಾದ್ ನಿರ್ದೇಶಕರಾಗಿರುವುದು ಈ ಭಾಗಕ್ಕೆ ಹೆಮ್ಮೆ ಎಂದು ಹೇಳಿದರು.

ಗ್ರಾಮದ ಮುಖಂಡ ಎಸ್.ಎಸ್.ಗರಸಂಗಿ ಮಾತನಾಡಿ, ಇಡೀ ಜಿಲ್ಲೆಗೆ ನೀರಾವರಿಗೆ ಒಳಪಡಿಸಿ, ನಮ್ಮ ಬದುಕನ್ನು ಸಮೃದ್ಧಗೊಳಿಸಿರುವ ಎಂ.ಬಿ.ಪಾಟೀಲರವರನ್ನು ಅನೇಕ ಮನೆಗಳಲ್ಲಿ ಪೂಜಿಸುತ್ತಿದ್ದಾರೆ ಎಂದರು.

ಬಸವನಬಾಗೇವಾಡಿ ಪಿಕೆಪಿಎಸ್ ಅಧ್ಯಕ್ಷ ಸಂಗನಗೌಡ ಚಿಕ್ಕೊಂಡ ಮಾತನಾಡಿ, ಈರುಳ್ಳಿ ಬೆಳೆಗಾರರರು ಅನುಭವಿಸುತ್ತಿರುವ ಸಮಸ್ಯೆಗಳನ್ನು ವಿವರಿಸಿದರು.
ಕೃಷಿ ಮಹಾವಿದ್ಯಾಲಯದ ಡಾ.ರವೀಂದ್ರ ಬೆಳ್ಳಿ, ಡಾ.ಕುಶಾಲ, ಈರುಳ್ಳಿ ಹಾಗೂ ವಿವಿಧ ತರಕಾರಿ ತಳಿಗಳ ಮಾಹಿತಿ ನೀಡಿದರು.
ವಿಸ್ಕ್ ಆಗ್ರೋ ಎಂ.ಡಿ ಸಾತ್ವಿರ್ ರೊಟ್ಟಿ ಸಾಮಾನ್ಯ ರೈತನ ಮಗನಾಗಿ ರೈತರಿಗೆ ನೆರವಾಗುವ ಬೀಜದ ತಯಾರಿಕಾ ಕಂಪನಿ ಆರಂಭಿಸಿದ ಮೊದಲ ಕನ್ನಡಿಗ ಎಂದರು.
ಗ್ರಾಮ್.ಪಂ ಅಧ್ಯಕ್ಷ ಸುರೇಶ ಕೊಠಾರ, ಪಿಕೆಪಿಎಸ್ ಮಾಜಿ ಅಧ್ಯಕ್ಷ ಗಂಗಾಧರ ಚೌಧರಿ, ಅಶೋಕ ನಿಂಗನೂರ, ರಮೇಶ ನಿಂಗನೂರ, ಚಂದ್ರಶೇಖರ ಮಲಘಾಣ, ಬಸವರಾಜ ಪಾಟೀಲ ಮಟ್ಯಾಳ, ಸಂಗಮೇಶ ಉಳ್ಳಾಗಡ್ಡಿ, ಮುತ್ತು ಬಗಲಿ, ಪ್ರಸಾದ ಅಂಬಲಿ, ಸದಾನಂದ ನಿಂಗನೂರ, ಶಂಕರ ಸಿದರೆಡ್ಡಿ ಮತ್ತಿತರರು ಇದ್ದರು.

Tags: