Politics

ರಾಜ್ಯ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣ ವೈಫಲ್ಯ ಆಗಿದೆ .ಮಧು ಬಂಗಾರಪ್ಪ ಹೇಳಿಕೆ

Share

ರಾಜ್ಯ ಸರ್ಕಾರ ಅಭಿವೃದ್ಧಿ ವಿಷಯದಲ್ಲಿ ಸಂಪೂರ್ಣ ವೈಫಲ್ಯ ಆಗಿದೆ, ಸರ್ಕಾರ ಜನತೆಗೆ ಏರೋಪ್ಲೇನ್ ತೋರಿಸುತ್ತಿದೆ, ಬಿಜೆಪಿ ಪಕ್ಷ ಅಲ್ಲ ಇದು
ಬಿಜಿನೆಸ್ ಜನತಾ ಪಾರ್ಟಿ ಆಗಿದೆ ಎಂದು ಕೆಪಿಸಿಸಿ ಹಿಂದುಳಿದ ವರ್ಗಗಳ ರಾಜ್ಯಾಧ್ಯಕ್ಷ ಮಧು ಬಂಗಾರಪ್ಪ ಹೇಳಿದ್ದಾರೆ. ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ರಸ್ತೆ, ಚರಂಡಿ ಸೇರಿದಂತೆ ವಿವಿಧ ಕೆಲಸದಲ್ಲಿ ಹಣ ಒಡೆಯುತ್ತಿದ್ದಾರೆ,

ಬಿಜೆಪಿ ಪಕ್ಷ ದೇಶವನ್ನು ಆಳೋಕೆ ಬಂದಿಲ್ಲ ಎಂದು ಕಿಡಿಕಾರಿದರು. ಇದೇ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನಕುಮಾರ ಕಟೀಲ್ ವಿರುದ್ಧ ವಾಗ್ದಾಳಿ ‌ನಡೆಸಿದರು. ಜಿಹಾದ್ ಹೆಸರಿನಲ್ಲಿ ಕಟೀಲ್ ರಾಜಕೀಯ ಮಾಡುತ್ತಿದ್ದಾರೆ ಕಟೀಲ್‌ಗೆ ಯೋಗ್ಯತೆ ಇದೀಯಾ..? ನಿಜವಾದ ದೇವರು ಅಂಬೇಡ್ಕರ್ ಅವರು, ಸಂವಿಧಾನಕ್ಕೆ ನಾನು ಮೊದಲು ಗೌರವ ಕೊಡುತ್ತೇನೆ, ಪಾರ್ಲಿಮೆಂಟ್ ನಲ್ಲಿ ಹೆಜ್ಜೆ ಇಡೋಕ್ಕೆ ಕಟೀಲ್‌ಗೆ ಯೋಗ್ಯತೆ ಇಲ್ಲ ಕಟೀಲ್‌ಗೆ ನಾಚಿಕೆ ಆಗಬೇಕು, ಹಿಂದುತ್ವದಲ್ಲಿ ಮಾತ್ರ ಕಟೀಲ್ ಹೋಗುತ್ತಾರೆ, ಮುಸ್ಲಿಂರನ್ನು ದೂರು ಇಡುವ ಕೆಲಸ ಆಗುತ್ತಿದೆ ಎಂದರು.

ಇನ್ನೂ ಈ ಸಲ ಬದಲಾವಣೆ ಕಾಂಗ್ರೆಸ್ ಪರ ಬರುತ್ತದೆ‌ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಮಲೆನಾಡು ಭಾಗ ಪ್ರೀತಿ ವಿಶ್ವಾಸದಿಂದ ಇರುತ್ತಿತ್ತು, ಇದೀಗ್ ಧರ್ಮ, ಜಾತಿನಲ್ಲಿ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ, ಬಿಜೆಪಿ ಹಿಂದುತ್ವ ಅಜೆಂಡಾ ನೆಲ‌ ಕಚ್ಚಿದೆ ಎಂದರು. ಇನ್ನೂ ಶಿವಮೊಗ್ಗದ ಸೊರಬದಿಂದ ನಾನು ಕಣಕ್ಕೆ ಇಳಿಯೋದು ಪಕ್ಕಾ ಎಂದರು.

ಪಕ್ಷದಿಂದ ಅರ್ಜಿ ಸಲ್ಲಿಸಿದ್ದೇನೆ ಕಾಂಗ್ರೆಸ್ ಪಕ್ಷ ಟಿಕೆಟ್ ಕೊಡುತ್ತದೆ ಎಂದು ಭರವಸೆ ಇದೆ ಎಂದರು. ಇನ್ನೂ ಸೊರಬದಲ್ಲಿ ಸಹೋದರ ಸವಾಲ್ ಇಲ್ಲ ಎನ್ನುತ್ತಲೇ ಕುಮಾರ್ ಬಂಗಾರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು. ನಮ್ಮ ಮನೆಯ ಪಂಚಾಯತಿ ನಮ್ಮಪ್ಪನವರು ಮಾಡಿದ್ದಾರೆ, ಸಹೋದರ ಸವಾಲ್ ಬರಿಯೋದು ಬೇಡ, ಸಹೋದರ ಸವಾಲ್ ಕೀಲಿ ನಿಮ್ಮ ಕೈಯಲ್ಲಿ ಕೊಡುವುದ ಕಷ್ಟ ಆಗುತ್ತದೆ ಎಂದರು. ಸಹೋದರ ಸವಾಲ್ ಅಂದ್ರೇ ಅಪ್ಪಾಜಿ ಅಭಿಮಾನಿಗಳಿಗೆ ನೋವು ಆಗುತ್ತದೆ, ಕುಮಾರ್ ಬಂಗಾರಪ್ಪಗೆ ಅವರ ಪಕ್ಷ ಟಿಕೆಟ್ ನೀಡುತ್ತದೆ,ನಮ್ಮ ಪಕ್ಷ ನನಗೆ ಟಿಕೆಟ್ ನೀಡುತ್ತದೆ ಎಂದು ಹೇಳಿದರು.

Tags: