Belagavi

ಬೆಳಗಾವಿಗೆ ಮಹಾ ಸಚಿವರ ಭೇಟಿ ಫಿಕ್ಸ: ಕಾರ್ಯಕ್ರಮ ಪಟ್ಟಿ ಬಿಡುಗಡೆ..!

Share

ತೀವ್ರ ವಿರೋಧದ ನಡುವೆಯೇ ಬೆಳಗಾವಿಗೆ ಮಹಾರಾಷ್ಟ್ರದ ಇಬ್ಬರು ಸಚಿವರು ಡಿ.3ರಂದು ಬೆಳಗಾವಿಗೆ ಆಗಮಿಸುವ ಬಗ್ಗೆ ಅಧಿಕೃತ ವೇಳಾಪಟ್ಟಿ ಬಿಡುಗಡೆಯಾಗಿದೆ.

ಹೌದು ಮಹರಾಷ್ಟ್ರ ಸರ್ಕಾರದಿಂದ ಗಡಿ ಜಿಲ್ಲಾ ಉಸ್ತುವಾರಿ ಸಚಿವರಾಗಿ ನೇಮಕಗೊಂಡಿರುವ ಚಂದ್ರಕಾಂತ ಪಾಟೀಲ್, ಶಂಭುರಾಜ ದೇಸಾಯಿ ಡಿಸೆಂಬರ್ 3ರಂದು ಬೆಳಿಗ್ಗೆ 11 ಗಂಟೆಗೆ ಕೊಲ್ಹಾಪುರದಿಂದ ನೇರವಾಗಿ ಬೆಳಗಾವಿಯ ಶಾಹುಪುರದ ಶಿವಾಜಿ ಉದ್ಯಾನಕ್ಕೆ ಆಗಮಿಸಿ ಛತ್ರಪತಿ ಶಿವಾಜಿ ಮಹಾರಾಜ್‍ರ ಪುತ್ಥಳಿಗೆ ಗೌರವ ಸಮರ್ಪಿಸಲಿದ್ದಾರೆ.

ಅಲ್ಲಿಂದ ಹಿಂಡಲಗಾದಲ್ಲಿರುವ ಹುತಾತ್ಮ ಸ್ಮಾರಕಕ್ಕೆ ಭೇಟಿ ಕೊಡಲಿದ್ದಾರೆ. ಇದಾದ ನಂತರ ರಾಮಲಿಂಗಖಿಂಡ ಗಲ್ಲಿಯ ರಂಗುಬಾಯಿ ಬ್ಯುಲ್ಡಿಂಗ್‍ನಲ್ಲಿ ಎಂಇಎಸ್ ಮುಖಂಡರ ಜೊತೆಗೆ ಈ ಇಬ್ಬರು ಸಚಿವರು ಸಭೆ ನಡೆಸಲಿದ್ದಾರೆ. ಬಳಿಕ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಕೊಲ್ಹಾಪುರಕ್ಕೆ ಪ್ರಯಾಣಕ್ಕೆ ಬೆಳೆಸಲಿದ್ದಾರೆ.

Tags: