Belagavi

ಬೆಳಗಾವಿ ನಗರ ಪೊಲೀಸ್ ವ್ಯವಸ್ಥೆಯ ಬಗ್ಗೆ ಶಾಸಕ‌ ಅಭಯ ಪಾಟೀಲರು ತೀವ್ರ ಅಸಮಾಧಾನ

Share

ಬೆಳಗಾವಿ ನಗರ ಪೊಲೀಸ್ ವ್ಯವಸ್ಥೆಯ ಬಗ್ಗೆ ಶಾಸಕ‌ ಅಭಯ ಪಾಟೀಲರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿಂದು ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಇಲ್ಲಿ ಪೊಲೀಸ್ ಆಯುಕ್ತರು, ಡಿಸಿಪಿ, ಎಸಿಪಿ, ಸಿಪಿಐ ಅಷ್ಟೇ ಅಲ್ಲ ಕಳೆದ ಐದಾರು ವರ್ಷಗಳಿಂದ ಒಂದೇ ಕಡೆ ಠಿಕಾಣಿ ಹೂಡಿದವರನ್ನು ಬದಲಾವಣೆ ಮಾಡಬೇಕು. ಇಲ್ಲದಿದ್ದರೆ ಯಾವುದೂ ನಿಯಂತ್ರಣ ಕ್ಜೆ ಬರುವುದಿಲ್ಲ ಎಂದರು.
ಪೊಲೀಸ ಆಯುಕ್ತರ ಕಚೇರಿ ಸ್ಥಾಪನೆಯಾದ ನಂತರ ಸಿಬ್ಬಂದಿಗಳು ಹೆಚ್ಚಾಗಿದ್ದಾರೆ.‌ಆದರೆ ಅಪರಾಧಗಳು ಕಡಿಮೆ ಆಗುತ್ತಿಲ್ಲ. ಇದರ ಜೊತೆಗೆ ಪ್ರಕರಣಗಳ ಪತ್ತೆ ಕೂಡ ಸರಿಯಾಗಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದರು .

ಈ ಹಿನ್ನೆಲೆಯಲ್ಲಿ ನಗರ ಶಾಸಕನಾಗಿ ನಾನು ಇದನ್ನು ಗಂಭೀರವಾಗಿ ಪರಿಗಣಿಸಿ ಬರುವ ಹಿರಿಯ ಅಧಿಕಾರಿಗಳು ಮತ್ತು ಗೃಹ ಸಚಿವರೊಂದಿಗೆ ಮಾತುಕತೆ ಮಾಡುವೆ. ಕೊನೆಯ ಹಂತದಲ್ಲಿ ಸಾರ್ವಜನಿಕರ ಜತೆ ಸಂವಾದ ಕೂಡ ನಡೆಸುವೆ ಎಂದು ಅವರು ಹೇಳಿದರು. ಅಗತ್ಯ ಬಿದ್ದರೆ ಅಧಿವೇಶನದಲ್ಲಿ ಕೂಡ ಇದರ ಬಗ್ಗೆ ಪ್ರಶ್ನೆ ಮಾಡುವುದಾಗಿ ಅಭಯ ಪಾಟೀಲ ಹೇಳಿದರು‌
ಪೊಲೀಸ ಇಲಾಖೆಯಲ್ಲಿ

ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದೇ ಅಪರೂಪ ಆಗಿದೆ. ಹೀಗಾಗಿ ವ್ಯವಸ್ಥೆ ಯನ್ನು ಸರಿದಾರಿಗೆ ತರುವ ನಿಟ್ಟಿನಲ್ಲಿ ಮಾತುಕತೆ ಮಾಡುವುದಾಗಿ ತಿಳಿಸಿದರು.

ಬೆಳಗಾವಿ ನಗರದಲ್ಲಿ ಕೆಲ ಪೊಲೀಸ ಅಧಿಕಾರಿಗಳ ಲಂಚಬಾಕತನದ ಆಡಿಯೋ ಬಹಿರಂಗವಾಗಿದ್ದರ ಬಗ್ಗೆಯೂ ಅಧಿಕಾರಿಗಳೊಂದಿಗೆ ಚರ್ಚೆ ನಡೆಸುವುದಾಗಿ ತಿಳಿಸಿದರು.

Tags: