Belagavi

ಬಸ್ತವಾಡದಲ್ಲಿ ರಸ್ತೆ ಕಾಮಗಾರಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ

Share

ಬೆಳಗಾವಿ ಗ್ರಾಮೀಣ ಕ್ಷೇತ್ರದ ಸಂತಿ ಬಸ್ತವಾಡ ಗ್ರಾಮದ ನಾಯಕ್ ಗಲ್ಲಿಯ ಮುಖ್ಯ ರಸ್ತೆಗಳ ನಿರ್ಮಾಣ ಕಾಮಗಾರಿಗಳಿಗೆ ಶಾಸಕಿ ಲಕ್ಷ್ಮೀ ಹೆಬ್ಬಾಳಕರ ಶನಿವಾರ ಚಾಲನೆ ನೀಡಿದರು.

ಲೋಕೋಪಯೋಗಿ ಇಲಾಖೆಯ ಅನುದಾನದಲ್ಲಿ 50 ಲಕ್ಷ ರೂ. ಗಳನ್ನು ಅವರು ಮಂಜೂರು ಮಾಡಿಸಿದ್ದಾರೆ. ಬೆಳಗಾವಿ ಗ್ರಾಮೀಣ ಕ್ಷೇತ್ರದ ಬಹುತೇಕ ರಸ್ತೆಗಳನ್ನು ಸುವ್ಯವಸ್ಥಿತಗೊಳಿಸಲಾಗಿದೆ. ಎಲ್ಲ ಕಾಮಗಾರಿಗಳೂ ಗುಣಮಟ್ಟದ್ದಾಗಿದ್ದು ಸಾರ್ವಜನಿಕರು ಇವುಗಳ ಸದುಪಯೋಗ ಪಡೆಯಬೇಕು ಎಂದು ಅವರು ಹೇಳಿದರು.

ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಮೊಹಮ್ಮದ್ ಗೌಸ್ ತಹಶೀಲ್ದಾರ, ಬಸಪ್ಪ ಬೀರಮುತ್ತಿ, ಯುವ ಕಾಂಗ್ರೆಸ್ ಮುಖಂಡ ಮೃಣಾಲ್ ಹೆಬ್ಬಾಳ್ಕರ, ವಿಠ್ಠಲ ಅಂಕಲಗಿ, ದೇಮಣ್ಣ ನಾಯಕ್, ಅಜಯ ಚೆನ್ನಿಕುಪ್ಪಿ, ರೇಣುಕಾ ಖಾನಾಪುರ, ಅμÁ್ಫಕ್ ತಹಶೀಲ್ದಾರ, ನೀಶಾ ಚಿಂಗಳೆ, ಮಲ್ಲಿಕಾರ್ಜುನ ರಾಶಿಂಘೆ, ನಿಂಗಪ್ಪ ಚೆನ್ನಿಕುಪ್ಪಿ, ಸರ್ ಜೇವಿಯರ್, ರಾಮಾ ಪಾಟೀಲ ಹಾಗೂ ಮುಂತಾದವರು ಉಪಸ್ಥಿತರಿದ್ದರು.

Tags: