Belagavi

ಕ್ರೀಡೆ ಹಾಗೂ ದೈಹಿಕ ಚಟುವಟಿಕೆಗಳು ಮಕ್ಕಳಿಗೆ ಅತ್ಯವಶ್ಯಕ… ಶ್ರೀನಿವಾಸ ಶಿವಣಗಿ ಹೇಳಿಕೆ..

Share

ಬೆಳಗಾವಿ ಗುರುವಾರ ದಿನಾಂಕ 15/12/22 ರಂದು ನಗರದ ಕ್ಯಾಂಪ್ ಪ್ರದೇಶದಲ್ಲಿರುವ ಎನ್ ಎಸ್ ಪೈ ಪೂರ್ವಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟವನ್ನು ಆಯೋಜನೆ ಮಾಡಲಾಗಿತ್ತು…

ಸುಮಾರು 32 ವರ್ಷಗಳಿಂದ ಕನ್ನಡ ಮತ್ತು ಮರಾಠಿ ಮಾತೃಭಾಷೆಯ ಮಾಧ್ಯಮಗಳಲ್ಲಿ ಶಿಕ್ಷಣ ನೀಡುತ್ತಾ ಬಂದಿರುವ ಬಿ ಇ ಶಿಕ್ಷಣ ಸಂಸ್ಥೆಯ ಎನ್ ಎಸ್ ಪೈ ಪ್ರಾಥಮಿಕ ಶಾಲೆಯು ಇಂದು ತನ್ನ ವಾರ್ಷಿಕ ಕ್ರೀಡಾಕೂಟ ಏರ್ಪಡಿಸಿದ್ದು ವಿದ್ಯಾರ್ಥಿ ಕೇಂದ್ರಿತ ಹಲವಾರು ಕಾರ್ಯಕ್ರಮ ಹಮ್ಮಿಕೊಳ್ಳುವಲ್ಲಿ ಹೆಸರುವಾಸಿಯಾಗಿದೆ…

2022 – 23ರ ಈ ಕ್ರೀಡಾಕೂಟದ ಉದ್ಘಾಟನಾ ಸಮಾರಂಭಕ್ಕೆ ಬೆಳಗಾವಿ ನಗರ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವಿ ಭಜಂತ್ರಿಯವರು ಭಾಗಿಯಾಗಿ ಉದ್ಘಾಟನೆ ಮಾಡಿದರೆ, ಗೌರವ ಅತಿಥಿಗಳಾಗಿ ಜೇ ಬೀ ಪಟೇಲ್ ಮೇಡಂ ಅವರು, ಪಾಲ್ಗೊಂಡಿದ್ದರು…

ಗಣ್ಯರಿಂದ ಉದ್ಘಾಟನೆಯಾದ ಕ್ರೀಡಾಕೂಟದಲ್ಲಿ ಮೊದಲಿಗೆ ಕ್ರೀಡಾ ಧ್ವಜಾರೋಹಣ ಮಾಡಲಾಗಿ, ನಾಡಗೀತೆ, ರಾಷ್ಟ್ರಗೀತೆ ನಂತರ ವಿದ್ಯಾರ್ಥಿಗಳಿಂದ ಸೊಗಸಾದ ಪಥಸಂಚಲನ ಜರುಗಿತು…

ನಂತರ ಕ್ರೀಡಾಜ್ಯೋತಿ ಆಗಮನ, ಪುಷ್ಪಾರ್ಚನೆ ನೆರವೇರಿ, ಪ್ರತಿಜ್ಞಾವಿಧಿ ಭೋದಿಸಿದ ನಂತರ, ಅತಿಥಿ ಅಧ್ಯಕ್ಷರಿಂದ ವಿಧ್ಯಾರ್ಥಿಗಳಿಗೆ ತಮ್ಮ ಹಿತನುಡಿಗಳನ್ನು ಆಡಿದರು…

ಈ ಸಂಧರ್ಭದಲ್ಲಿ ನಮ್ಮ ಸುದ್ದಿವಾಹಿನಿಯೊಂದಿಗೆ ಮಾತನಾಡಿದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ರವಿ ಭಜಂತ್ರಿ, ಶಾಲಾ ಸಂಸ್ಥೆಯ ಕಾರ್ಯದರ್ಶಿಯಾದ ಶ್ರೀನಿವಾಸ್ ಶಿವನಗಿ, ಹಾಗೂ ಮುಖ್ಯಶಿಕ್ಷಕಿಯಾದ ರಾಧಿಕಾ ನಾಯ್ಕ ರವರು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು…

ಈ ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಪದಾಧಿಕಾರಿಗಳು, ಶಿಕ್ಷಣ ಅಧಿಕಾರಿಗಳು, ಶಾಲಾ ಸಿಬ್ಬಂದಿ, ವಿಧ್ಯಾರ್ಥಿ, ಪೋಷಕರು, ಹಲವಾರು ಜನರು ಬಾಗಿಯಾಗಿದ್ದರು..

 

Tags: