Belagavi

ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಪಟ್ಟಣದಲ್ಲಿ ಪಂಚಮಸಾಲಿ ‌ಬೃಹತ್ ಸಮಾವೇಶ

Share

-ಸಮಾವೇಶ ಉದ್ದೇಶಿಸಿ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ
ಡಿಸೆಂಬರ್ ‌19 ಕ್ಕೆ ಸರ್ಕಾರ ಪಂಚಮಸಾಲಿ ‌ಸಮಾಜಕ್ಕೆ 2 ಎ ಮೀಸಲಾತಿ ಘೋಷಣೆ ಆಗಬೇಕು.
ಮೀಸಲಾತಿ ಘೋಷಿಸಲು ರಾಣಿ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಸಂಗೊಳ್ಳಿ ರಾಯಣ್ಣ ಸಿಎಂಗೆ ಸದ್ಭುದ್ಧಿ ದಯಪಾಲಿಸಲಿ ಎಂದರು

ಮುಖ್ಯಮಂತ್ರಿಗಳೇ ಡಿಸೆಂಬರ್ 19ಕ್ಕೆ ಮೀಸಲಾತಿ ಘೋಷಿಸುವುದಾಗಿ ಹೇಳಿದ್ದಾರೆ  ಅಧಿವೇಶನಕ್ಕೆ ಆಗಮಿಸುವ ಸಿಎಂ ಆಯೋಗದ ವರದಿ ಪಡೆದು ಮೀಸಲಾತಿ ‌ಘೋಷಣೆ ಮಾಡಬೇಕು   ಹಲವು ಸಲ ಸಿಎಂ ಬಸವರಾಜ್ ಬೊಮ್ಮಾಯಿ ಮಾತು ತಪ್ಪಿದ್ದಾರೆ

ಈ ಸಲ ಮಾತು ತಪ್ಪಲ್ಲ ಎಂಬ ವಿಶ್ವಾಸ ನಮಗಿದೆ, ಮೀಸಲಾತಿ ಕೊಡಲೇಬೇಕು.  ಒಂದು ವೇಳೆ ಡಿಸೆಂಬರ್ ‌19 ಕ್ಕೆ ಮೀಸಲಾತಿ ಘೋಷಣೆ ಆಗದಿದ್ರೆ ಉಗ್ರ ಹೋರಾಟ ನಡೆಸಲಾಗುವದು.  25 ಲಕ್ಷ ಪಂಚಮಸಾಲಿ ಬಂಧುಗಳಿಂದ ಸುವರ್ಣ ಸೌಧ ಮುತ್ತಿಗೆ ಹಾಕಲಾಗುವದು ಎಂದು ಎಚ್ಷರಿಸಿದರು.  ಸುವರ್ಣಸೌಧ ಎದುರು ಪಂಚಮಸಾಲಿ ವಿರಾಟ ಸಮಾವೇಶ ನಡೆಸಲು ನಿರ್ಧರಿಸಿದ್ದೇವೆ  ಬಸವಣ್ಣ ‌ಲಿಂಗೈಕ್ಯರಾದ ಕೂಡಲಸಂಗಮ ಎಷ್ಟು ಮುಖ್ಯವೋ  ರಾಣಿ ಚೆನ್ನಮ್ಮ ಲಿಂಗೈಕ್ಯರಾದ‌ ಬೈಲಹೊಂಗಲ ನಮಗೆ ಮುಖ್ಯ ಎಂದ ಶ್ರೀ ಗಳು

ಅತಿಹೆಚ್ಚು ಪಂಚಮಸಾಲಿ ಸಮಾಜದ ಮತಗಳು ಬೈಲಹೊಂಗಲದಲ್ಲಿವೆ  95 ಸಾವಿರ ಪಂಚಮಸಾಲಿ ಸಮಾಜದ ಮತಗಳು ಬೈಲಹೊಂಗಲ ಕ್ಷೇತ್ರದಲ್ಲಿವೆ

ಈ ಕಾರಣಕ್ಕೆ ಚೆನ್ನಮ್ಮಳನ್ನು ಉದ್ದೇಶಪೂರ್ವಕವಾಗಿ ಮೂಲೆಗುಂಪು ಮಾಡುವ ಷಡ್ಯಂತ್ರ ನಡೆಸಲಾಗುತ್ತಿದೆ ಎಂದರು.

ಅದಕ್ಕಾಗಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಚೆನ್ನಮ್ಮಳ ಸಮಾಧಿ ಸ್ಥಳ ಅಭಿವೃದ್ಧಿಪಡಿಸಲಿಲ್ಲ  ಚೆನ್ನಮ್ಮಳ ಇತಿಹಾಸ ಗೊತ್ತಾದ್ರೆ ಪಂಚಮಸಾಲಿಗಳು ಬೆಳೆಯುತ್ತಾರೆ  ಎಂಬ ಹುನ್ನಾರ ಮಾಡಿದರು  ಆದರೆ ಇಲ್ಲಿನ ಸಮಾಜ ಒಂದಾಗಿ ಸಮಾಧಿ ಸ್ಥಳ ಅಭಿವೃದ್ಧಿ ಪಡಿಸಲಾಯಿತು

ಮುಂದೆಯೂ ಚೆನ್ನಮ್ಮ ಸಮಾಧಿ ರಾಷ್ಟ್ರೀಯ ‌ಸ್ಮಾರಕ ಮಾಡುವ ನಿಟ್ಟಿನಲ್ಲಿ ಹೋರಾಟ ಜಾರಿ ಇರುತ್ತದೆ ಎಂದರು.
ಬೆಳಗಾವಿ ಜಿಲ್ಲೆ ಬೈಲಹೊಂಗಲದಲ್ಲಿ 2ಎ ಮೀಸಲಾತಿಗೆ ಆಗ್ರಹಿಸಿ ನಡೆಯುತ್ತರುವ ಸಮಾವೇಶದಲ್ಲಿ  ‌ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಲಕ್ಷ್ಮಿ ಹೆಬ್ಬಾಳ್ಕರ್, ಮಹಾಂತೇಶ ದೊಡ್ಡಗೌಡರ

ಮಾಜಿ ಸಚಿವ ವಿನಯ್ ಕುಲಕರ್ಣಿ, ಎ ಬಿ ಪಾಟೀಲ್, ಶಶಿಕಾಂತ ಪಾಟೀಲ್
ರಾಜ್ಯಸಭಾ ಸದಸ್ಯ ಈರಣ್ಣ‌ ಕಡಾಡಿ, ‌ಮಾಜಿ ಶಾಸಕ ವಿಶ್ವನಾಥ ಪಾಟೀಲ್ ಸೇರಿ ಹಲವರು ಉಪಸ್ಥಿತರಿದ್ದರು

Tags: