Belagavi

ಗಡಿ ವಿವಾದ ಹಿನ್ನೆಲೆಯಲ್ಲಿ ಕಾಗವಾಡ ಗಡಿಯಲ್ಲಿ ಡಿವೈಎಸ್‍ಪಿ ಶ್ರೀಪಾದ ಜಲದೆಯವರ ನೇತೃತ್ವದಲ್ಲಿ ಬೆಳಿಗ್ಗೆಯಿಂದ ಬಿಗಿ ಬಂದೋಬಸ್ತ.

Share

ರಾಜ್ಯದ ಗಡಿ ವಿವಾದ ಹಿನ್ನೆಲೆಯಲ್ಲಿ ಮಹಾರಾಷ್ಟ್ರದ ಪುಂಡಪೋಕಳಿಗಳು ಗಡಿಯಲ್ಲಿ ಬಾಲ ಬಿಚ್ಚಬಾರದು ಇದರ ಹಿನ್ನೆಲೆಯಲ್ಲಿ ಗಡಿ ತಾಲ್ಲೂಕುವಾದ ಕಾಗವಾಡದಲ್ಲಿ, ಅಥಣಿ ಡಿವೈಎಸ್ಪಿ ಶ್ರೀಪಾದ ಜಲದೆಯವರ ನೇತೃತ್ವದಲ್ಲಿ ಬೆಳಿಗ್ಗೆ 4 ಗಂಟೆಯಿಂದ ಬಿಗಿ ಪೊಲೀಸ್ ಬಂದೋಬಸ್ತ ಕೈಗೊಂಡಿದ್ದು, ಮಹಾರಾಷ್ಟ್ರದಿಂದ ಕರ್ನಾಟಕದಲ್ಲಿ ಪ್ರವೇಶ ಮಾಡುವ ಎಲ್ಲ ವಾಹನಗಳನ್ನು ತನಿಖೆ ಮಾಡಿ ಬಿಡಲಾಗುತ್ತಿದೆ.

ಮಹಾರಾಷ್ಟ್ರ ರಾಜ್ಯದ ಸಚಿವರು ಬೆಳಗಾವಿಗೆ ಪ್ರವೇಶಿಸುತ್ತಾರೆ, ಇದರ ಹಿನ್ನೆಲೆಯಲ್ಲಿ ಇಡೀ ಜಿಲ್ಲೆಯ ಗಡಿ ಭಾಗಗಳಲ್ಲಿ ಬಂದೋಬಸ್ತ ಕೈಗೊಳ್ಳಲಾಗಿದೆ. ಇದೇ ರೀತಿ ಕಾಗವಾಡದಲ್ಲಿ ಡಿವೈಎಸ್ಪಿ ಶ್ರೀಪಾದ ಜಲದೆ, ಸಿಪಿಐ ರವೀಂದ್ರ ನಾಯ್ಕವಡಿ, ಪಿಎಸ್ಐ ಹಣುಮಂತ ನರಳೆ ಹಾಗೂ ಅವರ ಸಿಬ್ಬಂದಿಗಳು ಬಂದೋಬಸ್ತದಲ್ಲಿ ಪಾಲ್ಗೊಂಡಿದ್ದಾರೆ.
ಚಾಯ್ ಪೇ ಚರ್ಚಾ:

ಡಿವೈಎಸ್ಪಿ ಶ್ರೀಪಾದ ಜಲದೆ ಹಾಗೂ ಸಿಪಿಐ ರವೀಂದ್ರ ನಾಯ್ಕವಡಿ ಇವರು ಮಹಾರಾಷ್ಟ್ರದ ಮಿರಜ ಪೊಲೀಸ್ ಠಾಣೆಯ ಡಿವೈಎಸ್ಪಿ ನಾರಾಯಣ ದೇಶಮುಖ ಹಾಗೂ ಅವರ ಸಿಬ್ಬಂದಿದೊಂದಿಗೆ ಗಡಿಯಲ್ಲಿ ಕೈಗೊಂಡ ಬಂದೋಬಸ್ತದ ಬಗ್ಗೆ ಹಾಗೂ ಬೇರೆ-ಬೇರೆ ವಿಷಯಗಳಲ್ಲಿ ಚಾಯ್ ಪೇ ಚರ್ಚಾ ಮಾಡಿ ಹೊಂದಾಣಿಕೆಯಿಂದ ಯಾವೂ ಕಹಿ ಘಟಣೆಗಳು ಘಟಿಸಬಾರದೆಂಬ ಹಿನ್ನೆಲೆಯಲ್ಲಿ ಚರ್ಚಿಸಿ ಸುಗಮವಾಗಿ ಎರಡು ರಾಜ್ಯಗಳ ಪ್ರಯಾಣಿಕರಿಗೆ ಹೋಗಿ-ಬರಲು ತೊಂದರೆಯಾಗಬಾರದಂತೆ ನಿಗಾ ವಹಿಸಿದ್ದರು. ಸಂಜೆವರೆಗೆ ಯಾವುದೇ ಘಟಣೆ ಸಂಭವಿಸದೆಯಿದಿದ್ದರಿಂದ ಎಲ್ಲೆಡೆ ಸಂತಸ ವ್ಯಕ್ತವಾಗುತ್ತಿತ್ತು.

Tags: