Belagavi

ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ವಿರುದ್ಧ ರೈತರು ಹಿರೇಬಾಗೇವಾಡಿ ಪೊಲೀಸ್ ಠಾಣೆಗೆ ದೂರು

Share

ಬೆಳಗಾವಿ.  ರಾಣಿ ಚನ್ನಮ್ಮ ವಿವಿಯ ವಿಸಿ, ರಿಜಿಸ್ಟ್ರಾರ್, ಗುತ್ತಿಗೆದಾರ ಸೇರಿದಂತೆ ಸಂಬಂಧಿಸಿದ ಅಭಿಯಂತರ ವಿರುದ್ಧ ರೈತರು ದೂರು ದಾಖಲು ಮಾಡಿದ್ದಾರೆ

ಹಿರೇಬಾಗೇವಾಡಿಯ ಗುಡ್ಡದ ಮಲ್ಲಪ್ಪನ ಜಾಗೆಯಲ್ಲಿ ನಿರ್ಮಿಸಲಾಗುತ್ತಿರುವ ಕಟ್ಟಡದ ಹಿನ್ನೆಲೆಯಲ್ಲಿ ರಸ್ತೆ ನಿರ್ಮಾಣದಲ್ಲಿ ರೈತರ ಜಮೀನಿನಲ್ಲಿ ಅತಿಕ್ರಮಣ ಪ್ರವೇಶ , ಜಮೀನಿನ ಹದ್ದು ಬಸ್ತಿ ಕಲ್ಲುಗಳನ್ನು ಕಿತ್ತು ಹಾಕಿದ್ದು, ಸಾಗವಾಣಿ, ಇನ್ನಿತರ ಮರಗಳನ್ನು ಕಡಿತ ಮಾಡಿದ್ದು ಸೇರಿದಂತೆ ಜಮೀನಿನಲ್ಲಿ ಬೆಳೆದ ಫಲವತ್ತಾದ ಬೆಳೆ ನಾಶ ಮಾಡಿದ್ದರ ಬಗ್ಗೆ ದೂರಿನಲ್ಲಿ ಉಲ್ಲೇಖ ಮಾಡಲಾಗಿದೆ.
ಏಳು ಜನ ರೈತರು ಪ್ರತ್ಯೇಕವಾಗಿ ಠಾಣೆಗೆ ದೂರು ನೀಡಿದ್ದಾರೆ ದೂರಿನ ಜೊತೆಗೆ ಅಗತ್ಯ ದಾಖಲೆಗಳನ್ನು ರೈತರು ಲಗತ್ತಿಸಿದ್ದಾರೆ.

ಬೆಳಗಾವಿ ಜಿಲ್ಲಾಧಿಕಾರಿ ನಿತೇಶ ಪಾಟೀಲರು ಸ್ಥಳಕ್ಕೆ ಭೆಟ್ಟಿ ನೀಡಿದ ಸಂದರ್ಭದಲ್ಲಿ ವಿವಿಯವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದರು. ಅಷ್ಟೇ ಅಲ್ಲ ರೈತರಿಗೆ ಯಾವುದೇ ರೀತಿ ತೊಂದರೆ ಆಗದಂತೆ ನೋಡಿಕೊಳ್ಳುವುದಾಗಿ ಭರವಸೆ ನೀಡಿದ್ದರು‌
ಇದೆಲ್ಲದರ ನಡುವೆ ರಾಣಿ ಚನ್ನಮ್ಮ ವಿವಿ ರಿಜಿಸ್ಟ್ರಾರ್ ಅವರು ರೈತರ ವಿರುದ್ಧ ಹೇಳಿಕೆ ನೀಡಿದ್ದು ಹಲವರ ಆಕ್ರೋಶಕ್ಕೆ ಕಾರಣವಾಗಿತ್ತು. ಅಷ್ಟೇ ಅಲ್ಲ ರೈತರ ಒಂದಿಂಚು ಜಾಗೆಯನ್ನು ಅತಿಕ್ರಮಿಸಿಲ್ಲ ಎಂದು ಅವರು ಹೇಳಿದ್ದರು.

ಹೀಗಾಗಿ ಆಕ್ರೋಶಿತಗೊಂಡ ರೈತರು  ವಿಲಾಸ ದಿಗಂಬರ ಜೋಶಿ, ಉಮೇಶ ನಿಂಗಪ್ಪ ರೊಟ್ಟಿ, ಉಳವಪ್ಪ ಬಸವಣ್ಣೆಪ್ಪ ನಂದಿ, ತಮ್ಮಣ್ಣ ರಾಜಶೇಖರ ಗಾಣಿಗೇರ, ಬಸಪ್ಪ ಧರೆಪ್ಪ ಮಂಗಳಗಟ್ಟಿ, ನಾಗರಾಜ ಬಸಪ್ಪ ಮಂಗಳಗಟ್ಟಿ, ಶಾನುರ ಮುಗುಟಸಾಬ ಕರಿದಾವಲ   ದಾಖಲೆ ಸಮೇತ ಠಾಣೆಗೆ ಹೋಗಿ ದೂರು ದಾಖಲು ಮಾಡಿದ್ದಾರೆ.
ದೂರು ಸ್ವೀಕರಿಸಿದ ಸಿಪಿಐ ಅವರು ಮೇಲಾಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಕ್ರಮ ತೆಗೆದುಕೊಳ್ಳುವುದಾಗಿ ಹೇಳಿದರು.

Tags: