ಭಗವದ್ಗೀತಾ ಅಭಿಯಾನ ೧೭ ವರ್ಷಗಳಲ್ಲಿ ರಾಜ್ಯದ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಇವತ್ತು ಬೆಳಗಾವಿಗೆ ಬಂದಿದೆ ಈ ಹಿಂದೆ ಬೆಳಗಾವಿ ನಗರದಲ್ಲಿ ೨ ಭಾರಿ ಈ ಕಾರ್ಯಕ್ರಮ ಆಗಿದೆ ಈ ಸಲದ ಕಾರ್ಯಕ್ರಮ ೨ ಕಾರ್ಯಕ್ರಮಕ್ಕಿಂತ ದೊಡ್ಡ ಪ್ರಮಾಣದ ಕಾರ್ಯಕ್ರಮವಾಗಿದೆ ಅನೇಕ ಹೊಸ ದಾಖಲೆಗಳು ಬೆಳಗಾವಿ ಅಭಿಯಾನದಲ್ಲಿ ಆಗಿವೆ ರಾಜ್ಯಾದ್ಯಂತ ೧೦೦೦ ಶ್ಲೋಕ ಕೇಂದ್ರಗಳು ಆಗಿವೆ ಎಂದು ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಮಠಾಧೀಶ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಹೇಳಿದರು
ಒಂದು ತಿಂಗಳಿನಿಂದ ಬೆಳಗಾವಿ ಜಿಲ್ಲಾದ್ಯಂತ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣಾ ಬೆಳಗಾವಿ ನಗರದ ಲಿಂಗರಾಜು ಕಾಲೇಜು ಮೈದಾನದಲ್ಲಿ ಅದ್ದೂರಿಯಾಗಿ ನೆರವೇರಿತು ಹತ್ತಾರು ಪೂಜ್ಯರ ದಿವ್ಯ ಸಾನಿಧ್ಯದಲ್ಲಿ ಮತ್ತು ಈ ಭಾಗದ ಸಚಿವ ಶಾಸಕರ ಮುಖಂಡರ ಹಾಗು ಮಹಿಳೆ ಮಕ್ಕಳ ಉಪಸ್ಥಿತಿಯಲ್ಲಿ ಅದ್ದೂರಿಯಾಗಿ ಜರುಗಿತು ಮೊದಲಿಗೆ ವೇದಿಕೆ ಮೇಲೆ ದೀಪ ಪ್ರಜ್ವಲನೇ ಮಾಡಿ ಸಾಮೂಹಿಕ ಭಗವದ್ಗೀತೆ ಪಠನೆ ಮಾಡಲಾಯಿತು .
ಸಾನಿಧ್ಯ ವಹಿಸಿ ಮಾತನಾಡಿದ ಸೋಂದಾ ಸ್ವರ್ಣವಲ್ಲಿ ಮಹಾಸಂಸ್ಥಾನ ಮಠದ ಮಠಾಧೀಶ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಮಾತನಾಡಿ ಬೆಳಗಾವಿಯಲ್ಲಿ ಇವತ್ತು ಶ್ರೀ ಭಗವದ್ಗೀತಾ ಅಭಿಯಾನ ಅತಿ ವಿಜೃಂಭಣೆಯಿಂದ ಜರುಗುತ್ತಿದೆ ಭಗವದ್ಗೀತಾ ಅಭಿಯಾನ ಈ ಭಾಗದಲ್ಲಿ ಸರಾಗವಾಗಿ ನಡೆದಿದೆ ಇವತ್ತು ಭಗವಂತನಿಗೆ ಅರ್ಪಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ ೨೦೦೭ ನೇ ಇಸವಿ ಅಕ್ಟೊಬರನಲ್ಲಿ ಪ್ರಾರಂಭವಾದ ಭಗವದ್ಗೀತಾ ಅಭಿಯಾನ ೧೭ ವರ್ಷಗಳಲ್ಲಿ ರಾಜ್ಯದ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಇವತ್ತು ಬೆಳಗಾವಿಗೆ ಬಂದಿದೆ ಈ ಹಿಂದೆ ಬೆಳಗಾವಿ ನಗರದಲ್ಲಿ ೨ ಭಾರಿ ಈ ಕಾರ್ಯಕ್ರಮ ಆಗಿದೆ ಈ ಸಲದ ಕಾರ್ಯಕ್ರಮ ೨ ಕಾರ್ಯಕ್ರಮದ ದೊಡ್ಡ ಪ್ರಮಾಣದ ಕಾರ್ಯಕ್ರಮವಾಗಿದೆ ಅನೇಕ ಹೊಸ ದಾಖಲೆಗಳು ಬೆಳಗಾವಿ ಅಭಿಯಾನದಲ್ಲಿ ಆಗಿವೆ ರಾಜ್ಯಾದ್ಯಂತ ೧೦೦೦ ಶ್ಲೋಕ ಕೇಂದ್ರಗಳು ಆಗಿವೆ.
ಭಾರತವು ವಿಶ್ವಗುರುವಾಗಲು ನಾವು ಬಯಸುತ್ತೇವೆ ಅದರ ತಕ್ಕಂತೆ ನಾವು ತಯಾರಬೇಕು ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ತತ್ವಗಳನ್ನು ಭಗವದ್ಗೀತೆ ಕೊಡುತ್ತದೆ ಅನೇಕ ಸಂತರ ಸಂಘಟನೆ ಪರಿಶ್ರಮ ಫಲವಾಗಿ ಈ ಭಗವದ್ಗೀತೆ ಅಭಿಯಾನದಲ್ಲಿ ೧೦ ನೇ ಅದ್ಯಾಯ ಕಲಿಸಲಾಗುತ್ತಿದೆ ೧೦ನೇ ಅಧ್ಯಾಯದಲ್ಲಿ ದೇವರನ್ನ ಎಲ್ಲಿ ಎಲ್ಲಿ ನೋಡಬೇಕು ಎಂಬುದನ್ನು ಅರಿತುಕೊಳ್ಳಬಹುದು ದೇವರು ಎಲ್ಲಾ ಕಡೆ ಇದ್ದಾನೆ ನಿಜ ಆದರೆ ಎಲ್ಲಾಕಡೆ ಒಮ್ಮೆ ನೋಡಲು ನಮಗೆ ಸಾಧ್ಯವಿಲ್ಲ ಎಲ್ಲಾ ಜೀವಿಗಳ ಒಳಗಡೆ ಭಗವಂತ ಅಂತರಯಾಮಿಯಾಗಿದ್ದಾನೆ ಎಂದು ನಾವೆಲ್ಲ ನೋಡಬೆಕು ಎಂದರು .
ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಗಳು ಪೇಜಾವರ ಮಠ ಉಡುಪಿ ಮಾತನಾಡಿ ಆದ್ಯಾತ್ಮ ಸಾಧನೆ ಮಾಡಲು ಕಾಡಿಗೆ ಹೋಗಬೇಕಿಲ್ಲ ಸಮಾಜದಲ್ಲಿದ್ದುಕೊಂಡು ದೈನಂದಿನ ಕಾರ್ಯ ಮಾಡುತ್ತಾ ಸಾಧನೆ ಮಾಡಬಹುದು ಆದ್ಯಾತ್ಮಿಕ ಸಾಧನೆ ಬೇರೆ ವೃತ್ತಿಜೀವನ ಬೇರೆ ಅಲ್ಲ ಯಾರೊನ್ನ ನಾವು ದೇವರು ಎಂದು ಪೂಜಿಸುತ್ತೇವೋ ಅನುಗೃಹ ಬೇಕು ಅಂದು ಪೂಜೆ ಮಾಡುತ್ತಿದ್ದೆವೋ ಅವನು ಈ ಮಾತನ್ನು ಹೇಳುತ್ತಿದ್ದಾನೆ ಸಿದ್ದಿ ಪಡೆಯಲು ಒಂದೇ ಮಾರ್ಗ ಕರ್ತವ್ಯ ಏನಿದೆ ವೃತ್ತಿ ಏನಿದೆ ಅದರ ಮೂಲಕ ನಾರದನನ್ನ ಮಾಡು ಸಿದ್ದಿ ಪಡೆಯುತ್ತೀಯಾ ಪ್ಪ್ರತಿಯೊಬ್ಬನು ವೃತ್ತಿಗೆ ಅಂಟಿಕೊಳ್ಳುವುದು ಅನಿವಾರ್ಯ ಎಂದರು
ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಮಾತನಾಡುತ್ತಾ ಭಗವದ್ಗೀತಾ ಅಭಿಯಾನದ ಮಹಾಸಮರ್ಪಣಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದು ಖುಷಿಯ ವಿಚಾರ ಭಾರತ ಅನೇಕ ದೃಷ್ಠಿಯಿಂದ ಇವತ್ತು ಮುಂದೆ ಹೋಗುತ್ತಿದೆ ಜಗತ್ತಿನ ೫ ನೇ ಅತಿದೊಡ್ಡ ಶಕ್ತಿ ಭಾರತವಾಗಿದೆ ನಮ್ಮ ಭಾರತ ಎಲ್ಲಾ ರೀತಿ ರಂಗದಲ್ಲಿ ಮುಂದೆ ಹೋಗಿದೆ ನಮ್ಮ ದೇಶವನ್ನ ಗುಲಾಮಿತನಕ್ಕೆ ತಳ್ಳಿ ನಮ್ಮ ಮೇಲೆ ದಬ್ಬಾಳಿಕೆ ಮಾಡಿತ್ತೋ ಅವರನ್ನ ಹಿಂದೆ ಹಾಕಿದೆ ಮೊಬೈಲ್ ತಯಾರಿ ಮಾಡುವುದರಲ್ಲಿ ಮುಂದೆ ಇದ್ದು ಇಲ್ಲಿಯವರೆಗೂ ೯೦ಸಾವಿರ ಕೋಟಿ ರೂಪಾಯಿ ಮೊಬೈಲನ್ನ ರಫ್ತು ಮಾಡಿದ್ದೇವೆ ಆರ್ಥಿಕತೆಯಲ್ಲಿ ನಾವು ಮುಂದೆ’ಇದ್ದೇವೆ ಜಗತ್ತಿನ ಅತ್ಯಂತ ಹೂಡಿಕೆ ಸ್ಥಾನ ವಿಶ್ವಸಾರ್ಹ ದೇಶ ಅದು ಭಾರತವಾಗಿದೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರದಿಂದ ಅಭಿವೃದ್ಧಿ ಹೊಂದಿದ ರಾಷ್ಟ್ರವಾಗಿ ನಮ್ಮ ಭಾರತ ಪರಿವರ್ತನೆಯಾಗಿದೆ ಎಂದರು .
ರಾಜ್ಯಸಭಾ ಸಂಸದ ಸುಧಾಂಶು ತ್ರಿವೇದಿ ಮಾತನಾಡಿ, ಶ್ರೀಮದ್ ಭಗವದ್ಗೀತೆ ಜಗತ್ತಿನ ಯಾವುದೇ ಗ್ರಂಥಗಳಿಗಿಂತ ಶ್ರೇಷ್ಠವಾಗಿದೆ. ಜಗತ್ತಿನ ಪ್ರಮುಖ ವಿದೇಶಿ ವಿಜ್ಞಾನಿಗಳು ಭಗವದ್ಗೀತೆಯಿಂದ ಸ್ಫೂರ್ತಿ ಪಡೆದು ಸಂಶೋಧನೆ ನಡೆಸಿದ್ದಾರೆ. ಅವರ ಸಾಕ್ಷ್ಯವೂ ಲಭ್ಯವಾಗಿದೆ. ಆ ವಿಜ್ಞಾನಿಗಳನ್ನು ನಾವು ಹಿಂದೂ ಧರ್ಮಕ್ಕೆ ಆಹ್ವಾನಿಸಲಿಲ್ಲ, ಸ್ವಯಂಪ್ರೇರಿತವಾಗಿ ಅವರು ಭಗವದ್ಗೀತೆಯಿಂದ ಸ್ಫೂರ್ತಿ ಪಡೆದರು ಮತ್ತು ದೊಡ್ಡ ಸಂಶೋಧನೆಗಳನ್ನು ಮಾಡಿದರು. ಶ್ರೀಕೃಷ್ಣನು ಗೀತೆಯಲ್ಲಿ “ಸ್ವಧರ್ಮವು ಮರಣ, ಪರಧರ್ಮವು ಭಯಾನಕ” ಎಂದು ಹೇಳಿದ್ದಾನೆ. ನಿಮ್ಮ ಧರ್ಮವನ್ನು ಅಂದರೆ ಕರ್ತವ್ಯಗಳನ್ನು ಸರಿಯಾಗಿ ಅನುಸರಿಸಿ, ಯಾವುದೇ ಸಮಸ್ಯೆ ಇರುವುದಿಲ್ಲ ಎಂಬುದು ಈ ಸಂದೇಶದ ಸಾರವಾಗಿದೆ. ಭಗವದ್ಗೀತೆಯ ಸಂದೇಶವನ್ನು ಅನುಸರಿಸುವ ಮೂಲಕ ಭಾರತವು ತನ್ನ ಗತ ವೈಭವವನ್ನು ಮರಳಿ ಪಡೆಯಲು ವರ್ತಮಾನವನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು.
ಈ ಸಂದರ್ಭದಲ್ಲಿ ಸಂಸದ ಅಣ್ಣಾ ಸಾಹೆಬ ಜೊಲ್ಲೆ ,ಸಂಸದೆ ಮಂಗಲಾ ಅಂಗಡಿ , ಅರವಿಂದರಾವ ದೇಶಪಾಂಡೆ ,ವಿಧಾನ ಪರಿಷತ್ತ ಸದಸ್ಯ ಮಹಾಂತೇಶ ಕವಟಗಿಮಠ ,ಮಾಜಿ ಶಾಸಕ ವಿಶೇಶ್ವರ ಹೆಗಡೆ ಕಾಗೇರಿ ,ಶಾಸಕ ಅಭಯ ಪಾಟೀಲ ,ಮಾಜಿ ಶಾಸಕ ಸಂಜಯ ಪಾಟೀಲ ,ರಾಜ್ಯಸಭಾ ಸದಸ್ಯ ಈರಣ್ಣಾ ಕಡಾಡಿ ,ಮೇಯರ ಶೋಭಾ ಸೋಮನಾಚೆ ,ಉಪಮೇಯರ ರೇಶ್ಮಾ ಪಾಟೀಲ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು