Belagavi

ಬೆಳಗಾವಿ ಜಿಲ್ಲಾ ಕಿವುಡರ ಸಂಘದಿಂದ ರಾಜ್ಯ ಮಟ್ಟದ ಸ್ಪರ್ಧೆಗಳು

Share

ಬೆಳಗಾವಿ ಜಿಲ್ಲಾ ಕಿವುಡರ ಸಂಘದ ವತಿಯಿಂದ 12ನೇ ಕರ್ನಾಟಕ ರಾಜ್ಯ ಕಿವುಡರ ಸ್ಪರ್ಧೆಗೆ ಚಾಲನೆ ನೀಡಲಾಯಿತು.

ಮಂಗಳವಾರ ಈ ಸ್ಪರ್ಧೆಗಳ ಉದ್ಘಾಟನಾ ಸಮಾರಂಭವು ಬೆಳಗಾವಿಯ ನೆಹರುನಗರದ ಜಿಲ್ಲಾ ಕ್ರೀಡಾ ಮೈದಾನದಲ್ಲಿ ನಡೆಯಿತು.
ಈ ಉದ್ಘಾಟನಾ ಸಮಾರಂಭದಲ್ಲಿ ಬೆಳಗಾವಿ ಜಿಲ್ಲಾ ಕಿವುಡರ ಸಂಘದ ಅಧ್ಯಕ್ಷ ಅನಿಲ ಪೋತದಾರ, ಅರುಣಕುಮಾರ ಎಂ.ಜಿ., ಸುನೀಲ ಕಂದುಕರ ಮತ್ತಿತರರು ಉಪಸ್ಥಿತರಿದ್ದರು.

ಅನಿಲ ಪೋತದಾರ ಈ ಸ್ಪರ್ಧೆಯ ಮಹತ್ವ ತಿಳಿಸಿದರು. ಸ್ಪರ್ಧೆಯಲ್ಲಿ ಭಾಗವಹಿಸಲು ಆ ಆಟವನ್ನು ಅಭ್ಯಾಸ ಮಾಡುವುದು ಬಹಳ ಮುಖ್ಯ. ಮುಂದೆ ನಿಮಗೆ ಬೇಕಾದ ಬೆಂಬಲ ಮತ್ತು ಸಹಾಯವನ್ನು ಪಡೆಯಲು ಸರ್ಕಾರಕ್ಕೆ ಹೇಳಿಕೆ ನೀಡುತ್ತೇವೆ ಎಂದು ಭರವಸೆ ನೀಡಿದರು..


ಈ ಸ್ಪರ್ಧೆಗಳು ಗುರುವಾರ ಮುಕ್ತಾಯಗೊಳ್ಳಲಿವೆ. ಈ ಸಂದರ್ಭದಲ್ಲಿ ಅಖಿಲ್ ಶೇಖ್, ಕಿರಣ್ ನೇಗಿನಹಾಳ್ ಮೊದಲಾದವರು ಉಪಸ್ಥಿತರಿದ್ದರು.

Tags: