Belagavi

ಕನ್ನಡ ಮರಾಠಿ ಭಾಷಿಕರಿಗೆ ಜಗಳ ಮಾಡಿಸಿದ ಸಂಪತಕುಮಾರ ದೇಸಾಯಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ದಲಿತ ಸಂಘರ್ಷ ಸಮಿತಿ ಆಗ್ರಹ

Share

ಬೆಳಗಾವಿ

ಜಾತಿ ನಿಂದನೆ ಮಾಡಿ ಅದನ್ನು ಮರೆ ಮಾಚಿ ಕನ್ನಡ ಮರಾಠಿ ಭಾಷಿಕರಿಗೆ ಜಗಳ ಮಾಡಿಸಿದ ಸಂಪತಕುಮಾರ ದೇಸಾಯಿ ಹಾಗೂ ಕನ್ನಡ‌ ಬಾವುಟ ಹಾರಿಸಿದ ವಿದ್ಯಾರ್ಥಿ ಮೇಲೆ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ನಗರದ ಅಂಬೇಡ್ಕರ್ ಉದ್ಯಾನವನದಿಂದ ಶನಿವಾರ ದಲಿತ ಸಂಘರ್ಷ ಸಮಿತಿ ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಬೆಳಗಾವಿ ತಾಲೂಕಿನ ತುರುಮರಿ ಗ್ರಾಮದ ದಲಿತ ವಿದ್ಯಾರ್ಥಿ ಬೆಳಗಾವಿ ನಗರದ ಗೋಗಟೆ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದು, ಈತ ದಲಿತನಿರುವ ಕಾರಣ ಅದೇ ಕಾಲೇಜಿನಲ್ಲಿ ಅವರ ವರ್ಗದಲ್ಲಿರುವ ವಿದ್ಯಾರ್ಥಿ ಹಾಗೂ ಆತನ ಸಹಚರರು ಸೇರಿಕೊಂಡು ನೀನು ಬೇರೆ ಜಾತಿಯವನ್ನು ಇದ್ದೀಯಾ, ನಮ್ಮ ಜೊತೆಗೆ ಸೇರಬೇಡ ಎಂದು ಅವಾಚ್ಯ ಶಬ್ಧಗಳಿಂದ ನಿಂದಿಸಿ ಅವಮಾನಿಸುತ್ತಿದ್ದರು ಎಂದು ಪ್ರತಿಭಟನಾಕಾರರು ಮನವಿಯಲ್ಲಿ ತಿಳಿಸಿದ್ದಾರೆ.

ಪದೇ ಪದೇ ಈ ಥರ ಘಟನೆಗಳು ಮರುಕಳಿಸಿದರೂ ದಲಿತ ವಿದ್ಯಾರ್ಥಿ ವಿದ್ಯಾಭ್ಯಾಸದ ಕಾರಣಕ್ಕಾಗಿ ಸಹಿಸಿಕೊಂಡು‌ ಹೋಗುತ್ತಿದ್ದ. ನ.30 ರಂದು ಕಾಲೇಜಿನ ಕಾರ್ಯಕ್ರಮದಲ್ಲಿಯೂ ಸಹ ಹಿಯಾಳಿಸಿ, ನಿಂದಿಸಿ ಜಾತಿ ಅವಮಾನ ಮಾಡಿದ್ದಾರೆ. ನಂತರ ನಿನ್ನ ಮೇಲೆ ಜಾತಿ ನಿಂದನೆ ಪ್ರಕರಣ ದಾಖಲಿಸುತ್ತೇನೆ ಎಂದು ಹೇಳಿದಾಗ ಅದೇ ದಿನ ನಡೆದ ಕಾರ್ಯಕ್ರಮದಲ್ಲಿ ನೃತ್ಯ ಮಾಡುವಾಗ ದಲಿತ ವಿದ್ಯಾರ್ಥಿಯ ಕಾಲು ತುಳಿದು ಜಗಳ ಮಾಡಿದ್ದಾರೆ. ಇತನ ಜೊತೆಗೆ ಜಗಳ ಮಾಡಿದರೆ ನಮ್ಮ ಮೇಲೆ ಬರುತ್ತದೆ ಎಂದು ಸಂಪತಕುಮಾರ ದೇಸಾಯಿ ಜೊತೆ ಸೇರಿಕೊಂಡು ಕನ್ನಡ ಮರಾಠಿ ವಿಷಯ ಮಾಡಿ ಕನ್ನಡ‌ ಬಾವುಟ ಕಿತ್ತು ಹಾಕಿದ್ದಾನೆ ಎಂದು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಮನವಿಯಲ್ಲಿ ಆರೋಪಿಸಿದ್ದಾರೆ.


ಸಂಪತಕುಮಾರ ದೇಸಾಯಿ ಹಾಗೂ ಜಾತಿ ನಿಂದನೆ ಮಾಡಿದ ವಿದ್ಯಾರ್ಥಿ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಉಳಿದ ವಿದ್ಯಾರ್ಥಿಗಳ ಭವಿಷ್ಯ ಹಾಳಾಗದಂತೆ ನೋಡಿಕೊಳ್ಳಬೇಕು. ಇಲ್ಲದಿದ್ದರೇ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.

ಸಿದ್ಧಪ್ಪ ಕಾಂಬಳೆ, ಮಲ್ಲೇಶ ಚೌಗುಲೆ, ಮಹಾಂತೇಶ ತಳವಾರ, ರಮೇಶ ಕೋಲ್ಕಾರ, ರಾಜಪ್ಪ ಕಾಂಬಳೆ, ಸಂತೋಷ ಕಾಂಬಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags: