Belagavi

ತೃತೀಯ ಲಿಂಗಿಗಳಿಗೆ ಸಾಮಾಜಿಕ ಹಕ್ಕುಗಳ ಕುರಿತು ಅರಿವು ಕಾರ್ಯಾಗಾರ

Share

ಹ್ಯುಮಾನಿಟಿ ಸಂಸ್ಥೆಯ ಸಂಗಮ ಯೋಜನೆಯಡಿ, ತೃತೀಯ ಲಿಂಗಿಗಳಿಗೆ ಸಾಮಾಜಿಕ ಹಕ್ಕುಗಳ ಕುರಿತು ಅರಿವು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು.

ಸೋಮವಾರ ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರಿದ ಅಧ್ಯಕ್ಷ ಮುರುಳಿ ಮನೋಹರ ರೆಡ್ಡಿ ಅವರು ನಾನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಬಂದಿಲ್ಲ. ಓರ್ವ ನಾಗರಿಕನಾಗಿ ಕಾನೂನು ವ್ಯಕ್ತಿಯಾಗಿ ಒಂದಿಷ್ಟು ವಿಚಾರ ನಿಮ್ಮ ಜೊತೆ ಹಂಚಿಕೊಳ್ಳುತ್ತಿದ್ದೇನೆ. ತೃತೀಯ ಲಿಂಗಿಗಳು ಮೊದಲು ತಮ್ಮಲ್ಲಿರುವ ಕೀಳರಿಮೆ ಬಿಟ್ಟು, ನಿಮ್ಮನ್ನು ನೀವು ಶ್ರೇಷ್ಠರು ಎಂಬ ಭಾವನೆಯಿಂದ ನೋಡಬೇಕು. ಗಂಡು ಹೆಣ್ಣು ಸೃಷ್ಟಿಯಂತೆ ತೃತೀಯ ಲಿಂಗಗಳ ಕುರಿತು ರಾಮಾಯಣದಲ್ಲಿ ಉಲ್ಲೇಖವಿದೆ. ತೃತೀಯ ಲಿಂಗಗಳು ತಮ್ಮ ಐತಿಹಾಸಿಕ ಹಿನ್ನಲೆಯ ಕುರಿತು ತಿಳಿಯಬೇಕು. ಪುಣ್ಯ ಕಾರ್ಯಕ್ರಮಗಳಲ್ಲಿ ನಿಮ್ಮ ಆರ್ಶಿವಾದ ಪ್ರಮುಖವಾಗಿದೆ. ಇದನ್ನು ನಾವು ಹೇಳುತ್ತಿಲ್ಲ. ಇದರ ಕುರಿತು ಸುಪ್ರೀಂ ಕೋರ್ಟ್ ತಿಳಿಸುತ್ತದೆ. ಕಾಲಕ್ರಮೇಣ ಜನರಲ್ಲಿ ತಿಳುವಳಿಕೆ ಬಂದಾಗ ಮಾತ್ರ ತೃತೀಯ ಲಿಂಗಿಗಳನ್ನು ಸಮಾನರಾಗಿ ನೋಡುವಂತಹ ಮನೋಭಾವನೆ ಬರುತ್ತದೆ. ನಿಮಗೆ ಸಿಗಬೇಕಾದ ಹಕ್ಕುಗಳನ್ನು ಪಡೆಯಲು ನಿಮಗೆ ಕಾನೂನು ಸೇವಾ ಪ್ರಾಧಿಕಾರವು ಸಹಕಾರ ನೀಡುತ್ತದೆ ಎಂದು ಧೈರ್ಯ ತುಂಬಿದರು.

ಡಿಸಿಪಿ ಪಿ.ವಿ.ಸ್ನೇಹಾ ಅವರು ಮಾತನಾಡಿ ಇತರೆ ಜಿಲ್ಲೆಗಳಿಗೆ ಹೋಲಿಸಿದರೇ ನಮ್ಮ ಜಿಲ್ಲೆಯಲ್ಲಿನ ತೃತೀಯ ಲಿಂಗಿಗಳು ಭಿಕ್ಷಾಟನೆ ಬಿಟ್ಟು, ಸ್ವ ಉದ್ಯೋಗಗಳಲ್ಲಿ ತೊಡಗಿದ್ದಾರೆ. ವಿದ್ಯಾಭ್ಯಾಸ ಮತ್ತು ಕೌಶಲ್ಯಗಳು ನಿಮ್ಮ ಅಭಿವೃದ್ಧಿಗೆ ಪೂರಕ ಅಂಶಗಳು, ಇವುಗಳನ್ನು ಮೈಗೂಡಿಸಿಕೊಳ್ಳಿ. ಕಾನೂನು, ಸಂಘ, ಸಂಸ್ಥೆಗಳ ಸಹಾಯದಿಂದ ಗುರುತಿನ ಚೀಟಿ ಪಡೆದುಕೊಳ್ಳಿ. ದೌರ್ಜನ್ಯಗಳಿಂದ ದೂರವಾಗಬೇಕು ಎಂದರೆ ಜ್ಞಾನದ ಅವಶ್ಯಕತೆಯಿದೆ. ಆದ್ದರಿಂದ ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಹರಿಸಬೇಕು. ನಿಮ್ಮ ಸುರಕ್ಷಿತಗೆ ನಮ್ಮ ಇಲಾಖೆ ಇದೆ ಎಂದರು.

ತೃತೀಯ ಲಿಂಗಿ ಪ್ರಕಾಶ ಮರಾಠೆ(ನಮೃತಾ) ಅವರು ಮಾತನಾಡಿ ಸರಕಾರವು ತೃತೀಯ ಲಿಂಗಿಗಳಿಗೆ ಶೇ.1ರಷ್ಟು ನೀಡಿದ ಮೀಸಲಾತಿಯು ನಮ್ಮ ಅಭಿವೃದ್ಧಿಗೆ ಸಾಕಾಗುತ್ತಿಲ್ಲ. ಇನ್ನೂ ಹೆಚ್ಚಿನ ಮೀಸಲಾತಿ ನೀಡಬೇಕು ಎಂದು ಮನವಿ ಮಾಡಿಕೊಂಡರು.

: ಸಂಗಮ ಯೋಜನೆಯ ಕಾನೂನು ಸಲಹೆಗಾರರಾದ ಕಿರಣ ಬೇಡಿ ಮಾತನಾಡಿ ನಮ್ಮ ಸಮುದಾದಯದವರು ಜೋಗಪ್ಪ ಕಾಯಕವನ್ನೇ ಕುಲ ಕುಸುಬವನ್ನಾಗಿ ಮಾಡಿಕೊಂಡಿದ್ದಾರೆ. ಸವದತ್ತಿ ಯಲ್ಲಮ್ಮ ದೇವಸ್ಥಾನದಲ್ಲಿ ನಮಗೆ ಸಿಗಬೇಕಾದ ಸೌಲಭ್ಯಗಳು ಸಿಗುತ್ತಿಲ್ಲ. ಹೀಗಾಗಿ ನಮಗೆ ಸಿಗಬೇಕಾದ ನ್ಯಾಯ ಸಮ್ಮತ ಸೌಲಭ್ಯಗಳು ಸಿಗುವಂತೆ ಮಾಡಿ ಎಂದು ಕೇಳಿಕೊಂಡರು.

ಕಾರ್ಯಕ್ರಮದಲ್ಲಿ ಮಹಿಳಾ ಮತ್ತು ಮಕ್ಕಳ ಇಲಾಖೆ ಅಧಿಕಾರಿ ರೂಪಾ ಶಿಂಧೆ, ಮಾನವ ಹಕ್ಕುಗಳ ಸದಸ್ಯೆ ಸುನೀತಾ ದೇಸಾಯಿ, ಹ್ಯುಮಾನಿಟಿ ಸಂಸ್ಥೆ ಅಧ್ಯಕ್ಷೆ ತಾನಾಜಿ ಸಾವಂತ, ಸ್ನೇಹಜ್ಯೋತಿ ಎಂಎಸ್‍ಎಂಟಿಐ ಯೋಜನಾಧಿಕಾರಿ ಪಲ್ಲವಿ ಹಡಪದ, ಸಂಗಮ ಯೋಜನೆಯ ನಿರ್ದೇಶಕ ತೃತೀಯ ಲಿಂಗಿ ನಿಷಾ ಜಗದೀಶ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Tags: