ನೀರು ಕುಡಿಯಲು ಕೃಷಿ ಹೊಂಡಕ್ಕೆ ಇಳಿದಿದ್ದ ಇಬ್ಬರು ಸಹೋದರರು ಸಾವನ್ಬಪ್ಪಿರುವ ಘಟನೆ ಜಿಲ್ಲೆಯ ಬಸವನಬಾಗೇವಾಡಿ ತಾಲೂಕಿನ ಹುಣಶ್ಯಾಳ ಪಿ.ಬಿ.ಗ್ರಾಮದ ಜಮೀನಿನಲ್ಲಿ ಶನಿವಾರ ದುರ್ಘಟನೆ ಸಂಭವಿಸಿದೆ.
ಮೃತರನ್ನು ರಾಯಪ್ಪ ಬಸವರಾಜ ಒಣಕಿಹಾಳ (12) ಹಾಗೂ ಮಹಾಲಿಂಗರಾಯ ಬಸವರಾಜ ಒಣಕಿಹಾಳ (7) ಎಂದು ಗುರುತಿಸಲಾಗಿದೆ. ಬೆಳಗ್ಗೆ ಎಂದಿತೆ ಹುಣಶ್ತಾಳ ಪಿ.ಬಿ.ಗ್ರಾಮದ ಪ್ರಾಥಮಿಕ ಶಾಲೆ ಹೋಗಿದ್ದಾರೆ. ಇಂದು ಶನಿವಾರ ಇರುವ ಕಾರಣ ಶಾಲೆ ಬೇಗ ಮುಗಿದ ಕಾರಣ ಜಾನುವಾರು ಕಾಯಲು ಅಣ್ಣ_ತಮ್ಮ ವ್ಯಕ್ತಿಯೊಬ್ಬರ ಜಮೀನಿಗೆ ಹೋಗಿದ್ದಾರೆ. ಇಬ್ಬರು ನೀರು ಕುಡಿಯಲು ಕೃಷಿ ಹೊಂಡಕ್ಕೆ ಇಳಿದಿಧ್ದಾರೆ.
ಈಜು ಬರದ ಕಾರಣ ಕೃಷಿ ಹೊಂಡದಿಂದ ಮೇಲೆ ಬರಲು ಸಾಕಷ್ಟು ಪ್ರಯತ್ನಿಸಿದ್ದಾರೆ. ಕೂಗಾಡಿದಾಗ ಎತ್ತಿನ ಬಂಡಿಯಲ್ಲಿ ಹೋಗುತ್ತಿದ್ದವರು ತಕ್ಷಣ ಬಂದು ಕಾಪಾಡಲು ಪ್ರಯತ್ನಿಸಿದ್ದರು. ಇದು ಫಲಿಸದೇ ಸಹೋದರರು ಕೃಷಿ ಹೊಂಡದಲ್ಲಿ ಮುಳುಗಿ ಸಾವೀಗಿಡಾಗಿದ್ದಾರೆ.
ಮೃತರ ತಂದೆಗೆ ಒಟ್ಟು ಮೂವರು ಗಂಡು ಮಕ್ಕಳಿದ್ದು, ಅವರಲ್ಲಿ ಇಬ್ಬರು ಸಾವನ್ನಪ್ಪಿರುವ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಸವನಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.