Belagavi

ನೇಕಾರರ ಬಹುದಿನಗಳ ಬೇಡಿಕೆ ಈಡೇರಿಕೆಯ ಐತಿಹಾಸಿಕ ನಿರ್ಣಯ   ವಿವಿಧ ಸಮುದಾಯಗಳಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ವಿಶೇಷ ಸನ್ಮಾನ

Share

ಬೆಳಗಾವಿ ಸುವರ್ಣಸೌಧ   ನೇಕಾರರ  ಬಹುದಿನಗಳ ಬೇಡಿಕೆ ಈಡೇರಿಸಿ ಐತಿಹಾಸಿಕ ನಿರ್ಣಯ ತೆಗೆದುಕೊಂಡ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರಿಗೆ ಬೆಳಗಾವಿಯ ಸುವರ್ಣಸೌಧದ ಸಭಾಂಗಣದಲ್ಲಿ ಡಿ.19ರಂದು ವಿಶೇಷ ಅಭಿನಂದನಾ ಸಮಾರಂಭ ನಡೆಯಿತು.
ಬೆಳಗಾವಿ ನಗರ ಸೇರಿದಂತೆ ಸುತ್ತಲಿನ ತಾಲೂಕುಗಳ

ನೇಕಾರ, ಕುರುವಿನಶೆಟ್ಟಿ, ದೇವಾಂಗ, ಹಠಗರ ದೇವಾಂಗ ಸಮಾಜ, ಸಕ್ಕುಸಾಯಿ ಸಮಾಜ, ನಾಮದೇವ ಸಿಂಪಿ, ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಮುಖ್ಯಮಂತ್ರಿಗಳಿಗೆ ಶಾಲುಹೊದಿಸಿ, ಫಲಪುಷ್ಪ ನೀಡಿ ಸನ್ಮಾನಿಸಿ ಗೌರವಿಸಿದರು.
ಈ ವೇಳೆ, ಮುಜರಾಯಿ ಹಜ್ ಮತ್ತು ವಕ್ಫ ಸಚಿವರಾದ ಶಶಿಕಲಾ ಜೊಲ್ಲೆ ಅವರು ಮಾತನಾಡಿ, ಮಾನ್ಯ ಅಟಲ್ ಬಿಹಾರಿ ವಾಜಪೇಯಿ ಅವರ ನಂತರ ಮಾನ್ಯ ನರೇಂದ್ರ ಮೋದಿಯವರು ಮತ್ತು ಮಾನ್ಯ ಬಿ.ಎಸ್.ಯಡಿಯೂರಪ್ಪ ಅವರ ನಂತರ ಮಾನ್ಯ ಬಸವರಾಜ ಬೊಮ್ಮಾಯಿ ಅವರು ನಾಡಿನ ಸರ್ವಾಂಗಿಣ ಅಭಿವೃದ್ದಿಗೆ ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.


ಕರ್ನಾಟಕ ಕೈಮಗ್ಗ ಅಭಿವೃದ್ದಿ ನಿಗಮದ ಅಧ್ಯಕ್ಷರು ಆಗಿರುವ ತೇರದಾಳ ಮತಕ್ಷೇತ್ರದ ಶಾಸಕರಾದ ಸಿದ್ದು ಸವದಿ ಅವರು ಮಾತನಾಡಿ, ನೇಕಾರರು ಜನರ ಮಾನ ಕಾಪಾಡುವ ಮಹತ್ವದ ಕಾರ್ಯ ಮಾಡುತ್ತಾರೆ. ರೈತ ಮತ್ತು ನೇಕಾರ ಇಬ್ಬರು ರಾಜ್ಯದ ಎರಡು ಕಣ್ಣುಗಳಿದ್ದಂತೆ. ಇದನ್ನರಿತು ರಾಜ್ಯ ಸರ್ಕಾರವು   ರಿಯಾಯಿತಿ ದರದಲ್ಲಿ ಸಾಲ ಸೌಲಭ್ಯ, ವಿದ್ಯುತ್ ಸೌಕರ್ಯ, ನೇಕಾರ ಮಕ್ಕಳಿಗೂ ವಿದ್ಯಾನಿಧಿ ಯೋಜನೆ, ನೇಕಾರರು ಸೇರಿದಂತೆ 60 ವರ್ಷ ಮೇಲ್ಪಟ್ಟವರಿಗೆ

ಸಂಧ್ಯಾಸುರಕ್ಷಾ ಸೇರಿದಂತೆ ಇನ್ನೂ ನಾನಾ ಯೋಜನೆಗಳನ್ನು ಜಾರಿ ಮಾಡಿದೆ. ನೇಕಾರ ಸಮುದಾಯದವರು ಮುಂದಿಟ್ಟಂತೆ
ಶೇ.95.09ರಷ್ಟು ಬೇಡಿಕೆಗಳನ್ನು ರಾಜ್ಯ ಸರ್ಕಾರ   ಈಡೇರಿಸಿದೆ ಎಂದು ತಿಳಿಸಿದರು.
ರಾಮದುರ್ಗ ಮತಕ್ಷೇತ್ರದ ಶಾಸಕರಾದ ಮಹಾದೇವಪ್ಪ ಅವರು ಮಾತನಾಡಿ, ಕೋರೊನಾ ಬಂದ ಕಷ್ಟದ ಸಂದರ್ಭದಲ್ಲಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ನೇಕಾರರ ಬೇಡಿಕೆಗಳಿಗೆ ಸ್ಪಂದನೆ ನೀಡಿದ್ದಾರೆ ಎಂದರು.


ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕರಾದ ಅಭಯ ಪಾಟೀಲ,ಕಿತ್ತೂರ ಶಾಸಕರಾದ ಮಹಾಂತೇಶ ದೊಡ್ಡಗೌಡ, ಶಾಸಕರಾದ ದೊಡ್ಡನಗೌಡ ಪಾಟೀಲ ಅವರು ಮಾತನಾಡಿದರು.

ಸಮಾರಂಭದಲ್ಲಿ ಜಲ ಸಂಪನ್ಮೂಲ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರಾದ ಗೋವಿಂದ ಕಾರಜೋಳ, ಗೃಹ ಸಚಿವರಾದ ಅರಗ ಜ್ಞಾನೇಂದ್ರ, ಲೋಕೋಪಯೋಗಿ ಇಲಾಖೆಯ ಸಚಿವರಾದ ಸಿ.ಸಿ.ಪಾಟೀಲ, ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ, ಜವಳಿ ನಿಗಮದ ಉಪಾಧ್ಯಕ್ಷರಾದ ಸುರೇಶ ಕಿತ್ತೂರ, ನೇಕಾರ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರಾದ
ದುಂಡಪ್ಪ ಮಾಚಕನೂರ ಬನಹಟ್ಟಿ, ಶಂಕರ ಟೀರಕಿ, ಪ್ರಭು ಕರಲಟ್ಟಿ, ಗಂಗಪ್ಪ ಮಲಜಗಿ, ಆನಂದ ಕಂಪು, ಮಲ್ಲಪ್ಪ ಸಂಗಾನಟ್ಟಿ, ಜಿ.ಎಸ್.ಗೊಂಬಿ, ಎಂ.ಪಿ.ಬಂಗೋಳಿ, ಚಂದ್ರಕಾಂತ ಹಾಸಿಲಕರ, ಮೋಹನ ಕೋಪಲ್ಡೆ ಹಾಗೂ ಇತರರು ಇದ್ದರು.  ಸಮಾರಂಭದಲ್ಲಿ

ಬೆಳಗಾವಿ, ನಿಪ್ಪಾಣಿ, ತೇರದಾಳ, ಇಲಕಲ್, ಕಿತ್ತೂರ ಕ್ಷೇತ್ರಗಳ ನೇಕಾರ ಸಮದಾಯದ ಹಿರಿಯರು, ಮಹಿಳೆಯರು, ಯುವಕರು ಮತ್ತು ಇನ್ನೀತರರು ಇದ್ದರು

Tags: