ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಾಜಿ ಸಚಿವ ಸಿಎಂ ಇಬ್ರಾಹಿಂ ಕಾಂಗ್ರೆಸ್ಗೆ ಗುಡ್ಬೈ ಹೇಳಿದ್ದಾರೆ. ಇನ್ನು ಕಾಂಗ್ರೆಸ್ಗೂ ನಮಗೂ ಮುಗಿದ ಅಧ್ಯಾಯ. ನಮ್ಮ ಆಪ್ತರನ್ನು ಕರೆದು ಸಧ್ಯದಲ್ಲೇ ನನ್ನ ನಿರ್ಧಾರವನ್ನು ತಿಳಿಸುತ್ತೇನೆ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಪರಿಷತ್ ಸದಸ್ಯ ಸಿ.ಎಂ ಇಬ್ರಾಹಿಂ, ಕಾಂಗ್ರೆಸ್ನಲ್ಲಿ ಡಿ.ಕೆ ಶಿವಕುಮಾರ್ ಹಾಗೂ ಬಿ.ಕೆ ಹರಿಪ್ರಸಾದ್ ಒಳ್ಳೆಯ ಟೀಂ. ಇನ್ನು ಕೆಲಸ ಮಾಡುವ ನಿಟ್ಟಿನಲ್ಲಿ ಇಬ್ಬರ ವಿಚಾರ ಧಾರೆ ಒಂದೇ ಆಗಿರುವುದರಿಂದ ಸೋನಿಯಾ ಗಾಂಧೀ ಈ ನಿರ್ಧಾರ ತೆಗೆದುಕೊಂಡಿದ್ದಾರೆಂದು ಭಾವಿಸುತ್ತೆನೆ. ಇನ್ನು ಈ ಮೂಕಲ ಸೋನಿಯಾ ಗಾಂಧಿ ನಮ್ಮ ಮೇಲಿದ್ದ ಭಾರವನ್ನು ಕಡೆಮೆ ಮಾಡಿದ್ದಾರೆ. ಈಗ ನಾವು ಸ್ವತಂತ್ರರಾಗಿ ನಿರ್ಧಾರ ತೆಗೆದುಕೊಳ್ಳಲು ಶಕ್ತರಾಗಿದ್ದೇವೆ.
ಹಾಗಾಗಿ ಆದಷ್ಟು ಬೇಗನೇ ನಮ್ಮ ಹಿತೈಶಿಗಳನ್ನು ಕರೆದು ಚರ್ಚೆ ಮಾಡಿ ನಮ್ಮ ಮುಂದಿನ ನಿರ್ಧಾರವನ್ನು ಪ್ರಕಟಿಸುತ್ತೇವೆ ಎಂದರು.
ಇನ್ನು ಮಾಜಿ ಸಿಎಂ ಸಿದ್ದರಾಮಯ್ಯ ಕುರಿತಂತೆ ಮಾತನಾಡಿದ ಅವರು, ಕಾಂಗ್ರೆಸ್ಗೂ ನಮಗೂ ಮುಗಿಸ ಅಧ್ಯಾಯ. ನಾವು ಕಾಂಗ್ರೆಸ್ಗೆ ಬಂದಿದ್ದೇ ಸಿದ್ದರಾಮಯ್ಯನವರಿಗಾಗಿ. ಮೂಸೂರು ಚುನಾವಣೆಯಲ್ಲಿ 250 ಮತ ಹಾಗೂ ಬಾದಾಮಿಯಲ್ಲಿ ಕರೆದುಕೊಂಡು ಹೋಗಿ 1200 ವೋಟು, ಇನ್ನು ಒಬ್ಬ ಕುರುಬ ಸಮುದಾಯದ ವ್ಯಕ್ತಿ ಮುಖ್ಯಮಂತ್ರಿಯಾಗಬೇಕೆಂಬ ಸಂಕಲ್ಪದಿಂದ ಬಳ್ಳಾರಿ ಪಾದಯಾತ್ರೆಯನ್ನು ಮಾಡಲಾಯಿತು. ಅದರಲ್ಲಿ ಮಾಡಿದ ಭಾಷಣಗಳು ಜನರ ಮನಸ್ಸಿನಲ್ಲಿ ಹಾಗೂ ರೆಕಾರ್ಡ್ನಲ್ಲಿಯೂ ಇದೆ. ಇನ್ನು ಸಿದ್ದರಾಮಯ್ಯನವರ ಕುರಿತು ಹೇಳಬೇಕೆಂದರೆ “ತಬ್ಬಲಿ ನೀನಾದೆಯಾ” ಎಂದು ಸಿ.ಎಂ ಇಬ್ರಾಹಿಂ ನುಡಿದರು.
ಸಿದ್ದರಾಮಯ್ಯನವರ ಸಲುವಾಗಿ ದೇವೇಗೌಡರಂಥ ನಾಯಕರನ್ನು ನಾವು ಬಿಟ್ಟೆವು. ಜೈಲಲ್ಲಿದ್ದು ಕಟ್ಟಿದ ಪಕ್ಷವನ್ನು ಬಿಟ್ಟೆವು ಎಂದು ಇತಿಹಾಸದ ಪುಟಗಳ ಘಟನೆಗಳನ್ನು ನೆನೆದರು,
ಇನ್ನು ರಾಜ್ಯದಲ್ಲಿ ವಿಧಾನ ಸಭಾ ಚಿನಾವಣೆಗೆ ಒಂದು ವರ್ಷ ಮೂರು ತಿಂಗಳು ಸಮಯಾವಕಾಶವಿದೆ. ಆದರೆ ಈಗಲೇ ಜನ ನಾಯಕರ ಪಕ್ಷಾಂತರ ಪರ್ವ ಆರಂಭವಾಗಿದೆ. ಇನ್ನು ಚುನಾವಣೆ ಸಮೀಪಿಸುತ್ತಿದ್ದಂತೆ ಇನ್ನು ಯಾವ್ಯಾವ ನಾಯಕರ ನಡೆ ಏನು ಎಂದು ಕಾದು ನೋಡಬೇಕಿದೆ.

