ಬೆಳಗಾವಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ್ ದಕ್ಷಿಣ ಮಂಡಲ ಬಿಜೆಪಿಯ ವಾಟ್ಸ್ಪ್ ಗ್ರೂಪ್ನಲ್ಲಿ ಅಶ್ಲೀಲ ಪೊಸ್ಟ್ ಹಾಕಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಬೆಳಗಾವಿ ಬಿಜೆಪಿ ನಗರ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ್ ದಕ್ಷಿಣ ಮಂಡಲ ಬಿಜೆಪಿಯ ವಾಟ್ಸ್ಪ್ ಗ್ರೂಪ್ನಲ್ಲಿ ಅಶ್ಲೀಲ ಪೊಸ್ಟ್ ಹಾಕಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ನಗರದ ಕಾಂಗ್ರೆಸ್ ಕಚೇರಿಯ ಬಳಿ ಪ್ರತಿಭಟನೆ ನಡೆಸಿದರು. ಈ ವೇಳೆ ಶಶಿಕಾಂತ ಪಾಟೀಲ್ ಅಶ್ಲೀಲ ಪೋಸ್ಟ್ನ ತೋರು ಫಲಕಗಳನ್ನು ಹಿಡಿದು ಗೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ನಾಯಕಿ ಆಯೇಶಾ ಸನದಿ, ಶಶಿಕಾಂತ ಪಾಟೀಲ್ ಒಬ್ಬ ನಾಲಾಯಕ ನಾಯಕ. ತನ್ನ ಮೈಮೇಲಿನ ಬಟ್ಟೆಯನ್ನು ಬಿಚ್ಚಿ ಅಶ್ಲೀಲ ಫೋಟೊವನ್ನು ಗ್ರೂಪ್ನಲ್ಲಿ ಹಾಕುತ್ತಾನೆಂದರೆ ಅವನು ಗಂಡಸು ಅನ್ನೋದಕ್ಕೆ ನಾಲಾಯಕ್. ಇಂಥವರ ಜನ್ಮಕ್ಕೆ ಧಿಕ್ಕಾರವಿರಲಿ ಎಂದು ಉಗಿದರು.
ಇನ್ನು ರಾಜ್ಯದ ಜನತೆ ಕೊವಿಡ್ ನಿಂದ ನರಳುತ್ತಿರುವ ಈ ಸಂದರ್ಭದಲ್ಲಿ ಗೋವಾಗೆ ಮೋಜು ಮಸ್ತಿ ಮಾಡಲು ಹೋಗಿರುವ ನಾಯಕರ ವಿರುದ್ಧ ಆಕ್ರೋಶ ಹೊರಹಾಕಿದರು.
ಈ ವೇಳೆ ಮಾತನಾಡಿದ ಬೆಳಗಾವಿ ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷರಾದ ವಿನಯ ನಾವಲಗಟ್ಟಿ, ಶಶಿಕಾಂತ ನಾಯಕ ತಮ್ಮ ನಗ್ನ ಫೊಟೊವನ್ನು ಮೊಬೈಲ್ನಲ್ಲಿ ತೆಗೆದು ತಮ್ಮದೇ ಪಕ್ಷದ ವಾಟ್ಸ್ಪ್ ಗ್ರೂಪ್ನಲ್ಲಿ ಹರಿಬಿಟ್ಟಿದ್ದಾರೆ. ಆದರೆ ಈ ರೀತಿ ಯಾಕೆ ಮಾಡಿದ್ದಾರೆಂಬುದೇ ಯಕ್ಷ ಪ್ರಶ್ನೆಯಾಗಿದೆ. ಇನ್ನು ಈ ರೀತಿ ಪ್ರಚಾರಕ್ಕಾಗಿ ಮಾಡುತ್ತಿದ್ದಾರೆ ಅಥವಾ ತಲೆ ಕೆಟ್ಟು ಮಾಡುತ್ತಿದ್ದಾರಾ ಎಂದು ಮಹಿಳಾ ಪ್ರತಿನಿಧಿಗಳು ಪ್ರಶ್ನೆ ಮಾಡುತ್ತಿದ್ದಾರೆ. ಬಿಜೆಪಿ ಶಾಸಕರೊಂದಿಗೆ ಇಂಥ ನಾಯಕರು ಗೋವಾ ಚುನಾವಣೆ ಪ್ರಚಾರಕ್ಕೆ ತೆರಳಿದ್ದಾರೆ. ನಾಯಕರಾಗಿ ಇಂಥವರು ಸಮಾಜಕ್ಕೆ ಏನು ಸಂದೇಶಕೊಡಲು ಹೊರಟಿದ್ದಾರೆಂದು ತಿಳಿಸಬೇಕು.
ಇನ್ನು ಗೋವಾ ಜನತೆ ಇಂಥ ನಾಯಕರನ್ನು ಕುತ್ತಿಗೆಯಲ್ಲಿ ಕೈಕೊಟ್ಟು ಹೊರದೂಡಬೇಕೆಂದು ಮನವಿ ಮಾಡಿದರು. ಇನ್ನು ಬಿಜೆಪಿ ನಾಯಕ ಶಶಿಕಾಂತ ಪಾಟೀಲ್ ಅಶ್ಲೀಲ ಪೋಸ್ಟ್ ವಿರುದ್ಧ ಬೆಳಗಾವಿ ಕಾಂಗ್ರೆಸ್ ನಾಯಕರು ಗರಂ ಆಗಿದ್ದಾರೆ. ಇಂಥ ಅಯೋಗ್ಯ ನಾಯಕರನ್ನು ಕೈಬಿಡಬೇಕೆಂದು ಪಕ್ಷದ ವರಿಷ್ಠರನ್ನು ಒತ್ತಾಯಿಸುತ್ತಿದ್ದಾರೆ. ಇನ್ನು ಬಿಜೆಪಿ ಹಿರಿಯ ನಾಯಕರು ಈ ಕುರಿತಂತೆ ಯಾವ ಕ್ರಮ ಕೈಗೊಳ್ಳಲಿದ್ದಾರೆ ಎಂದು ಕಾದು ನೋಡಬೇಕಿದೆ.