ಬೆಳಗಾವಿಯ ಪಾಲಿಕೆ ಚುನಾವಣೆ ನಡೆದು ನಾಲ್ಕು ತಿಂಗಳು ಕಳೆದ ನಂತರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಹುದ್ದೆ ಚುನಾವಣೆಗೆ ಮುಹೂರ್ತ ಕೂಡಿಬಂದಿದೆ. ಈಗಾಲೇ ಸರಕಾರ ಮೀಸಲಾತಿಯನ್ನು ಪ್ರಕಟಿಸಿದ ಬೆನ್ನಲ್ಲೇ ಆಂಕಾಂಕ್ಷಿಗಳಲ್ಲಿ ಆಸೆಗಳು ಗರಿಗೆದರಿವೆ.
ಬೆಳಗಾವಿ ಪಾಲಿಕೆಯ ಮೇಯರ್, ಹಾಗೂ ಉಪ ಮೇಯರ್ ಚುನಾವಣೆ ವಿಚಾರ ಈಗ ನಗರದಾದ್ಯಂತ ಸಂಚಲನ ಮೂಡಿಸಿದೆ. ಕುಂದಾನಗರಿಯ ಮೇಯರ್, ಹಾಗೂ ಉಪ ಮೇಯರ್ ಯಾರಾಗ್ತಾರೆ ಎಂದು ತೀವೃ ಕುತೂಹಲ ಮೂಡಿದೆ. ಈ ಗಾಲೇ ಸರಕಾರ ಮೇಯರ್ ಹಾಗೂ ಉಪ ಮೇಯರ್ ಸ್ಥಾನಕ್ಕೆ ಮೀಸಲಾತಿಯನ್ನು ಪ್ರಕಟಿಸಿದ್ದು, ಬೆಳಗಾವಿ ಪಾಲಿಕೆ ಮೇಯರ್ ಸ್ಥಾನ ಸಾಮಾನ್ಯ ಮಹಿಳೆಗೆ, ಹಾಗೂ ಉಪ ಮೇಯರ್ ಸ್ಥಾನ ಹಿಂದುಳಿದ ವರ್ಗದ ಮಹಿಳೆಗೆ ಮೀಸಲಾಗಿದೆ. ಇನ್ನು ಸರಕಾರ ಈ ಮೀಸಲಾತಿ ಪಟ್ಟಿಯನ್ನು ಪ್ರಕಟಿಸಿದ್ದೇ ತಡ, ತೆರೆಮರೆಯಲ್ಲಿ ಆಕಾಂಕ್ಷಿಗಳು ಗದ್ದುಗೆಗೇರಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ.
ಸದ್ಯ ಮೇಯರ್ ರೇಸ್ನ ಪಟ್ಟಿಯಲ್ಲಿ ಮೂವರ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.
ಬ್ರಾಹ್ಮಣ ಸಮುದಾಯದಿಂದ ವಾಣಿ ಜೋಶಿ, ಲಿಂಗಾತಯ ಸಮುದಾಯದಿಂದ ಸವಿತಾ ಪಾಟೀಲ, ಮರಾಠ ಸಮುದಾಯದಿಂದ ಸಾರಿಕಾ ಪಾಟೀಲ್ ಹೆಸರು ಕೇಳಿಬರುತ್ತಿದೆ.
ಬಹುತೇಕ ಮೇಯರ್ ಪಟ್ಟ ಬೆಳಗಾವಿ ದಕ್ಷಿಣ ಮತಕ್ಷೇತ್ರಕ್ಕೆ ಫಿಕ್ಸ್. ಇನ್ನು ಉಪ ಮೇಯರ್ ಪಟ್ಟ ಬೆಳಗಾವಿ ಉತ್ತರ ಮತಕ್ಷೇತ್ರಕ್ಕೆ ಸಿಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಕುರಿತಂತೆ ಬಿಜೆಪಿ ದಕ್ಷಿಣ ಶಾಸಕ ಅಭಯ ಪಾಟೀಲ್ ನಿರ್ಣಯವೇ ಅಂತಿಮ ಎಂದು ಹೇಳಲಾಗುತ್ತಿದೆ.
ಪಾಲಿಕೆಯಲ್ಲಿ ಎಂಇಎಸ್ ನೆಲಕಚ್ಚುವಂತೆ ಮಾಡಿದ್ದ ಅಭಯ ಪಾಟೀಲ್, ಸದ್ಯ ಬೆಳಗಾವಿ ಪಾಲಿಕೆಯಲ್ಲಿ ಬಿಜೆಪಿಗೆ ಸ್ಪಷ್ಟ ಬಹುತವಿದೆ. 58 ವಾರ್ಡುಗಳಲ್ಲಿ 35 ಸ್ಥಾನಗಳು ಬಿಜೆಪಿ ಗೆದ್ದುಕೊಂಡಿದೆ. ಫೆಬ್ರುವರಿ ಎರಡನೇ ವಾರದಲ್ಲಿ ಮೇಯರ್ ಉಪಮೇಯರ್ ಹುದ್ದೆಗೆ ಚುನಾವಣೆ ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.