ಬೆಳಗಾವಿಯ ವಡಗಾವಿ ಪ್ರದೇಶದಲ್ಲಿ ಜನರ ಆರೋಗ್ಯ ಸೇವೆಗಾಗಿ ವೆಲ್ನೆಸ್ ಫಾರ್ ಎವರ್ ಕೆಮಿಸ್ಟ್ ಆಂಡ್ ಲೈಫ್ಸ್ಟೈಲ್ ಸ್ಟೋರ್ನ ನೂತನ ಶಾಖೆ ಇಂದಿನಿಂದ ಕಾರ್ಯಾರಂಭ ಮಾಡಿದೆ.
ಹೌದು ಕಡಿಮೆ ವರ್ಷದಲ್ಲಿ ಇಡೀ ದೇಶಾಧ್ಯಂತ ವೆಲ್ನೆಸ್ ಕಂಪನಿ ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಮಟ್ಟದ ಹೆಸರು ಮಾಡಿದೆ. ಅದೇ ರೀತಿ ರಾಜ್ಯದ 2ನೇ ರಾಜಧಾನಿ ಎಂದು ಕರೆಸಿಕೊಳ್ಳುವ ಬೆಳಗಾವಿಯಲ್ಲಿ ಇಂದು ರವಿವಾರ ವೆಲ್ನೆಸ್ ಮೆಡಿಕಲ್ ಶಾಪ್ 8ನೇ ಶಾಖೆ ಉದ್ಘಾಟನೆಗೊಂಡಿದೆ. ವಡಗಾವಿಯ ಯಳ್ಳೂರ ರಸ್ತೆಯಲ್ಲಿರುವ ಸಂಭಾಜಿ ನಗರದಲ್ಲಿ ನೂತನ ಶಾಖೆಯನ್ನು ಡಾ.ಪ್ರಸಾದ್ ಎಸ್ ಉದ್ಘಾಟಿಸಿದರು.
ನಂತರ ನಮ್ಮ ಇನ್ನ್ಯೂಸ್ ಜೊತೆಗೆ ಮಾತನಾಡಿದ ಡಾ.ಪ್ರಸಾದ್ ಎಸ್ ಈ ಭಾಗದಲ್ಲಿ 24/7 ಮೆಡಿಕಲ್ ಶಾಪ್ ಇರಲಿಲ್ಲ. ಹೀಗಾಗಿ ವೆಲ್ನೆಸ್ ಮೆಡಿಕಲ್ ಶಾಪ್ನಿಂದ ಈ ಭಾಗದ ಜನರಿಗೆ ಸಾಕಷ್ಟು ಅನುಕೂಲ ಆಗಲಿದೆ ಎಂದು ಹೇಳಿದರು.
ನಂತರ ಏರಿಯಾ ಮ್ಯಾನೇಜರ್ ಮೃತ್ಯುಂಜಯ ಯಾದವ ಮಾತನಾಡಿ ವೆಲ್ನೆಸ್ ಮೆಡಿಕಲ್ ಶಾಪ್ನಲ್ಲಿ ಎಲ್ಲ ಕಂಪನಿಯ ಔಷಧಿಗಳು ಲಭ್ಯಯಿವೆ. ಯಾವುದೇ ಗ್ರಾಹಕನನ್ನು ಇಂತಹ ಔಷಧಿ ಇಲ್ಲ ಎಂದು ವಾಪಸ್ಸು ಕಳಿಸುವುದಿಲ್ಲ. ಅದೇ ರೀತಿ ಗ್ರಾಹಕರಿಗೆ ಒಳ್ಳೆಯ ಆಫರ್ ಕೂಡ ಕೊಡುತ್ತಿದ್ದೇವೆ. ಹೀಗಾಗಿ ಇದರ ಸದುಪಯೋಗ ಎಲ್ಲರೂ ಪಡೆದುಕೊಳ್ಳಿ. ಇದರಲ್ಲಿ ಪರ್ಸನಲ್ ಕೇರ್, ಬೇಬಿ ಕೇರ್, ಹೆಲ್ತ್ ಫೂಡ್ಸ್, ವುಮೆನ್ ಹೈಜಿನ್, ವಿಟಾಮಿನ್ ಸಪ್ಲಿಮೆಂಟ್ಸ, ಅಲೋಪಥಿಕ್ ಮೆಡಿಸಿನ್, ರಿಹ್ಯಾಬಿಲಿಟೇಶನ್ ಪ್ರೊಡಕ್ಟಸ್, ಆಯುರ್ವೇದಿಕ್ ಮೆಡಿಸಿನ್, ಸರ್ಜಿಕಲ್ ಐಟಮ್ಸ, ಬ್ಲಡ್ ಪ್ರೆಶರ್ ಮಾನಿಟರ್ ಸೇರಿದಂತೆ ಹಲವು ಅಗತ್ಯ ವಸ್ತುಗಳು ಇಲ್ಲಿವೆ ಎಂದರು.
ಬಳಿಕ ಸ್ಟೋರ್ ಮ್ಯಾನೇಜರ್ ವಿನಾಯಕ್ ನಾಯಿಕ್ ಮಾತನಾಡಿ ಈ ವಡಗಾವಿ ಸುತ್ತಮುತ್ತಲಿನ ಜನರಿಗೆ ಯಾವುದೇ ಔಷಧಿ ಬೇಕಾದ್ರೆ ನಾವು ಹೋಮ್ ಡೆಲಿವರಿ ಕೂಡ ಮಾಡುತ್ತೇವೆ. ಇದರ ಸೌಲಭ್ಯವನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಗ್ರಾಹಕರಿಗೆ ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಎಕ್ಸಿಕ್ಯೂಟಿವ್ ಮ್ಯಾನೇಜರ್ ಜಿತೇಂದ್ರ ಚವ್ಹಾಣ, ಅನೂಪ್ ಮೌರ್ಯ, ಗಣೇಶಚಂದ್ರ ಗೌಡ ಸೇರಿದಂತೆ ಎಲ್ಲಾ ಶಾಖೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದರು.