Belagavi

ಶಾಲಾ-ಕಾಲೇಜು, ಮಾರ್ಕೆಟ್ ಪ್ರಾರಂಭವಾಗಿವೆ: ದೇವಸ್ಥಾನಗಳಿಗ್ಯಾಕೆ ನಿರ್ಭಂಧ..!-ಪ್ರಮೋದ ಮುತಾಲಿಕ್

Share

ಕೊವಿಡ್ ಪ್ರಭಾವ ಕಡಿಮೆಯಾಗಿರುವುದರಿಂದ ಜಿಲ್ಲೆಯಲ್ಲಿ ಎಲ್ಲಾ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಿವೆ. ಈ ಹಿನ್ನೆಲೆಯಲ್ಲಿ ದೇವಸ್ಥಾನಗಳಲ್ಲಿ ಜಾತ್ರಾ ಮಹೋತ್ಸವಗಳಿಗೆ ಅವಕಾಶ ನೀಡಬೇಕೆಂದು ಶ್ರೀರಾಮಸೇನೆಯ ಅಧಕ್ಷರಾದ ಪ್ರಮೋದ್ ಮುತಾಲಿಕ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.


ಈಗಾಗಲೇ ರಾಜ್ಯದಲ್ಲಿ ಕೊವಿಡ್ ಪ್ರಭಾವ ಕಡಿಮೆಯಾಗಿದೆ. ಇನ್ನು ಶಾಲಾ ಕಾಲೇಜು, ಮಾರ್ಕೆಟ್ ಎಲ್ಲವೂ ಕೂಡ ಪ್ರರಂಭವಾಗಿವೆ. ಆದರೆ ಹಿಂದೂ ದೇವಸ್ಥಾನಗಳಲ್ಲಿ ಪೂಜೆ ಪುನಸ್ಕಾರ ಹಾಗೂ ಜಾತ್ರಾಮಹೋತ್ಸವಗಳಿಗೆ ಮಾತ್ರ ನಿರ್ಭಂದ ಹೇರಲಾಗಿದೆ. ಇನ್ನು ಮುಂಬರುವ ದಿನಗಳಲ್ಲಿ ಜಾತ್ರಾ ಮಹೋತ್ಸವಗಳು ಹೆಚ್ಚಾಗಿ ಬರಲಿದ್ದು ಎಲ್ಲಾ ಜಾತ್ರಾ ಮಹೋತ್ಸವಗಳಿಗೆ ಅನುಮತಿ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಮೋದ್ ಮುತಾಲಿಕ್, ಈಗ ರಾಜ್ಯದಲ್ಲಿ ಕೊರೊನಾದ ಯಾವುದೇ ನಿಯಮಗಳಿಲ್ಲ. ರಾಜ್ಯಾದ್ಯಂತ ಶಾಲಾ ಕಾಲೇಜುಗಳು, ಕ್ಲಬ್, ಪಬ್, ಹಾಗೂ ಎಲ್ಲಾ ಆರ್ಥಿಕ ಚಟುವಟಿಕೆಗಳು ಪ್ರಾರಂಭವಾಗಿದೆ. ಇಂತಹ ಸಂದರ್ಭದಲ್ಲಿ ಹಿಂದೂ ಧರ್ಮದಲ್ಲಿ ಒರ್ಷಕ್ಕೊಮ್ಮೆ ಬರುಂತಹ ಜಾತ್ರೆ ಉತ್ಸವಗಳಿಗೆ ನಿರ್ಭಂಧ ಹೇರಿರುವುದನ್ನು ನಾನು ಖಂಡಿಸುತ್ತೇನೆ. ಜಾತ್ರೆಗಳಲ್ಲಿ ಕೇವಲ ಧಾರ್ಮಿಕತೆ ಮಾತ್ರ ಇರುವುದಿಲ್ಲ. ಬದಲಾಗಿ ಲಕ್ಷಾಂತರ ಜನರ ಉಪಜೀವನ ಇರುತ್ತದೆ. ಕೊವಿಡ್ ಹೆಸರಿನಲಲಿ ಅವರ ಹೊಟ್ಟೆಯ ಮೇಲೆ ಕಾಲು ಹಾಕುತ್ತಿರುವುದು ಸರಿಯಲ್ಲ. ಈ ದಿನಗಳಲ್ಲಿ ಬೆಳಗಾವ ಜಿಲ್ಲೆಯಾದ್ಯಂತ ಎಲ್ಲಾ ಕಡೆ ಜಾತ್ರೆ ಉತ್ಸವಗಳು ಪ್ರಾರಂಭವಾಗುತ್ತವೆ. ಹಾಗಾಗಿ ಅವುಗಳಿಗೆ ಅನುಮತಿ ನೀಡಬೇಕು ಎಂದರು.
ಇನ್ನು ಈಗಾಗಲೇ ಕೊರೊನಾ ರಾಜ್ಯಾದ್ಯಂತ ಕಡಿಮೆಯಾಗುತ್ತಿದೆ. ಇನ್ನು ಎಲ್ಲಾ ಆರ್ಥಿಕ ಚಟುವಟಿಕೆಗಳಿಗೆ ಮನುಮತಿ ನೀಡಲಾಗಿದೆ. ಹಾಗಾಗಿ ದೇವಸ್ಥಾನಗಳಲ್ಲಿ ಜಾತ್ರೆ ಉತ್ಸವಗಳಿಗೆ ಅನುಮತಿ ನೀಡಬೇಕೆಂದು ಜಿಲ್ಲಾಢಳಿತಕ್ಕೆ ಪ್ರಮೋದ್ ಮುತಾಲಿಕ್ ಒತ್ತಾಯಿಸಿದ್ದಾರೆ. ಇನ್ನು ಈ ಕುರಿತಂತೆ ಸರಕರದ ನಡೆ ಏನು ಎಂದು ಕಾದು ನೋಡಬೇಕಿದೆ

Tags: