ಸರ್ಕಾರದ ಯೋಜನೆಗಳನ್ನು ಫಲಾನುಭವಿಗಳಿಗೆ ನೇರವಾಗಿ ತಲುಪಿಸುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಮಹತ್ವಾಕಾಂಕ್ಷೆ ಯೋಜನೆಯಾದ ಗ್ರಾಮ ಒನ್ ಆನ್ ಲೈನ್ ಕೇಂದ್ರವನ್ನು ಚಿಕ್ಕೋಡಿ ತಾಲೂಕಿನ ಬೆಳಕೂಡ ಗ್ರಾಮದಲ್ಲಿ ಶಾಸಕ ದುರ್ಯೋಧನ ಐಹೊಳೆ ಅವರು ಉದ್ಘಾಟಿಸಿದರು.
ಅನಿಲ ಸುಭಾಷ್ ದಲಾಲ ಅವರಿಗೆ ಸೇರಿರುವ ಈ ಕೇಂದ್ರದಲ್ಲಿ ವಿವಿಧ ಇಲಾಖೆಯ 125ಕ್ಕೂ ಹೆಚ್ಚು ಯೋಜನೆಗಳನ್ನು ಜನರು ಈ ಕೇಂದ್ರದಿಂದ ಪಡೆಯಬಹುದಾಗಿದೆ ಎಂದು ಶಾಸಕ ಐಹೊಳೆ ಅವರು ಹೇಳಿದರು. ಇದೇ ಸಂದರ್ಭದಲ್ಲಿ ಕೋವಿಡ್ ನಿಂದ ಮೃತಪಟ್ಟ ಕುಟುಂಬಗಳಿಗೆ ಸಹಾಯಧನದ ಚೆಕ್ ವಿತರಣೆ ಮಾಡಲಾಯಿತು. ಕರೋಶಿಯ ಘಟಿಗೆಪ್ಪ ಕೇಸ್ತಿ, ಕಬ್ಬೂರಿನ ಸಿದ್ದಪ್ಪ ಚೌಗಲಾ, ಕುಂಗಟೋಳಿಯ ಶೋಭಾ ತೇರದಾಳೆ ಅವರು ಶಾಸಕರಿಂದ ಚೆಕ್ ಸ್ವೀಕರಿಸಿದರು.ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಶಾಸಕ ದುರ್ಯೋಧನ ಐಹೊಳೆ ಅವರು ಗ್ರಾಮ ಒನ್ ಕೇಂದ್ರದ ಲಾಭವನ್ನು ಪ್ರತಿಯೊಬ್ಬರೂ ಪಡೆಯಿರಿ ಎಂದರು..
ಕಾರ್ಯಕ್ರಮದಲ್ಲಿ ಚಿಕ್ಕೋಡಿ ತಹಶಿಲ್ದಾರ ಪ್ರಮೀಳಾ ದೇಶಪಾಂಡೆ, ಸ್ಥಳೀಯ ಮುಖಂಡರಾದ ಟಿ ಎಸ್ ಮೋರೆ, ಬೆಳಕೂಡ ಗ್ರಾಮ ಪಂಚಾಯತಿ ಅಧ್ಯಕ್ಷ ಬಸವರಾಜ ಕುಂಬಾರ, ದೇವರಾಜ ಪಾಶ್ವಾಪೂರೆ, ಮಲ್ಲಪ್ಪ ಅರಬಾವಿ ಉಪಸ್ಥಿತರಿದ್ದರು.