Hukkeri

ನಿಸ್ವಾರ್ಥ ಸೇವೆಗೆ ಫಲ ಕಟ್ಟಿಟ್ಟ ಬುತ್ತಿ-ರಂಭಾಪುರೀ ಜಗದ್ಗುರುಗಳು

Share

ನಿಶ್ವಾರ್ಥ ಸೇವೆಗೆ ಫಲ ಕಟ್ಟಿಟ್ಟ ಬುತ್ತಿ ಎಂದು ರಂಭಾಪುರೀ ಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಹೇಳಿದರು.ಹುಕ್ಕೇರಿ ನಗರದ ಹಿರೇಮಠದಲ್ಲಿ ಇಂದು ಗುರುವಾರ ಆಶಿರ್ವಚನ ನೀಡುತ್ತಾ, 38 ವರ್ಷಗಳ ಸತತ ಸೇವೆಯ ಫಲ ಇವತ್ತು ಮಹಾಂತೇಶ ಹಿರೇಮಠ ಅವರಿಗೆ ಇಂದು ಮುಂಜಾನೆ ಬೆಳಗಾವಿಯ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಿಂದ ಸರ್ವೊತ್ತಮ ಪ್ರಶಸ್ತಿ ಸ್ವೀಕರಿಸಿದ್ದು, ರಂಭಾಪುರಿ ಪೀಠದಿಂದ ಗುರು ಕಾರುಣ್ಯ ಪ್ರಶಸ್ತಿಗೆ ಪಾತ್ರರಾಗಿರುವುದು ನಮಗೆ ಅತೀವ ಸಂತಸ ತಂದಿದೆ ಎಂದರು. ನಾವೆಲ್ಲರೂ ಕೂಡ ಸಾಮಾಜಿಕ ವ್ಯವಸ್ಥೆಯಲ್ಲಿ ಶ್ರದ್ಧೆ ಭಕ್ತಿಯಿಂದ ಕೆಲಸ ಮಾಡುವುದನ್ನು ಕಲಿಯಬೇಕಿದೆ ಎಂದರು.

ಹುಕ್ಕೇರಿ ವಿದ್ಯುತ್ ಸಹಕಾರಿ ಸಂಘದ ನಿರ್ದೇಶಕರಾದ ಶ್ರೀ ಪೃಥ್ವಿ ರಮೇಶ ಕತ್ತಿ, ಮಹಾವೀರ ಶಿಕ್ಷಣ ಸಂಸ್ಥೆ ಅದ್ಯಕ್ಷ ಮಹಾವೀರ ನಿಲಜಗಿ, ರಿಡ್ಸ ಸಂಸ್ಥೆ ಅದ್ಯಕ್ಷ ಅಶೋಕ ಪಾಟೀಲ, ಹುಕ್ಕೇರಿ ಕನ್ನಡ ಜಾನಪದ ಪರಿಷತ್ತಿನ ಗೌರವ ಅದ್ಯಕ್ಷ ಶಿವಾನಂದ ಜೀರಲಿ, ಸುಹಾಸ್ ನೂಲಿ , ಗಣ್ಯ ವ್ಯಾಪಾರಸ್ಥ ಚನ್ನಪ್ಪಾ ಗಜಬರ, ಸುರೇಶ ಜಿನರಾಳೆ ಶ್ರೀ ಗಳಿಂದ ಆಶಿರ್ವಾದ ಪಡೆದರು.

ಈ ಸಂದರ್ಭದಲ್ಲಿ ಹುಕ್ಕೇರಿ ಹಿರೇಮಠದ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಮತ್ತು ಕ್ಯಾರಗುಡ್ಡದ ಅಭಿನವ ಮಂಜುನಾಥ ಸ್ವಾಮಿಗಳು ಶ್ರೀ ಮಠದಿಂದ ಗೌರವ ಸಲ್ಲಿಸಿದರು.

Tags: