Chikkodi

ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಮಲ್ಲಿಕಾರ್ಜುನಗೌಡರನ್ನ ಸರ್ಕಾರ ಬೆಂಬಲಿಸುತ್ತಿದೆ:ಅರವಿಂದ ಘಟ್ಟಿ

Share

ಡಾ! ಬಿ.ಆರ್.ಅಂಬೇಡ್ಕರ್ ಅವರಿಗೆ ಅವಮಾನ ಮಾಡಿದ ಮಲ್ಲಿಕಾರ್ಜುನಗೌಡರನ್ನು ಬಿಜೆಪಿ ಸರ್ಕಾರ ಬೆಂಬಲಿಸುವ ಕೆಲಸ ಮಾಡುತ್ತಿದೆ ಎಂದು ನಿವೃತ್ತ ಕಮಾಡೆಂಟ್ ಅರವಿಂದ ಘಟ್ಟಿ ಆರೋಪಿಸಿದರು…

ಚಿಕ್ಕೋಡಿ ಪಟ್ಟಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿವೃತ್ತ ಕಮಾಡೆಂಟ್ ಅರವಿಂದ ಘಟ್ಟಿ ಅವರು ಇತ್ತೀಚಿಗೆ ರಾಯಚೂರಿನಲ್ಲಿ ಗಣರಾಜೋತ್ಸವ ದಿನದಂದು ಡಾ! ಬಿ.ಆರ್.ಅಂಬೇಡ್ಕರ್ ಅವರಿಗೆ ನ್ಯಾಯಾಧೀಶ ಮಲ್ಲಿಕಾರ್ಜುನಗೌಡಯವರು ಅವಮಾನ ಮಾಡಿರುವ ವಿಷಯ ಖಂಡನೀಯವಾಗಿದೆ.ಡಾ! ಅಂಬೇಡ್ಕರ್ ಅವರು ಬರೆದ ಸಂವಿಧಾನವನ್ನು ದೇಶದ ಜನರು ಪಾಲಿಸುತ್ತಾ ಬಂದಿದ್ದಾರೆ..

ಇಂತಹ ಮಹಾನವ್ಯಕ್ತಿಗೆ ಅವಮಾನ ಮಾಡಿದ ನ್ಯಾಯಾಧೀಶರ ವಿರುದ್ಧ ಸರ್ಕಾರ ಯಾವುದೇ ಕ್ರಮಕೈಗೂಳ್ಳುತ್ತಿಲ್ಲ,ಮಲ್ಲಿಕಾರ್ಜುನ ಗೌಡರು ಮೇಲಜಾತಿಯವರು ಎನ್ನುವ ಕಾರಣಕ್ಕಾಗಿಯೇ ಸರ್ಕಾರ ಅವರನ್ನು ಬೆಂಬಲಿಸುವ ಕೆಲಸ ಮಾಡುತ್ತಿದೆ..ಬಿಜೆಪಿ ಸರ್ಕಾರ ದಲಿತ ವಿರೋಧಿ ಸರ್ಕಾರವಾಗಿದೆ.ಮಲ್ಲಿಕಾರ್ಜುನಗೌಡ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಿದ್ದರೆ ಉಗ್ರವಾದ ಪ್ರತಿಭಟನೆ ಮಾಡಲಾಗುವುದು ಎಂದು ನಿವೃತ್ತ ಕಮಾಡೆಂಟ್ ಅರವಿಂದ ಘಟ್ಟಿ ಎಚ್ಚರಿಕೆಯನ್ನು ನೀಡಿದರು…

Tags: