Banglore

ಕೆ.ಆರ್ ಪುರಂನಲ್ಲಿ 8.50ಕೋಟಿ ರೂ ವೆಚ್ಚದ ನೀರು ಸಂಗ್ರಹಾರವನ್ನು ಉದ್ಘಾಟಿಸಿದ ಸಿಎಂ ಬೊಮ್ಮಾಯಿ

Share

ಬೆಂಗಳೂರಿನ ಕೆಆರ್ ಪುರಂ ನಲ್ಲಿ ಸುಮಾರು 8.50ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಭೂ ಮಟ್ಟದ ನೀರು ಸಂಗ್ರಹಾರವನ್ನು ಸಿ.ಎಂ ಬಸವರಾಜ್ ಬೊಮ್ಮಾಯಿ ಲೋಕಾರ್ಪಣಗೊಳಿಸಿದರು.

ಬೆಂಗಳೂರಿನ ಕೆ.ಆರ್.ಪುರಂನಲ್ಲಿ ಸುಮಾರು 8.50ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಭೂಮಟ್ಟದ ನೀರು ಸಂಗ್ರಹಾರವನ್ನು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಉದ್ಘಾಟಿಸಿದರು.

ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಆರ್ ಪುರಂನಲ್ಲಿ ಸುಮಾರು 8.50ಕೋಟಿ ರೂ ವೆಚ್ಚದಲ್ಲಿ ಭೂಮಟ್ಟದ ರಿಸರ್ವರ್‍ನ್ನು ನಿರ್ಮಾಣ ಮಡಲಾಗಿದೆ. ಇದು ಕೆಆರ್ ಪುರಂನ ಅತಿದೊಡ್ಡ ರಿಸರ್ವರ್ ಆಗಿದೆ. ಇದರಿಂದ ಪ್ರಮುಖ 9ಸ್ಥಳಗಳಿಗೆ ನೀರು ವಿತರಣೆಯಾಗುತ್ತದೆ. ಕೆಆರ್ ಪುರಂ ಸರ್ವಾಂಗೀಣ ಪ್ರಗತಿಗಾಗಿ ಭೈರತಿ ಬಸವರಾಜ್ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಜನಪರ, ಜನ ಕಳಕಳಿಯುಳ್ಳ ಜನನಯಾಕರೊಬ್ಬರು ಜನರಿಗಾಗಿ ಕಾರ್ಯ ಮಾಡುತ್ತಿದ್ದಾರೆ.

ಸಚಿವರಾದರೂ ಕೂಡ ಒಬ್ಬ ಸಾಮಾನ್ಯ ಕಾರ್ಯಕರ್ತರಂತೆ ಕಾರ್ಯ ಮಾಡುತ್ತಿದ್ದಾರೆ. ಇನ್ನು ಈ ನೀರನ್ನು ಸಾರ್ವಜನಿಕರು ಸದುಪಯೋಗ ಮಾಡಿಕೊಳ್ಳುವಂತೆ ಮನವಿ ಮಾಡಿದರು.
ಇನ್ನು ಭೈರತಿ ಬಸವರಾಜ್ ಮಾಡಿದ ಒಳ್ಳೆಯ ಕಾರ್ಯದಿಂದಾಗಿ ಸುಮಾರು ಪ್ರಮುಖ 9 ಏರಿಯಾಗಳಲ್ಲಿ ನೀರಿನ ಸಮಸ್ಯೆ ಪರಿಹಾರ ವಾಗಲಿದೆ. ಇನ್ನು ಸಾರ್ವಜನಿಕರು ನೀರನ್ನು ಸದುಪಯೋಗ ಮಾಡಿಕೊಳ್ಳಬೇಕೆಂದು ಕೋರಲಾಗಿದೆ.

Tags: