Banglore

ಕೇಂದ್ರದ ಈ ಬಜೆಟ್ ಆರ್ಥಿಕ ಹಾಗೂ ಮೂಲಸೌಕರ್ಯ ಅಭಿವೃದ್ಧಿ ದೃಷ್ಟಿಯಿಂದ ಉತ್ತಮವಾಗಿರುತ್ತೆ- ಸಿಎಂ ಬೊಮ್ಮಾಯಿ ವಿಶ್ವಾಸ

Share

ಭಾರತದ ಆರ್ಥಿಕತೆ ಇತ್ತೀಚೆಗೆ ಕೊವಿಡ್ ಕರಿ ನೆರಳಿನಿಂದ ಹೊರಬಂದು ಚೇತರಿಕೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ಈ ಬಾರಿಯ ಕೇಂದ್ರ ಬಜೆಟ್ ಅಭಿವೃದ್ಧಿಗೆ ಪೂರಕವಾಗಿರುತ್ತದೆ ಎಂದು ವಿಶ್ವಾಸವಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಬೆಂಗಳೂರಿನ ತಮ್ಮ ಆರ್‍ಟಿ ನಗರದ ನಿವಾಸದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕೇಂದ್ರ ಸರಕಾರ ತನ್ನ ಬಜೆಟ್‍ನ್ನು ಮಂಡನೆ ಮಾಡಲಿದೆ. ಇದು ಕೊವಿಡ್ ಕರಿನೆರಳಲ್ಲಿ ಮೂರನೇ ಬಜೆಟ್. ಕಳೆದೆರಡು ಬಜೆಟ್‍ಗಳು ಕೊವಿಡ್ ಕರಿ ನೆರಳಿನಿಂದ ಕೂಡಿತ್ತು. ಆದರೆ ಈ ಬಾರಿ ದೇಶದ ಆರ್ಥಿಕತೆ ಚೇತರಿಕೆ ಕಾಣುತ್ತಿದೆ. ಈ ನಿಟ್ಟಿನಲ್ಲಿ ಕೇಂದ್ರ ಮಂಡಿಸುತ್ತಿರುವ ಬಜೆಟ್ ಉತ್ತಮ ಅಭಿವೃದ್ಧಿ ಪೂರಕವಾಗಿರುತ್ತದೆ ಎಂಬ ವಿಶ್ವಾಸವಿದೆ. ಆರ್ಥಿಕ ಸರ್ವೆ ಪ್ರಕಾರ ಆರ್ಥಿಕ ಪ್ರಗತಿಯ ಕುರಿತು 8.8 ಗ್ರೋತ್ ಕುರಿತಂತೆ ಹೇಳಿದ್ದಾರೆ. ಇನ್ನು ಈ ಬಜೆಟ್‍ನಲ್ಲಿ ಆರ್ಥಿಕ ಅಭಿವೃದ್ಧಿ ದೃಷ್ಟಿಯಿಂದ ಹಾಗೂ ಮೂಲಸೌಕರ್ಯ ಅಭಿವೃದ್ಧಿ ದೃಷ್ಟಿಯಿಂದ ಉತ್ತಮ ಬಜೆಟ್ ಆಗಿರುತ್ತೆ ಎನ್ನುವ ವಿಶ್ವಾಸ ವ್ಯಕ್ತಪಾಡಿಸಿದರು.

ಇನ್ನು ರೈಲ್ವೆ ಇಲಾಖೆಯಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ಕುರಿತಂತೆ ಮಾತನಾಡಿದ ಅವರು, ಇದರಲ್ಲಿ ಮೂರು ಸಮಸ್ಯೆಗಳಿವೆ. ಮೊದಲು ಲ್ಯಾಂಡ್ ಅಕ್ವೇಜೇಶನ್ ಸಮಸ್ಯೆ ಹಾಗೂ 50:50 ಯೋಜನೆಯಡಿ ಅನುಮತಿ ನೀಡಿದಾಗ ರಾಜ್ಯದ ಹಣಕಾಸಿನ ವ್ಯವಸ್ಥೆಯನ್ನೂ ಪರಿಗಣಿಸಲಾಗುತ್ತದೆ. ಹಾಗಾಗಿ ಈ ನಿಟ್ಟಿನ;ಲ್ಲಿ ಎಲ್ಲವನ್ನೂ ಕೂಡ ಪರಿಗಣಿಸಲಾಗುತ್ತದೆ ಎಂದರು.

ಇನ್ನು ಜಿಎಸ್‍ಟಿ ಕುರಿತಂತೆ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಅವರು, ಜಿಎಸ್‍ಟಿ ಇಳಿಕೆ ಅತೌಅ ಶಮ¨S್ಪಮಧಿ ಯಾವುದೇ ವಿಚಾರದಲ್ಲಿ ಜಿಎಸ್‍ಟಿ ಕೌನ್ಸಿಲ್ ತೀರ್ಮಾನ ತೆಗೆದುಕೊಳ್ಳಬೇಕು. ಇದು ಕೇಂಸದರ ಸರಕಾರದ ಅಧೀನದಲ್ಲಿ ಬರುವುದಿಲ್ಲ. ಹಗಗಿ ಜಿಎಸ್‍ಟಿ ಕೌನ್ಸಿಲ್‍ನಲ್ಲಿ ಈ ಕುರಿತಂತೆ ಚರ್ಚೆ ನಡೆಸಿ ಕ್ರಮ ಕೈಗೊಳ್ಳುತ್ತಾರೆ ಎಂದರು.

ಇನ್ನು ಟೋಯಿಂಗ್ ಪಾಲಿಸಿ ಕುರಿತಂತೆ ಮಾತನಾಡಿದ ಅವರು, ಈ ಕುರಿತಂತೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಇನ್ನು ಈ ಕುರಿತಂತೆ ಅನೇಕ ಸಲಹೆಗಳೂ ಕೇಳಿಬಂದಿವೆ. ಟ್ರಾಫಿಕ್‍ಗೆ ಪರಿಣಿತರಿದ್ದಾರೆ. ಈ ಹಿಂದೆ ಯಾವ ವ್ಯವಸ್ಥೆ ಇತ್ತು. ಹಾಗೂ ಈಗ ಯಾವ ರೀತಿ ಇದೆ ಎಂಬುದನ್ನು ಕುರಿತಂತೆ ಗಮನ ನೀಡಲು ಹೇಳಿದ್ದೇನೆ. ಇನ್ನು ಟ್ರಾಫಿಕ್ ನಿಯಂತ್ರಣಕ್ಕೆ ತಂತ್ರಜ್ಞಾನವನ್ನು ಬಳಕೆ ಮಾಡುವಂತೆ ನಾನು ಹೇಳಿದ್ದೇನೆ. ಈಗಿರುವ ದಂಡವನ್ನು ಪುನರ್ ಪರಿಶೀಲನೆ ಮಾಡುವಂತೆ ಹೇಳಿದ್ದೇನೆ. ಈ ಕುರಿತಂತೆ ಸರಕಾರದ ಮಟ್ಟದಲ್ಲಿ ಚರ್ಚೆ ಮಾಡಿ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದರು.

Tags: