Khanapur

ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್

Share

ಖಾನಾಪುರ ತಾಲೂಕಿನ ವಿವಿಧ ಯುವಕ ಸಂಘಗಳಿಗೆ ಕ್ರೀಡಾ ಸಾಮಾಗ್ರಿಗಳನ್ನು ಶಾಸಕಿ ಡಾ. ಅಂಜಲಿ ನಿಂಬಾಳ್ಕರ್ ವಿತರಿಸಿದರು.

ಹೌದು ಖಾನಾಪೂರ ತಾಲೂಕಿನ ವಿವಿಧ ಯುವಕ ಸಂಘಗಳಿಗೆ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ಕ್ರೀಡಾ ಸಾಮಗ್ರಿಗಳನ್ನು ವಿತರಿಸಿದರು.

ಕ್ರೀಡಾ ಜಗತ್ತಿನ ಸ್ಪರ್ಧೆಯಲ್ಲಿ ಶಾಸಕಿ ಡಾಕ್ಟರ್ ಅಂಜಲಿ ನಿಂಬಾಳ್ಕರ್ ಅವರು ಕೂಡಾ ಒಬ್ಬ ಕ್ರೀಡಾಪಟು ಕೂಡಾ ಹೌದು ಇದಕ್ಕಾಗಿ ಖಾನಾಪೂರ ಯುವ ಪೀಳಿಗೆ ಕ್ರೀಡೆಯಲ್ಲಿ ಆಸಕ್ತಿವಹಿಸಬೇಕೆಂದು ಮೇಲಿಂದ ಮೇಲೆ ತಮ್ಮ ಅಂಜಲಿ ತಾಯಿ ಫೌಂಡೇಶನ್ ವತಿಯಿಂದ ಯುವ ಪೀಳಿಗೆ ಕ್ರೀಡೆಯಲ್ಲಿ ಆಯೋಜಿಸುತ್ತಾ ಇರುತ್ತಾರೆ ಕ್ರೀಡಾ ಜಗತ್ತಿನಲ್ಲಿ ತಾಲೂಕಿನ ಯುವ ಪೀಳಿಗೆ ಹೆಸರು ಮಾಡುವ ಉದ್ದೇಶದಿಂದ ಯುವ ಜನ ಸೇವಾ ಮತ್ತು ಕ್ರೀಡಾ ಇಲಾಖೆಯ ವತಿಯಿಂದ ತಾಲೂಕಿನ ವಿವಿಧ ಯುವಕ ಸಂಘಗಳಿಗೆ ವಿಶೇಷ ಆಸಕ್ತಿ ವಹಿಸಿ ಈ ಸಾಮಗ್ರಿಗಳನ್ನು ವಿತರಿಸಿದರು.
ಈ ಸಂದರ್ಭದಲ್ಲಿ ತಾಲೂಕಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

 

Tags: