ನಿಸರ್ಗ ರಕ್ಷಣೆ ದೇಶದ ಆರೋಗ್ಯದ ಅಡಿಪಾಯವಾಗಿದ್ದು ಈ ನಿಟ್ಟಿನಲ್ಲಿ ಅಜೀತ ಕರಿಗಾರ ಅವರು ನಿಸರ್ಗ ಪ್ರೀತಿ ಹಾಗೂ ರಕ್ಷಣೆಯನ್ನು ಬನ್ನಿಸುವ ಟೈಮ್ ಟೂ ಎಕ್ಸಪ್ಲೋರ್ ಕಾವ್ಯ ಸಂಕಲನ ಇಂದಿನ ಸಮಾಜಕ್ಕೆ ಅತ್ಯಾವಶ್ಯಕವಾಗಿತ್ತು ಸಾಹಿತಿ ಡಾ. ದಯಾನಂದ ನೂಲಿ ಹೇಳಿದರು.
ಅವರು ಚಿಕ್ಕೋಡಿ ಪಟ್ಟಣದ ಹಿರಿಯ ಸಾಹಿತಿಗಳಾದ ಶಿವಲಿಂಗ ಹಂಜಿ ತೋಟದ ಮನೆಯ ಆವರಣದಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಚಿಕ್ಕೋಡಿ ಯುವ ಘಟಕದ ಸಹಯೋಗದಲ್ಲಿ ಅಜೀತ ಕರಿಗಾರ ಅವರು ಬರೆದ ಟೈಮ್ಸ್ ಟೂ ಎಕ್ಸಪ್ಲೋರ್ ಗ್ರಂಥ ಲೋಕಾರ್ಪಣೆಮಾಡಿ ಮಾತನಾಡಿ, ನಿಸರ್ಗ ರಕ್ಷಣೆಯನ್ನು ಜನರಿಗೆ ಮನವರಿಕೆ ಹಾಗೂ ಅರಿವು ಮೂಡಿಸುವ ಉದ್ದೇಶ ಟೈಮ್ ಟೂ ಎಕ್ಸಪ್ಲೋರ್ ಕವನ ಸಂಕಲನ ಮೂಲಕ ಹೊರಬಂದಿದೆ ಎಂದರು.
ಟೈಮ್ ಟೂ ಎಕ್ಸಪ್ಲೋರ್ ಕವನ ಸಂಕಲನದಲ್ಲಿ ಕುಟುಂಬ ಸಾಮರಸ್ಯ,ನಿಸರ್ಗ ರಕ್ಷಣೆ ಹಾಗೂ ಕರೋನಾ ಸಂದರ್ಭದಲ್ಲಿಯ ಅನುಭವಗಳನ್ನು ಕವಿ ಹೇಳಿರುವುದು ಶ್ಲಾಘನೀಯ ಎಂದರು.
ಹಿರಿಯ ಸಾಹಿತಿ ಹಾಗೂ ಜಾಗತಿಕ ಲಿಂಗಾಯತ ಮಹಾಸಭಾ ಚಿಕ್ಕೋಡಿ ಜಿಲ್ಲಾ ಅಧ್ಯಕ್ಷ ವಿಶ್ರಾಂತ ಪ್ರಾಧ್ಯಾಪಕ ಶಿವಲಿಂಗ ಹಂಜಿ ಪ್ರಾಸ್ತಾವಿಕವಾಗಿ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಕವಿಗಳ ಕೊರತೆ ಇದೆ. ಕವಿಯಾಗುವುದು ಆ ನೆಲದ ಪುಣ್ಯ ಕಾವ್ಯಕ್ಕೆ ಮಾತ್ರ ಭುಮಿ ಮೇಲೆ ಶಾಶ್ವತ ನೆಲೆ ಇದೆ. ಯುವ ಪೀಳಿಗೆಗೆ ಪ್ರೋತ್ಸಾಹ ನೀಡುವ ಗ್ರಂಥ ಇದಾಗಿದೆ ಎಂದು ತಿಳಿಸಿದರು.
ಟೈಮ್ ಟೂ ಎಕ್ಸಪ್ಲೋರ್ ಕವನ ಸಂಕಲನದ ಲೇಖಕ ಅಜೀತ ಕರಿಗಾರ ಮಾತನಾಡಿ, ನನ್ನ ದಿನದ ಕಾರ್ಯದ ಸಮಯದಲ್ಲಿ ನಾನು ಕಂಡ ನಿಸರ್ಗದ ಉಲ್ಲೇಖ ಈ ಪುಸ್ತಕದಲ್ಲಿದೆ. ಯಾವದೇ ಪ್ರಾಣಿ, ಪಕ್ಕಿಗಳ ಬಂಧನದ ನಂತರದ ಬಿಡುವು ಅವುಗಳ ಸ್ವಾತಂತ್ರ‍್ಯ ನಮ್ಮ ಮನದುಂಬಿಸುತ್ತದೆ.ಮನುಷ್ಯ ನಿಸರ್ಗ ಪ್ರಿತಿಯಿಂದ ಕಾನುವುದರ ಜೊತೆಗೆ ಅದರ ರಕ್ಷಣೆ ಹಾಗೂ ಸ್ವಚ್ಛತೆ ಅತ್ಯವಶ್ಯಕ ಎಂದರು.
ಅಧ್ಯಕ್ಷತೆಯನ್ನು ಸಾವಯವ ಕೃಷಿಕ ಹಾಗೂ ಉದ್ಯಮಿ ಶಿವಮೂರ್ತಿ ಪಡ್ಲಾಳೆ ವಹಿಸಿದ್ದರು. ಜವಳಿ ವರ್ತಕ ರವೀಂದ್ರ ಹಂಪನ್ನವರ ಎಂ.ಎ.ಪಾಟೀಲ ದೈವಿಕ ಅಡಕೆ,ಲಕ್ಷ್ಮಿ ಕರಿಗಾರ, ನಂದಿನಿ ಬಾವಚೆ,ತುಕಾರಾಮ ಕೋಳಿ, ಜಾಗತಿಕ ಲಿಂಗಾಯತ ಮಹಾಸಭಾದ ಯುವ ಘಟಕ ಸಮೂಹ, ಜಿಲ್ಲಾ ಹೋರಾಟ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ವಿಜಯಲಕ್ಷ್ಮಿ ಹಂಜಿ ಪ್ರಾರ್ಥನೆಗೈದರು. ಸಿದ್ದು ಪಾಟೀಲ ನಿರೂಪಿಸಿದರು.