Hukkeri

ತಹಸಿಲ್ದಾರ ಮೇಲೆ ಹಲ್ಲೆ ಖಂಡಸಿ ಹುಕ್ಕೇರಿ ಸರ್ಕಾರಿ ನೌಕರರ ಸಂಘದಿಂದ ಮನವಿ

Share

ಬೀದರ ಜಿಲ್ಲೆಯ ಹುಮನಾಬಾದ್ ತಾಲೂಕಿನ ತಹಸಿಲ್ದಾರ ಮೇಲೆ ನಡೆದರುವ ಹಲ್ಲೆಯನ್ನು ಖಂಡಿಸಿ ಹುಕ್ಕೇರಿ ತಾಲೂಕಾ ಸರ್ಕಾರಿ ನೌಕರರ ಸಂಘದ ವತಿಯಿಂದ ತಹಸಿಲ್ದಾರ ಡಾ, ಡಿ ಎಚ್ ಹೂಗಾರ ರವರಿಗೆ ಮನವಿ ಸಲ್ಲಿಸಲಾಯಿತು.

ಸಂಘದ ಪ್ರಭಾರಿ ಅದ್ಯಕ್ಷ ಅವಿನಾಶ ಹೋಳೆಪ್ಪಗೋಳ ಮಾತನಾಡಿ ರಾಜ್ಯಾದ್ಯಾಂತ ಸರಕಾರಿ ಅಧಿಕಾರಿಗಳು,ನೌಕರರು ಕರ್ತವ್ಯ ನಿರ್ವಹಿಸುವ ಸಂದರ್ಭಗಳಲ್ಲಿ ಇಂತಹ ಘಟನೆಗಳು ಆಗಿದ್ದಾಂಗೆ ಸಂಭವಿಸುತ್ತಿದ್ದು, ಅದರಲ್ಲೂ ಕ್ಷೇತ್ರ ಇಲಾಖೆಗಳಾದ ಕಂದಾಯ , ಭೂಮಾಪನ, ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್ಯ, ಆರೋಗ್ಯ ಇಲಾಖೆ ಸಿಬ್ಬಂದಿಗಳ ಮೇಲೆ ಹಲ್ಲೆಗಳು ನಡೆಯುತ್ತಿವೆ ಇದರಿಂದ ಆತಂಕ,ಭಯದಿಂದ ಕರ್ತವ್ಯ ನಿರ್ವಹಿಸುವ ವಾತಾವರಣ ಸೃಷ್ಟಿಯಾಗುತ್ತಿದೆ.ಕಾರಣ ಇಂತಹ ಘಟನೆ ಕಾರಣ ಣಾದವರ ಮೇಲೆ ಕಠಿಣ ಕ್ರಮ ಜಾರಿಮಾಡಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಗ್ರೇಡ್ 2 ತಹಸಿಲ್ದಾರ ಕಿರಣ ಬೆಳವಿ, ನೌಕರ ಸಂಘದ ಪದಾಧಿಕಾರಿಗಳಾದ ಎನ್ ಆರ್ ಪಾಟೀಲ, ಎಸ್ ಎಸ್ ಕರಿಗಾರ, ಎ ಎಸ್ ಹಿರೇಮಠ, ಬಿ ಕೆ ಚೌಗಲಾ, ನವಿನ ಬಾಯಿನಾಯ್ಕ, ಸಂತೋಷ ಪಾಟೀಲ, ಎನ್ ಬಿ ಗುಡಸಿ, ಎ ಆರ್ ಚಟ್ನಿ, ಗೌತಮ ಚಲವಾದಿ, ನಾಗಲಿಂಗ ಮಾಳಗಿ, ವಿಠ್ಠಲ ಬುಕನಟ್ಟಿ, ಸಂತೋಷ ನಾಯ್ಕರ, ಎಮ್ ಎಮ್ ಬಾಲದಾರ, ಶಾನೂರ ಮುಲ್ತಾನಿ ಮೊದಲಾದವರು ಉಪಸ್ಥಿತರಿದ್ದರು.

Tags: