ನನ್ನನ್ನು ನೀವು ಬೆಳೆಸಿದ್ದಿರಿ, ಇನ್ಮುಂದೆ ನೀವೇ ಕೈ ಹಿಡಿಯಬೇಕು ಎಂದು ಮಾಧ್ಯಮದ ಎದುರು ಭಾವುಕರಾಗಿ ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಕಣ್ಣೀರು ಹಾಕಿದ ಘಟನೆ ನಡೆದಿದೆ.
ಹೌದು ಹುಬ್ಬಳ್ಳಿಯಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡುತ್ತಿದ್ದ ವೇಳೆ ಭಾವುಕರಾಗಿಯೇ ಮಾತನಾಡಿದ ಎಂಎಲ್‍ಸಿ ಸಿ.ಎಂ.ಇಬ್ರಾಹಿಂ ಕಾಂಗ್ರೆಸ್ ಪಕ್ಷದಿಂದ ಹೊರಬಂದಿದ್ದೇನೆ. ವಾಪಸ್ ಹೋಗುವ ಪ್ರಶ್ನೆಯೇ ಇಲ್ಲ. ಮುಂದಿನ ದಾರಿ ನೋಡೋಣ. ನನ್ನ ಶಾಪ ಭಾರಿ ಕೆಟ್ಟದ್ದು, ಇವಾಗ ತಟ್ಟುತ್ತಿದೆ. ನಾನು ವಿಷಕಂಠ ಇದ್ದಂಗೆ ಎಲ್ಲವೂ ನುಂಗಿಕೊಂಡು ಇದ್ದೆ. ನಂಗೆ ಎಂಎಲ್‍ಸಿ ಮಾಡಿದ್ದೆ ಅಂತ ಸಿದ್ದರಾಮಯ್ಯ ಹೇಳ್ತಾರೆ. ನಾಳೆನೇ ರಾಜಿನಾಮೆ ಕೊಡ್ತಿನಿ ಎಂದರು.
ಇನ್ನು ಸಿದ್ದರಾಮಯ್ಯ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸ್ಪರ್ಧೆ ಮಾಡಲಿ. ಯಾರು ಗೆಲ್ಲುತ್ತಾರೆ ನೋಡೋಣ ಎಂದು ಬಹಿರಂಗ ಸವಾಲು ಹಾಕಿದ ಸಿ.ಎಂ.ಇಬ್ರಾಹಿಂ ಡಿಕೆಶಿ ಬಹಳ ದೊಡ್ಡವರು ನಮ್ಮಂತವರನೆಲ್ಲಾ ಯಾಕೆ ಮಾತನಾಡಿಸುತ್ತಾರೆ. ಆರು ತಿಂಗಳ ಹಿಂದೆ ಎಲ್ಲವೂ ಸರಿ ಮಾಡ್ತೀನಿ ಅಂದ್ರೂ. ಆದರೆ ಏನು ಆಗಿಲ್ಲ ಡಿಕೆಶಿ, ಸಿದ್ದರಾಮಯ್ಯ ಇಬ್ಬರ ವಿರುದ್ಧವೂ ವಾಗ್ದಾಳಿ ಮಾಡಿದರು.
ಇವತ್ತು ಎಸ್.ಆರ್.ಪಾಟೀಲ್ ಭೇಟಿಯಾಗ್ತಾರೆ. ಏನ್ ಆಗುತ್ತದೆ ನೋಡೋಣ. ನಮ್ಮ ಜೊತೆ ಯಾರ ಬರುತ್ತಾರೋ ಅವರನ್ನು ಕರೆದುಕೊಂಡು ಹೋಗುತ್ತೇನೆ. ಇಲ್ಲಿ ಅಲಿಂಗ ಮಾಡುತ್ತೇನೆ ಅಲ್ಪಸಂಖ್ಯಾತ-ಲಿಂಗಾಯತರು ಅಲ್ಲಿ ಗೌಡ-ಅಲ್ಪಸಂಖ್ಯಾತರು ಮಾಡುತ್ತೇನೆ ಎನ್ನುವ ಮೂಲಕ ಸಿದ್ದರಾಮಯ್ಯ ಅವರ ಅಹಿಂದಕ್ಕೆ ಸಿಎಂ ಇಬ್ರಾಹಿಂ ಟಕ್ಕರ್ ಕೊಟ್ಟರು.
ಒಟ್ಟಿನಲ್ಲಿ ಕಾಂಗ್ರೆಸ್ ಪಕ್ಷದಿಂದ ಹೊರಗೆ ಬಂದಿರುವ ಸಿ.ಎಂ.ಇಬ್ರಾಹಿಂ ಮುಂದಿನ ರಾಜಕೀಯ ನಡೆ ಸಧ್ಯ ತೀವ್ರ ಕುತೂಹಲ ಮೂಡಿಸಿದ್ದು. ಮುಂದೆ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.