ಮುರುಗೇಶ್ ನಿರಾಣಿ ಯಾವ ರಾಜ್ಯಕ್ಕೆ ಸಿಎಂ ಆಗ್ತಾರೆ ಪಾಕಿಸ್ತಾನಕ್ಕಾ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಕಿಡಿಕಾರಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಬಸನಗೌಡ ಪಾಟೀಲ್ ಯತ್ನಾಳ್ ಕರ್ನಾಟಕದಲ್ಲಿ ಮುಖ್ಯಮಂತ್ರಿ ಸ್ಥಾನ ಖಾಲಿ ಇಲ್ಲ. ಬೊಮ್ಮಾಯಿ ಸಿಎಂ ಆಗಿದ್ದಾರೆ. ನಿರಾಣಿ ಏನು ಗುರಾಣಿನಾ ಎಂದು ಹರಿಹಾಯ್ದರು. ಸಮುದಾಯ ಒಡೆಯುವ ನಿರಾಣಿ ಅವರ ಪ್ರಯತ್ನ ಈಡೇರುವುದಿಲ್ಲ. ಅವರು ಎಂದಿಗೂ ಉದ್ಧಾರ ಆಗಲ್ಲ, ಹೀಗೇ ಮಠಗಳನ್ನು ಕಟ್ಟುತ್ತಿದ್ದರೆ, ಧರ್ಮದ ವಿಚಾರದಲ್ಲಿ ಕೈ ಹಾಕಿದರೆ ರಾಜಕೀಯವಾಗಿ ಅಂತ್ಯವಾಗುತ್ತಾರೆ ಎಂದು ಕುಟುಕಿದರು.
ಇನ್ನು ಕರ್ನಾಟಕದಲ್ಲಿ ಮೂರನೇ ಮಠ ಸ್ಥಾಪಿಸಿದರೆ ಅಂಥವರ ಪರಿಸ್ಥಿತಿ ಮೂರಾಬಟ್ಟೆ ಆಗುತ್ತೆ. ಮಠ ಕಟ್ಟುವವರು ಮಣ್ಣು ತಿನ್ನುತ್ತಾರೆ ಎಂದು ಕಿಡಿಕಾರಿದ ಯತ್ನಾಳ ಮಠ ಸ್ಥಾಪಿಸುವುದು ಎಂದರೆ ಬ್ಯಾಂಕಿನ ಶಾಖೆಗಳನ್ನು ತೆಗೆದಂತೆ ಎಂದು ಕೆಲವರು ಅಂದುಕೊಂಡಿರಬಹುದು ಎಂದರು.