ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ದುಂಡವ್ವ ಹಿರೇಕುರಬರ ಎನ್ನುವ ಅಂಗವಿಕಲ ಮಹಿಳೆಗೆ ಶಾಸಕ ಗಣೇಶ ಹುಕ್ಕೇರಿ ಅವರು ದ್ವಿಚಕ್ರ ವಾಹನ ವಿತರಿಸಿದರು..
ಚಿಕ್ಕೋಡಿ ತಾಲೂಕಿನ ಅಂಕಲಿ ಗ್ರಾಮದಲ್ಲಿ ವಿಕಲಚೇತನ ಇಲಾಖೆಯಿಂದ ಮಂಜೂರಾದ ದ್ವಿಚಕ್ರ ವಾಹನಯೊಂದನ್ನು ಫಲಾನುಭವಿಯಾದ ದುಂಡವ್ವ ಹಿರೇಕುರಬರ ಅವರಿಗೆ ಶಾಸಕ ಗಣೇಶ ಹುಕ್ಕೇರಿ ಅವರು ದ್ವಿಚಕ್ರವನ್ನು ವಿತರಿಸಿದರು.. ನಂತರ ಇನ್ ನ್ಯೂಸ್ ಜೊತೆ ಶಾಸಕ ಗಣೇಶ ಹುಕ್ಕೇರಿ ಮಾತನಾಡಿ
ವಿಕಲಚೇತನ ಇಲಾಖೆ ಹಾಗೂ ಅನ್ನಪೂರ್ಣೇಶ್ವರಿ ಫೌಂಡೇಶನ್ ವತಿಯಿಂದ ವಿಕಲಚೇತನರಿಗೆ ಸಕಲ ಸೌಲಭ್ಯ ಕಲ್ಪಿಸಲು ನಿರಂತರ ಪ್ರಯತ್ನ ಮಾಡಲಾಗುತ್ತಿದ್ದು, ಫಲಾನುಭವಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಶಾಸಕ ಗಣೇಶ ಹುಕ್ಕೇರಿ ಮನವಿ ಮಾಡಿಕೊಂಡರು.
ನಂತರ ದ್ವಿಚಕ್ರ ವಾಹನದ ಫಲಾನುಭವಿ ದುಂಡವ್ವ ಹಿರೇಕುರಬರ ಅವರು ಮಾತನಾಡಿ ನನಗೆ ಶಾಸಕ ಗಣೇಶ ಹುಕ್ಕೇರಿ ಅವರು ದ್ವಿಚಕ್ರ ವಾಹನವನ್ನು ಮಂಜೂರು ಮಾಡಿಸಿಕೊಟ್ಟಿದ್ದಕ್ಕೆ ಅವರಿಗೆ ನಾನು ಕೃತಜ್ಞತೆ ಸಲ್ಲಿಸುತ್ತೇನೆ ಎಂದರು..
ಈ ಸಂಧರ್ಭದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ರಂಜಿತ ಶಿರಶೇಟ, ವಿಕ್ರಮ ಶಿರಶೇಟ ಪಾಂಡುರಂಗ ವಡ್ಡರ, ಪಾಪು ಕಿಲೇಕತ್ತ, ಜೋತ್ಯಪ್ಪ ಕೋಕಣೆ, ಶಿವಾಜಿ ಕೋಠಿವಾಲೆ, ಸುನೀಲ ಕೋರೆ, ಅಲ್ಲಾಬಕ್ಷ ಪಟ್ವೇಗಾರ ಚಂದ್ರಕಾಂತ ಕುರೆ, ರಾಜು ಗುಂಡ್ಕಲ್ಲೆ, ಬಾಳು ಲೋಕರೆ, ಚಿದಾನಂದ ಕೋಳಿ, ಸಾಗರ ಕಮತೆ, ಸದಾಶಿವ ಮಗದುಮ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…