ಕಾಂಗ್ರೆಸ್ ಪಕ್ಷ ಅನ್ನೋದು ಒಂದು ಕಿಟಿಕ್ ಪಾರ್ಟಿ ಇದ್ದಂಗೆ. ಅಲ್ಲಿನ ನಾಯಕರು ಬರಿ ಕಿರಿಕ್ ಮಾಡ್ತಾರೆ. ಇತ್ತೀಚೆಗೆ ಅವರು ಸುಳ್ಳು ಹೇಳೋದು ಕಲಿತಿದ್ದಾರೆಂದು ಕಾಂಗ್ರೆಸ್ ವಿರುದ್ಧ ಸಚಿವ ಶ್ರೀರಾಮುಲು ಲೇವಡಿ ಮಾಡಿದರು.
ನಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10-20 ಜನ ಬಿಜೆಪಿ ತೊರೆದು ಕಾಂಗ್ರೆಸ್ ಸೇರುತ್ತಾರೆ ಅಂತ ಹೇಳ್ತಾರೆ, ಎಷ್ಟು ಸುಳ್ಳು ಹೇಳ್ತಾರೆ ನೋಡಿ. ಸೋಲಿನ ಹತಾಶೆಯಿಂದ ಪಾಪ ಈ ರೀತಿ ಹೇಳ್ತಿದ್ದಾರೆ. ಇಲ್ಲಿ ಅಷ್ಟೇ ಅಲ್ಲದೆ, ಗೋವಾದಲ್ಲಿ ಹೋಗಿ ಸುಳ್ಳು ಹೇಳ್ತಿದ್ದಾರೆ. ಕಾಂಗ್ರೆಸ್ ನವರು ಯಾವುದೇ ಸುದ್ದಿಯಲ್ಲಿಲ್ಲ, ಹಾಗಾಗಿ ಟಿ ಆರ್ ಪಿ ಗಾಗಿ ಈ ರೀತಿ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಸಿಎಂ ಇಬ್ರಾಹಿಂ ಕಾಂಗ್ರೆಸ್ ತೊರೆದ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿ, ಅವರೊಬ್ಬರು ಪಕ್ಷದ ಹಿರಿಯ ನಾಯಕರು. ವಿಪಕ್ಷ ನಾಯಕ ಸೇರಿದಂತೆ ಕಾಂಗ್ರೆಸ್ ಅಧ್ಯಕ್ಷ ಆಗುವ ಸಾಮರ್ಥ್ಯ ಇದೆ. ಕಾಂಗ್ರೆಸ್ ಮುಸ್ಲಿಂರ ವೋಟ್ ಮಾತ್ರ ಗುದ್ದಿ ಗುದ್ದಿ ಹಾಕಿಸಿಕೊಂಡಿದ್ದಾರೆ. ಆದ್ರೆ ಇದೀಗ ಅವರಿಗೆ ಬೆನ್ನಿಗೆ ಚೂರಿ ಹಾಕುವ ಕೆಲಸವನ್ನ ಸಿದ್ದರಾಯಮ್ಯ ಮಾಡಿದ್ರು. ಅವರ ಮತಗಳನ್ನು ಪಡೆದು ಅವರಿಗೆ ಮೋಸ ಮಾಡಿದ್ರು. ರಾಜ್ಯದಲ್ಲಿ ಶೇಕಡಾ 18 ರಷ್ಟಿರುವ ಮುಸ್ಲಿಂರಿದ್ದಾರೆ. ಆದ್ರೆ ಅವರಿಗೆ ಯಾವುದೇ ಸ್ಥಾನಮಾನವನ್ನ ಕಾಂಗ್ರೆಸ್ ನೀಡಿಲ್ಲ. ಸಿದ್ದರಾಯಮ್ಯ ನಾನೇ ಅಹಿಂದ ನಾಯಕ ಅಂತ ಹೇಳಿಕೊಂಡು ಓಡಾಡ್ತಾರೆ.
ಆದ್ರೆ ಸಿಎಂ ಇಬ್ರಾಹಿಂ ಅವರ ಪ್ರಶ್ನೆಗೆ ಉತ್ತರ ಕೊಡಲಿ ಈಗ ಎಂದರು.
ಇನ್ನು ಇದೇ ವೇಳೆ ಮಾಜಿ ಸಿಎಂ ಸಿದ್ದರಾಮಯ್ಯಗೆ 5 ಕಡೆಯಿಂದ ಕ್ಷೇತ್ರದ ಜನರು ಕರೆಯುತ್ತಿದ್ದಾರಂತೆ. ಅವರಿಗೆ 224 ಕಡೆಯೂ ಕರೆದಿರಬಹುದು ಅಂತ ಸಿದ್ದರಾಮಯ್ಯ ವಿರುದ್ಧ ವ್ಯಂಗ್ಯವಾಡಿದರು.