Chikkodi

ನಿಪ್ಪಾಣಿ ನಗರಸಭೆ ಯಡವಟ್ಟು: ತಾವೇ ನೇಮಕಾತಿ ಮಾಡಿಕೊಂಡಿದ್ದ ಶಿಕ್ಷಕಿ ಅಮಾನತ್ತು..!

Share

ನಿಪ್ಪಾಣಿ ಪಟ್ಟಣದ ಶ್ರೀಮತಿ ಶ್ಯಾಮಲಾ ಅರ್ಜುನ ಕಾಂಬಳೆ 2017ರಲ್ಲಿ ಶಿಕ್ಷಕಿಯಾಗಿ ನೇಮಕಾತಿ ಮಾಡಿಕೊಂಡ ನಿಪ್ಪಾಣಿ ನಗರಸಭೆಯೇ ಇದೀಗ ಇವರು ಶಿಕ್ಷಕ ಹುದ್ದೆಗೆ ಅರ್ಹತೆ ಹೊಂದಿಲ್ಲ ಅಂತಾ ಹುದ್ದೆಯಿಂದ ತೆಗೆದು ಹಾಕಿದ್ದಾರೆ.ಈ ಕುರಿತಂತೆ ಶ್ಯಾಮಲಾ ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ. ಈ ಕುರಿತಂತೆ ಒಂದು ವರದಿ ಇಲ್ಲಿದೆ ನೋಡಿ..

ಶ್ರೀಮತಿ ಶ್ಯಾಮಲಾ ಅರ್ಜುನ ಕಾಂಬಳೆ ಕಳೆದ ನಾಲ್ಕು ವರ್ಷಗಳಿಂದ ನಿಪ್ಪಾಣಿಯ ಮುನಿಸಿಪಲ್ ಸ್ಕೂಲ್ ನಲ್ಲಿ ಮುಖ್ಯ ಶಿಕ್ಷಕಿಯಾಗಿದ್ದ ಶ್ಯಾಮಲಾ ಮನೆ ಮನೆಗೆ ತೆರಳಿ ಮಕ್ಕಳ ಹಾಜರಾತಿ ಹೆಚ್ಚಿಸಿದ ಕೀರ್ತಿ ಇವರದ್ದು. ನೂರೋ ಇನ್ನೂರೋ ಇದ್ದ ಪಟ ಸಂಖ್ಯೆ ನಾಲ್ಕು ವರ್ಷಗಳಲ್ಲಿ ದುಪ್ಪಟ್ಟಾಗಿದ್ದು ಅಲ್ಲದೇ ಕಲಿಕಾ ಗುಣಮಟ್ಟ ಕೂಡ. ಇμÉ್ಟಲ್ಲ ಸಾಧನೆ ಮಾಡಿರೋ ಶ್ಯಾಮಲಾ ಅವರ ವಿದ್ಯಾರ್ಹತೆ ಎಮ್ ಸಿ ಎ. ಅರೇ ಇದೇನಿದು? ಎಮ್‍ಸಿಎ ಓದಿರೋ ಇವರು ಅದ್ಹೆಂಗೆ ಶಾಲಾ ಶಿಕ್ಷಕಿಯಾದ್ರೂ ಅಂದ್ರಾ? ಇಲ್ಲೇ ಆಗಿರೋದು ಯಡವಟ್ಟು.

2017ರಲ್ಲಿ ಶಿಕ್ಷಕಿಯಾಗಿ ನೇಮಕಾತಿ ಮಾಡಿಕೊಂಡ ನಿಪ್ಪಾಣಿ ನಗರಸಭೆಯೇ ಇದೀಗ ಇವರು ಶಿಕ್ಷಕ ಹುದ್ದೆಗೆ ಅರ್ಹತೆ ಹೊಂದಿಲ್ಲ ಅಂತಾ ಹುದ್ದೆಯಿಂದ ತೆಗೆದು ಹಾಕಿದ್ದಾರೆ. ಕಾಂಗ್ರೆಸ್ ಆಡಳಿತ ಇದ್ದಾಗ ನೇಮಕಾತಿ ಮಾಡಿ, ಇದೀಗ ಬಿಜೆಪಿ ಅಧಿಕಾರದಲ್ಲಿ ಇದ್ದು, ತನ್ನನ್ನು ಉದ್ದೇಶ ಪೂರ್ವಕವಾಗಿಯೇ ತೆಗೆದು ಹಾಕಿದ್ದಾರೆ ಎಂಬ ಆರೋಪ ಶ್ಯಾಮಲಾ ಕಾಂಬಳೆ ಅವರದ್ದು.

ಇನ್ನೂ, ಈ ಕುರಿತು ಪ್ರಸ್ತುತ ನಗರಸಭೆಯ ಅಧ್ಯಕ್ಷ ಜಯವಂತ ಬಾಟಲೆ ಅವರನ್ನು ಕೇಳಿದ್ರೆ , ಶ್ಯಾಮಲಾ ಅವರ ವಿದ್ಯಾರ್ಹತೆ ಎಮ್ ಸಿ ಎ ಆಗಿದ್ದು, ಶಾಲಾ ಶಿಕ್ಷಕಿಯಾಗಿ ಅವರನ್ನು ಈ ಹಿಂದಿನವರು ಯಾವ ಆಧಾರದಿಂದ ನೇಮಕ ಮಾಡಿದ್ದಾರೋ ಗೊತ್ತಿಲ್ಲ. ಶಿಕ್ಷಣ ಇಲಾಖೆಯ ನಿಯಮದ ಅನ್ವಯವೇ ಅವರನ್ನು ಸೇವೆಯಿಂದ ತೆಗೆಯಲಾಗಿದ್ದು, ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದು ಹೇಳುತ್ತಿದ್ದಾರೆ.

ಏನೇ ಇರಲಿ, ನಾಲ್ಕು ವರ್ಷಗಳ ಹಿಂದೆ ನಿಪ್ಪಾಣಿ ನಗರಸಭೆ ಕಚೇರಿಯಿಂದ ನೇಮಕಾತಿ ಮಾಡಿಕೊಂಡು ಇದೀಗ ಅವರೇ ಸೇವೆಯಿಂದ ಶ್ಯಾಮಲಾ ಕಾಂಬಳೆ ಅವರನ್ನು ತೆಗೆದು ಹಾಕಿದ್ದು ಯಾವ ನ್ಯಾಯ..?

Tags: