Accident

ಬೈಕ್ ಟಿಪ್ಪರಿಗೆ ಡಿಕ್ಕಿ ಹೊಡೆದ ಪರಿಣಾಮ ಮಗ ಸ್ಥಳದಲ್ಲೆ ದುರ್ಮರಣ, ತಾಯಿ ಗಂಭೀರ ಗಾಯ: ಕಾಗವಾಡದಲ್ಲಿ ಘಟಣೆ.

Share

ಕಾಗವಾಡ:

ಬೈಕ್, ಟಿಪ್ಪರಿಗೆ ಡಿಕ್ಕಿ ಹೊಡೆದ ಪರಿಣಾಮ ಮಗ ಸ್ಥಳದಲ್ಲೆ ದುರ್ಮರಣ, ತಾಯಿ ಗಂಭೀರ ಗಾಯಗೊಂಡ ಘಟಣೆ ಕಾಗವಾಡದಲ್ಲಿ ಸಂಭವಿಸಿದೆ.

ಅರಿಫ್ ಮೋಮಿನ(40) ಸಾ. ಇಚ್ಛಲಕರಂಜಿ, ಜವಾಹರ ನಗರ ಸ್ಥಳದಲ್ಲಿ ದುರ್ಮರಣ ಹೊಂದಿದ್ದು, ತಾಯಿ ನಜಮಾ ಮೋಮಿನ(60) ಗಂಭೀರ ಗಾಯಗೊಂಡಿದ್ದು, ಉಪಚಾರಕ್ಕಾಗಿ ಮಿರಜದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ.

ಶನಿವಾರ ಮಧ್ಯಾಹ್ನ 1 ಗಂಟೆಗೆ ಮಹಾರಾಷ್ಟ್ರದ ಇಚ್ಛಲಕರಂಜಿಯಿಂದ ತನ್ನ ಮಾವನ ಮನೆಗೆ ಬೈಕ್ ಮೇಲಿಂದ ತಾಯಿಯನ್ನು ಕರೆದುಕೊಂಡು ಅಥಣಿಗೆ ಹೋಗುತ್ತಿರುವ ಯುವಕನ ಬೈಕ್‍ವು ಟಿಪ್ಪರ್(ಟ್ರಕ್) ನಂ. ಕೆ.ಎ.23-ಎ-5689 ಗೆ ಹಿಂಬದಿಯಿಂದ ಡಿಕ್ಕಿ ಹೊಡೆದ ಪರಿಣಾಮ ದುರ್ಘಟಣೆ ಸಂಭವಿಸಿದೆ. ಕಾಗವಾಡ ಪಿಎಸ್‍ಐ ಹಣುಮಂತ ನರಳೆ ಸ್ಥಳಕ್ಕೆ ಆಗಮಿಸಿ ತನಿಖೆ ಕೈಗೊಂಡಿದ್ದಾರೆ.

Tags: