Accident

ಬೈಕ್ ಸ್ಕಿಡ್ ಪಶುಸಂಗೋಪನಾ ನೌಕರ ಸಾವು

Share

ಬೈಕ್ ಸವಾರನೊಬ್ಬ ಆಯ ತಪ್ಪಿ ಪಾದಚಾರಿಗೆ ಗುದ್ದಿ ಬೈಕ್ ಸ್ಕಿಡ್ ಆಗಿ ಬಿದ್ದು ಸ್ಥಳದಲ್ಲಿ ಸಾವನ್ನಪ್ಪಿದ ಘಟನೆ ಹುಬ್ಬಳ್ಳಿ ಕಲಘಟಗಿ ರಸ್ತೆಯಲ್ಲಿ ನಡೆದಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಪಶು ಸಂಗೋಪನಾ ಇಲಾಖೆಯ ನೌಕರ ಶ್ರೀಕಾಂತ ನಿಂಬಾಳ್ಕರ್ (37) ಮೃತ ಬೈಕ್ ಸವಾರನಾಗಿದ್ದು, ನೌಕರಿಗೆಂದು ಹೋಗುತ್ತಿರುವಾಗ ಬೈಕ್ ಸ್ಕಿಡ್ ಆಗಿ ಪಾದಾಚಾರಿಗೆ ಗುದ್ದಿದ್ದಾನೆ.
ತಲೆಗೆ ಪೆಟ್ಟಾಗಿ ತೀವ್ರ ರಕ್ತಸ್ರಾವದಿಂದ ಶ್ರೀಕಾಂತ ಮೃತಪಟ್ಟ ಸ್ಥಳದಲ್ಲೆ ಸಾವನ್ನಪ್ಪಿದ್ದಾನೆ. ಪಾದಚಾರಿ ಸಿದ್ದು ಎಮ್ಮೆಟ್ಟಿಗೆ ಗಂಭೀರ ಗಾಯ, ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಈ ಅಪಘಾತದ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಈ ಕುರಿತು ಕಲಘಟಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Tags: