Uncategorized

ಕುಂದಾನಗರಿಯಿಂದ ಅಯೋಧ್ಯೆಗೆ ತೆರಳುತ್ತಿರುವ 200 ರಾಮಭಕ್ತರನ್ನು ಬೀಳ್ಕೊಟ್ಟ ವಿಎಚ್ ಪಿ

Share

ಭಾರತೀಯ ರೈಲ್ವೆ ಇಲಾಖೆಯ ಬೆಳಗಾವಿ-ಅಯೋಧ್ಯೆ ವಿಶೇಷ ಅಯೋಧ್ಯೆ ರೈಲಿಗೆ ಬೆಳಗಾವಿಯಲ್ಲಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮಿಗಳು ಹಾಗು ವಿಶ್ವ ಹಿಂದೂ ಪರಿಷತನಿಂದ ಭವ್ಯ ಚಾಲನೆ ನೀಡಲಾಯಿತು

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರದ ಅದ್ಧೂರಿ ಪ್ರತಿಷ್ಠಾಪನಾ ಸಮಾರಂಭದ ನಂತರ, ರಾಮ ಭಕ್ತರಿಗಾಗಿ ಅಯೋಧ್ಯೆ ವಿಶೇಷ ರೈಲು ಇಂದು ಅಯೋಧ್ಯೆಗೆ ತೆರಳಿದೆ.
ಬೆಳಗಾವಿಯಿಂದ ಅಯೋಧ್ಯೆ ವಿಶೇಷ ರೈಲನ್ನು ಸ್ವಾಗತಿಸುವ ಹಾಗೂ ಅಯೋಧ್ಯೆಗೆ ತೆರಳುವ ಭಕ್ತರಿಗೆ ಬೀಳ್ಕೊಡುವ ಸಮಾರಂಭ ಇಂದು ಬೆಳಗಾವಿ ರೈಲು ನಿಲ್ದಾಣದಲ್ಲಿ ನಡೆಯಿತು. ಹುಕ್ಕೇರಿ ಹಿರೇಮಠದ ಶ್ರೀ ಚಂದ್ರಶೇಖರ ಶಿವಾಚಾರ್ಯ ಮಹಾಸ್ವಾಮೀಜಿ ಈ ರೈಲಿಗೆ ಪೂಜೆ ಸಲ್ಲಿಸುವ ಜತೆಗೆ ರೈಲಿನ ಸಮೇತ ಶ್ರೀರಾಮನ ದರ್ಶನಕ್ಕೆ ತೆರಳುವ ಭಕ್ತರಿಗೆ ಹಸಿರು ನಿಶಾನೆ ತೋರಿ ಬೀಳ್ಕೊಟ್ಟರು. ಜೈ ಶ್ರೀ ರಾಮ್, ಜೈ ಜೈ ಶ್ರೀ ರಾಮ್ ಎಂದು ಘೋಷಣೆಗಳನ್ನು ಕೂಗುತ್ತಾ ಭಕ್ತರು ಅಯೋಧ್ಯೆಯತ್ತ ಸಾಗಿದರು.

ಈ ಸಂದರ್ಭದಲ್ಲಿ ಬೆಳಗಾವಿ ಹುಕ್ಕೇರಿ ಹಿರೇಮಠದ ಶ್ರೀ ಷ ಬ್ರ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ ರಾಮ ಮಂದಿರ ನಿರ್ಮಾಣ ಆಗುವುದು ಭಾರತೀಯರ ಕನಸು ಅದು ನನಸಾಗಿದೆ ಇಡೀ ಭಾರತದಲ್ಲಿರುವ ಎಲ್ಲಾ ರಾಮಭಕ್ತರು ಅಯೋಧ್ಯೆ ಪುರಕ್ಕೆ ತೆರಳಿ ರಾಮನ ಪ್ರತಿಷ್ಟಾಪನೆಯಲ್ಲಿ ಭಾಗಿಯಾಗಿದ್ದರು . ಆ ಸೌಭಾಗ್ಯ ನಮಗೂ ಕುಡಿ ಬಂದಿತ್ತು ಬೆಳಗಾವಿ ಜಿಲ್ಲೆಯಿಂದ ನಾವು ಪ್ರತಿಸ್ಥಾಪನೆಯಲ್ಲಿ ಭಾಗಿಯಾಗಿದ್ದೆವು ಇವತ್ತು ಬೆಳಗಾವಿ ಜಿಲ್ಲೆಯಿಂದ 200 ಜನ ರಾಮಭಕ್ತರು ವಿಶೇಷ ರೈಲಿನಲ್ಲಿ ಅಯೋಧ್ಯೆಗೆ ರಾಮನ ದರ್ಶನ ಪಡೆಯಲು ತೆರಳುತ್ತಿದ್ದಾರೆ ಎಲ್ಲರಿಗು ಶುಭವಾಗಲಿ ಎಂದು ಹಾರೈಸಿದರು .

ಈ ಸಂದರ್ಭದಲ್ಲಿ ರೈಲ್ವೆ ಅಧಿಕಾರಿ ಆಸಿಫ್ ಹಫೀಜ್ ಮಾತನಾಡಿ ಅಯೋಧ್ಯೆ ವಿಶೇಷ ರೈಲ್ವೇನಲ್ಲಿ ಪ್ರಯಾಣಿಕರಿಗೆ ಎಲ್ಲ ಸೌಲಭ್ಯ ಕಲ್ಪಿಸಲಾಗಿದೆ . ಯಾದಗಿರಿ ಕೊನೆಯ ನಿಲ್ದಾಣವಾಗಿದೆ. ರೈಲ್ವೆ ಇಲಾಖೆಯು ಪ್ರಯಾಣಿಕರು ಸುರಕ್ಷಿತವಾಗಿ ಪ್ರಯಾಣಿಸಲಿ . ಕರ್ನಾಟಕದ ಮೂರನೇ ಹಂತದ ರೈಲು ಇದಾಗಿದ್ದು, ಬೆಳಗಾವಿಯಿಂದ ಬಂದ ಮೊದಲ ರೈಲು ಇದಾಗಿದೆ ಎಂದರು .

ಈ ಸಂದರ್ಭದಲ್ಲಿ ಅನೇಕ ರಾಮ ಭಕ್ತರು ಹಾಗು ವಿಶ್ವ ಹಿಂದೂ ಪರಿಷತ್ ಸದಸ್ಯರು ಭಾಗಿಯಾಗಿದ್ದರು

Tags: