Uncategorized

ಬೆಳಗಾವಿ ಪಾಲಿಕೆ ಆಯುಕ್ತೆಯಾಗಿ ನೇಮಕಗೊಂಡ ರಾಜಶ್ರೀ ಜೈನಾಪುರ ಅವರನ್ನು ಸ್ವಾಗತಿಸಿದ ಪಾಲಿಕೆ ಅಧಿಕಾರಿಗಳು

Share

ಇವತ್ತು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರಾಗಿ ರಾಜಶ್ರೀ ಜೈನಾಪುರ ಅವರು ಅಧಿಕಾರ ವಹಿಸಿಕೊಂಡರು

ರಾಜಶ್ರೀ ಜೈನಾಪುರ ಅವರನ್ನು ಆಯುಕ್ತರಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ ಅಶೋಕ ದುಡಗುಂಟಿ ಅವರನ್ನು ರಾಯಚೂರ ನಗರಕ್ಕೆ ಚುನಾವಣೆ ಹಿನ್ನೆಲೆಯಲ್ಲಿ ವರ್ಗಾವಣೆ ಮಾಡಲಾಗಿತ್ತು. ಜೈನಾಪುರ ಅವರು ಈ ಹಿಂದೆ ಬೆಳಗಾವಿ ಉಪವಿಭಾಗಾಧಿಕರಿಗಳಾಗಿ ಹಾಗು ರಾಣಿ ಚನ್ನಮ್ಮಾ ವಿಶ್ವವಿದ್ಯಾಲಯದ ಆಡಳಿತಾತ್ಮಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು

ನೂತನವಾಗಿ ಅಧಿಕಾರ ವಹಿಸಿಕೊಂಡ ರಾಜಶ್ರೀ ಜೈನಾಪುರ ಅವರನ್ನು ಅರೋಗ್ಯ ಅಧಿಕಾರಿ ಸಂಜಯ ನಾಂದ್ರೇ ಸ್ವಾಗತಿಸಿ ಪುಷ್ಪಗುಚ್ಚ ನೀಡಿ ಅಭಿನಂದಿಸಿದರು


ಈ ಸಂದರ್ಭದಲ್ಲಿ ಪ್ರಭಾವತಿ ಮಾಸ್ತಮರಡಿ , ನಗರ ಸೇವಕ ರವಿ ಸಾಳುಂಕೆ ,ಅಜಿಮ್ ಪಟವೇಗಾರ ,ಶಾಹಿದ್ ಪಠಾಣ ,ರೇಶ್ಮಾ ಬೈರಕದಾರ್ ,ಬಾಬಾಜಾನ್ ಸೇರಿದಂತೆ ನಗರ ಸೇವಕರು ಉಪಸ್ಥಿತರಿದ್ದರು

Tags: