ವಿಜಯಪುರ: ಚಂದ್ರಯಾನ
ವಿಜಯಪುರ: ಚಂದ್ರಯಾನ 3 ಯಶಸ್ವಿಯಾಗಿದೆ! ಕೋಟ್ಯಾಂತರ ಭಾರತೀಯರು ಸಂತಸ, ಹೆಮ್ಮೆ ಪಡುವಂತಾಗಿದೆ
. ಐತಿಹಾಸಿಕ ಸಾಧನೆ ಮೆರೆದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯಲ್ಲಿ ವಿಜಯಪುರ ನಗರದ ವಿಜ್ಞಾನಿಯೊಬ್ಬರು ಕಾರ್ಯನಿರ್ವಹಿಸಿದ್ದಾರೆ. ನಗರದ ತಾಜ್ ಬೌಡಿಯಲ್ಲಿ ವಾಸವಾಗಿರುವ ನಿವೃತ್ತ ಅಕೌಂಟ್ ಸುಪ್ರಿಟಿಡೆಂಟ್ ಅರವಿಂದ ದೇಶಪಾಂಡೆ ಹಾಗೂ ಅಮೃತಾ ದೇಶಪಾಂಡೆ ದಂಪತಿಗಳ ಮಗ ಅಭಿಷೇಕ ದೇಶಪಾಂಡೆ ವಿಜಯಪುರ ಜಿಲ್ಲೆಯ ಹೆಸರಿಗೆ ಕೀರ್ತಿ ತಂದಿದ್ದಾರೆ. ಅಭಿಷೇಕ್ 1995 ರಲ್ಲಿ ಜನಿಸಿದ್ದು ಇವರ ಪತ್ನಿ ಅಪೂರ್ವ ಸಹಾಯಕ ಪ್ರೊಪೆಸರ್ ಆಗಿ ಬೆಂಗಳೂರಿನ ಆರ್.ವಿ.ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇನ್ನೂ ಚಂದ್ರಯಾನ ಯಶಸ್ವಿಯಾಗುತ್ತಲೇ
ಅಭಿಷೇಕ ಮನೆಯಲ್ಲಿ ಸಂಭ್ರಮ ಮನೆ ಮಾಡಿತ್ತು.
ಮನೆ ಮುಂದೆ ದೇಶಪಾಂಡೆ ಪರಿವಾರದವರು ಪಟಾಕಿ ಸಿಡಿಸಿ ಸಂಭ್ರಮಿಸಿದರು.