ರಾಜ್ಯ ಸರ್ಕಾರದ ಮಹತ್ವಕಾಂಕ್ಷಿ ಯೋಜನೆಗಳಲ್ಲಿ ಒಂದು ಆಗಿರುವ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಈ ಗ್ರಾಮ ವಾಸ್ತವ ಕಾರ್ಯಕ್ರಮ ಮಂಗಾವತಿ ಗ್ರಾಮದಲ್ಲಿ ಹಿರಿಯ ಅಧಿಕಾರಿಗಳು ಬಾರದೇ ಇದ್ದಿದ್ದರಿಂದ ಸಾರ್ವಜನಿಕರು ಈ ಸಭೆಯಲ್ಲಿ ಪಾಲ್ಗೊಳ್ಳದೆ ಇದ್ದಿದ್ದರಿಂದ ರದ್ದುಗೊಳಿಸಿ ಲಾಗಿದೆ.
ಶನಿವಾರರಂದು ಕಾಗವಾಡ ತಾಲೂಕಿನ ಜೋಗುಳ ಗ್ರಾಮ ಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಮಹಾರಾಷ್ಟ್ರ ಹಾಗೂ ಕರ್ನಾಟಕ ರಾಜ್ಯದ ಗಡಿ ಗ್ರಾಮವಾದ ಮಂಗಾವತಿಯಲ್ಲಿ ಗ್ರಾಮ ವಾಸ್ತವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಗ್ರಾಮ ವಾಸ್ತವ್ಯ ಕಾರ್ಯಕ್ರಮಕ್ಕೆ ಕಾಗವಾಡ ತಹಶೀಲದಾರ ಕಚೇರಿಯ ಗ್ರೇಡ್ 2
ತಹಶೀಲ್ದಾರ್ ಆರ್ ಎಸ್ ಭುವಾ ಇವರ ನೇತೃತ್ವದಲ್ಲಿ ಗ್ರಾಮ ವಾಸ್ತವ್ಯ ಸಭೆ ಹಮ್ಮಿಕೊಳ್ಳಲಾಗಿತ್ತು.
ಸಭೆಗೆ ತಾಲೂಕ ಆಡಳಿತ ಅಧಿಕಾರಿಗಳ ಕೆಲ ಅಧಿಕಾರಿಗಳು ಮಾತ್ರ ಹಾಜರಿದ್ದರು ಇನ್ನುಳಿದ ಇಲಾಖೆಯ ಅಧಿಕಾರಿಗಳು ಬಾರದೆ ಕಾಟಾಚಾರಕ್ಕಾಗಿ ತಮ್ಮ ಸಿಬ್ಬಂದಿಗಳನ್ನು ಕಳಿಸಿದ್ದರು.
ಇದನ್ನು ಗಮನಿಸಿದ ಗ್ರಾಮಸ್ಥರು ಯಾವುದೇ ಸಮಸ್ಯೆಗಳನ್ನು ಆಲಿಸದೆ ಇರುವ ಸಿಬ್ಬಂದಿಗಳ ಬಗ್ಗೆ ತಮ್ಮ ಬೇಸರ ಹೊರಹಾಕಿ ಯಾವುದೇ ನಿರ್ಣಯ ಕೊಯ್ಕೊಳ್ಳಲು ಅಸಾಧ್ಯವಿದೆ. ಎಂದು ಹೇಳಿ ಗ್ರಾಮ ವಾಸ್ತವ ಸಭೆಗೆ ನಾವು ಯಾರು ಭಾಗವಹಿಸುವುದಿಲ್ಲ .ಎಂಬ ಪಟ್ಟ ಹಿಡಿದು ಈ ಸಭೆ ರದ್ದುಗೊಳಿಸಿ ಮುಂದಿನ ದಿನಾಂಕ ನಿಗದಿಪಡಿಸಿ ಎಲ್ಲಾ ಅಧಿಕಾರಿಗಳನ್ನು ಕರೆದುಕೊಂಡು ಮಂಗಾವತಿ ಗ್ರಾಮದಲ್ಲಿ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಹಮ್ಮಿಕೊಳ್ಳಿರಿ, ಎಂಬ ಬೇಡಿಕೆ ಇಟ್ಟು ರು.
ಮಂಗಾವತಿ ಗ್ರಾಮ ಪಂಚಾಯಿತಿ ಸದಸ್ಯರಾದ ಮೆಹಬೂಬ್ ಇಲ್ಲಿದಾರ್. ಪ್ರಹ್ಲಾದ ಕೋಳಿ, ಶ್ರೀಮತಿ ಶಕುಂತಲಾ ಶಿರೋಡೋಣೆ, ಶ್ರೀಮತಿ ವಿದ್ಯಾಶ್ರೀ ದೇಶಿಂಗೆ, ಗ್ರಾಮದ ಹಿರಿಯರಾದ ದಿಲೀಪ್ ಪಾಟೀಲ್, ರಾಜೇಗೌಡ ಪಾಟೀಲ್ ಕಾಕಾ ಸಾಹೇಬ್ ಪಾಟೀಲ್, ಮಹದೇವ್ ಕುರುಬ ,ಸೇರಿದಂತೆ ಅನೇಕ ಗ್ರಾಮಸ್ಥರು ಗ್ರಾಮ ಸಭೆಗೆ ಆಗಮಿಸಿದ ಎಲ್ಲ ಅಧಿಕಾರಿಗಳಿಗೆ ತಮ್ಮ ನಿಲುವನ್ನು ತಿಳಿಸಿದರು.
ಗ್ರಾಮ ವಾಸ್ತವದ ಮುಖ್ಯ ಅಧಿಕಾರಿಗಳಾದ ಆರ್ ಎಸ್ ಭುವಾ ಇವರು ಮಾತನಾಡಿ ಗ್ರಾಮ ವಾಸ್ತವಕ್ಕಾಗಿ ಮೇಲಾಧಿಕಾರಿಗಳ ಆದೇಶದಂತೆ ಬೆಳೆಗೆಯಿಂದ ಇಲ್ಲಿಗೆ ಆಗಮಿಸಿ ಎಲ್ಲಾ ಗ್ರಾಮಸ್ಥರನ್ನು ಒಂದುಗೂಡಿಸಲು ಪ್ರಯತ್ನಿಸಿದ್ದೇವೆ ಕೆಲವರು ನಮ್ಮ ಆಹ್ವಾನಗಳನ್ನು ಸ್ವೀಕರಿಸಲು ಜಿಲ್ಲಾಧಿಕಾರಿಗಳು ಸೇರಿದಂತೆ ಮೇಲಾಧಿಕಾರಿಗಳು ಇಲ್ಲಿಗೆ ಆಗಮಿಸಿದಲ್ಲಿ ನಾವು ಗ್ರಾಮ ವಾಸ್ತವ್ಯ ಮಾಡಲು ಅನು ಮಾಡಿಕೊಳ್ಳುತ್ತೇವೆ ಎಂದು ಪಟ್ಟ ಹಿಡಿದರು, ಇದರಿಂದ ನಾವು ಸಂಜೆವರೆಗೆ ಉಳಿದು ಗ್ರಾಮದ ಸಮಸ್ಯೆಗಳು ಆಲಿಸಲು ಪ್ರಯತ್ನಿಸಿದ್ದೇವೆ ಆದರೂ ಯಾವುದೇ ಅಹವಾಲ ಬಂದಿಲ್ಲ ಎಂದು ಹೇಳಿ ಈ ಬಗ್ಗೆ ಮೇಲಾಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ ಎಂದರು.
ಗ್ರಾಮ ವಾಸ್ತವ ಸಭೆಯಲ್ಲಿ ಕಾಗವಾಡ ಸಿಡಿಪಿಓ ಸಂಜೀವ್ ಕುಮಾರ್ ಸದಲ್ಗಗೆ, ಲೋಕೋಪಯೋಗಿ ಇಲಾಖೆ ಆರ ಪ್ಪಿ ಅವತಾಡೆ, ಜೆ ಡಿ ನರೋಟೆ, ಲಿಂಗರಾಜ್ ಜೋಶಿ, ಅಮರ್ ಮೇತ್ರಿ. ಕಂದಾಯ ನಿರೀಕ್ಷಕ ಎಂ ಎಸ್ ಮುಲ್ಲಾ ಸೇರಿದಂತೆ ಇನ್ನಿತರ ಇಲಾಖೆಯ ಸಿಬ್ಬಂದಿಗಳು ಭಾಗವಹಿಸಿದ್ದರು.
ಸುಕುಮಾರ್ ಬನ್ನೂರೆ
ಇನ್ನ ನ್ಯೂಸ್ ಕಾಗವಾಡ