ಕಾಗವಾಡ ತಾಲೂಕಿನ ಐನಾಪುರ್ ಪಟ್ಟಣದ ಶ್ರೀ ಕೆರಿ ಸಿದ್ದೇಶ್ವರ ದೇವರ ಜಾತ್ರೆ ನಿಮಿತ್ಯ ರವಿವಾರ ದಿ 15 ರಿಂದ 19 ರವರೆಗೆ ಬೃಹತ್ ಕೃಷಿ ಮೇಳ ಕಾರ್ಯಕ್ರಮ ಹಮ್ಮಿಕೊಂಡಿದ್ದು ಕೃಷಿ ಮಳಿಗೆ ನಿರ್ಮಿಸಲು ಅಡಿಗಲ್ ಪೂಜೆ ಸಿದ್ದೇಶ್ವರ ದೇವರ ಜಾತ್ರಾ ಕಮಿಟಿ ಉಪಾಧ್ಯಕ್ಷ ರಾಜುಗೌಡ ಪಾಟೀಲ್ ಇವರು ನೆರವೇರಿಸಿ ಚಾಲನೆ ನೀಡಿದರು.
ಬುದುವಾರ ರಂದು ಐನಾಪುರದಲ್ಲಿ ಕೃಷಿ ಮೇಳದ 150 ಮಳಿಗೆಳು ನಿರ್ಮಿಸುವ ಕಾಮಗಾರಿಗೆ ಚಾಲನೆ ನೀಡಲಾಯಿತು. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದ ಲಕ್ಷಾಂತರ ಭಕ್ತರ ಶ್ರದ್ಧೆ ಸ್ಥಾನವಾಗಿರುವ ಐನಾಪುರದ ಶ್ರೀ ಕೆರಿ ಸಿದ್ದೇಶ್ವರ ದೇವರ ಜಾತ್ರೆ ನಿಮಿತ್ಯ ಭವ್ಯ ಕೃಷಿ ಮಳೆ ನಿರಂತರವಾಗಿ ಜರುಗುತ್ತಿದೆ. ಈ ವರ್ಷದ 53ನೇ ಜಾತ್ರಾ ಮೋಹೊತ್ಸವ ಹಾಗೂ 30ನೇ ಕೃಷಿ ಮೇಳ ಕಾರ್ಯಕ್ರಮ ಅದ್ದೂರಿಯಾಗಿ ಆಚರಿಸಲು ನಿರ್ಧಾರ ಕೈಗೊಂಡಿದ್ದಾರೆ.
ಕೃಷಿ ಮೇಳ ಮಳಿಗೆಗಳ ನಿರ್ಮಿಸುವ ನಿಮಿತ್ಯವಾಗಿ ಗುದ್ದಲಿ ಪೂಜೆ ನೆರವೇರಿಸಿ ಜಾತ್ರಾ ಕಮಿಟಿಯ ಉಪಾಧ್ಯಕ್ಷ ರಾಜುಗೌಡ ಪಾಟೀಲ್ ಮಾತನಾಡಿ, ಕಳೆದ ಮೂರು ವರ್ಷಗಳಲ್ಲಿ ಕರೋನಾ ಹಾವಳಿಯಿಂದ ಜಾತ್ರೆ ಆಚರಿಸಲು ಅನೇಕ ತೊಂದರೆಗಳು ನಿರ್ಮಾಣವಾಗಿದ್ದವು. ಈ ವರ್ಷ ಲಕ್ಷಾಂತರ ಸಂಖ್ಯೆಯಲ್ಲಿ ರೈತ ಭಕ್ತರು ಜಾತ್ರೆಗೆ ಆಗಮಿಸುತ್ತಿದ್ದು ಇಲ್ಲಿಗೆ ಅನ್ಯಪ್ರಸಾದ, ಧಾರ್ಮಿಕ ಕಾರ್ಯಕ್ರಮ, ರೈತರಿಗಾಗಿ ಕೃಷಿ ಪ್ರದರ್ಶನ, ದನಗಳ ಬೃಹತ್ ಪ್ರದರ್ಶನ, ಶ್ವಾನ ಪ್ರದರ್ಶನ, ಗುಂಡು ಹಾಗೂ ಸಂಗ್ರಾಮ ಕಲ್ಲು ಎತ್ತುವ ಸ್ಫರ್ಧೆ, ವಿವಿದ ಶರ್ಯತ್ತುಗಳು, ಜಾತ್ರೆ ನಿಮಿತ್ಯ ಹಮ್ಮಿಕೊಳ್ಳಲಾಗಿದೆ. ಜನವರಿ 15ರಿಂದ 19ರವರೆಗೆ ಕೃಷಿ ತಜ್ಞರು, ಗಣ್ಯರು ಭಕ್ತರು ಜಾತ್ರೆಗೆ ಆಗಮಿಸಿ ಶೋಭೆ ತರಲಿದ್ದಾರೆ, ಇದರ ಲಾಭ ಎಲ್ಲ ರೈತ ಬಾಂಧವರು ತೆಗೆದುಕೊಳ್ಳಬೇಕೆಂದು ಆಹ್ವಾನಿಸಿದರು.
ಜಾತ್ರೆ ನಿಮಿತ್ತ ಹಮ್ಮಿಕೊಂಡ ಕೃಷಿ ಮೇಳ ವಿಭಾಗದ ಪ್ರಮುಖರಾದ ಗುರುರಾಜ ಮಡಿವಾಳರ ಮಾತನಾಡಿ, ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯದಿಂದ ಬೇರೆ-ಬೇರೆ ಕೃಷಿ ಸಂಶೋಧಕರು ಆಗಮಿಸಿ ಮಾಹಿತಿ ನೀಡಲ್ಲಿದಾರೆ. ಕೃಷಿ ಸಂಶೋಧಕರಾಗಿ 150 ಮಳಿಗೆಗಳು ನಿರ್ಮಿಸಲಾಗುತದೆ. ರೈತರು ಹೆಚ್ಚಿನ ಸಂಖ್ಯೆಯಿಂದ ಕೃಷಿ ಮೇಳದಲ್ಲಿ ಭಾಗವಹಿಸಿ ಇದರ ಸದುಪಯೋಗ ಪಡೆದುಕೊಳ್ಳಿರಿ ಎಂದು ಆಹ್ವಾನಿಸಿದರು.
ಕೃಷಿ ಮೇಳ ಉದ್ಘಾಟನೆ ನಿಮಿತ್ಯವಾಗಿ ಪಟ್ಟಣ ಪಂಚಾಯಿತಿ ಸದಸ್ಯ ಅರುಣ್ ಗಾಣಿಗೇರ, ಸಂಜಯ್ ಬಿರಡಿ, ದಾದಾಗೌಡ ಪಾಟೀಲ್, ರಾಜೇಂದ್ರ ಪೋತದಾರ್, ಅಪ್ಪಸಾಹೇಬ್ ಚೌಗುಲಾ, ರತನ್ ಪಾಟೀಲ್, ಕುಮಾರ ಅಪರಾಜ, ಪ್ರಶಾಂತ ಅಪರಾಜ, ಗುರುರಾಜ್ ಮಡಿವಾಳರ್, ಮಂಜುನಾಥ್ ಕುಚನುರೆ, ಮಲ್ಲಿಕಾರ್ಜುನ್ ಕೋಲಾರ್, ಸಂಜು ಕುಸನಾಳೆ, ಶಂಕರ್ ಕೋರಬು, ಸಂತೋμï ತೇರದಾಳೆ, ಚಿದಾನಂದ ಕೊರಬು, ಪ್ರದೀಪ ಲಿಂಬಿಕಾಯಿ, ಪ್ರದೀಪ ಪಾಟೀಲ್, ಅಮಿತ್ ಡುಗ್ನವರ್, ಅಮ್ಮಗೌಡ ಒಡೆಯರ್ ಸೇರಿದಂತೆ ಅನೇಕರು ಇದ್ದರು.
ಸುಕುಮಾರ ಬನ್ನೂರೆ
ಇನ್ ನ್ಯೂಜ್ ಕಾಗವಾಡ