hubbali

ಪಿಟಬುಲ್ ಶ್ವಾನ ದಾಳಿ ಗಂಭೀರವಾಗಿ ಗಾಯಗೊಂಡ ವಿದ್ಯಾರ್ಥಿ

Share

ಪಾರಮ್ಯಾಟ್ :
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಾಯಿಗಳ ದಾಳಿ ಮುಂದುವರೆದಿದೆ. ಸಾಕುನಾಯಿಯೊಂದು ವಿದ್ಯಾರ್ಥಿಯೋರ್ವನ ಮೇಲೆ ಭೀಕರ ದಾಳಿ ನಡೆಸಿದೆ. ಪಿಟಬುಲ್ ಜಾತಿಯ ಶ್ವಾನದ ದಾಳಿಗೆ ಸಿಲುಕಿ ವಿದ್ಯಾರ್ಥಿ ಗಂಭೀರವಾಗಿ ಗಾಯಗೊಂಡಿರೋ ಘಟನೆ ಹುಬ್ಬಳ್ಳಿಯ ಬಂಕಾಪುರ ಚೌಕ ಬಳಿಯ ಪಾಟೀಲ್ ಗಲ್ಲಿಯಲ್ಲಿ ನಡೆದಿದೆ.

ಪವನ ಅನಿಲ ದೊಡಮನಿ ಎಂಬ ಬಾಲಕನಿಗೆ ಗಂಭೀರ ಗಾಯಗಳಾಗಿವೆ. ಟ್ಯೂಷನ್ ಗೆ ಹೋಗುತ್ತಿದ್ದ ವೇಳೆ ನಾಯಿ ದಿಢೀರ್ ಅಟ್ಯಾಕ್ ಮಾಡಿದೆ. ಗುರುಸಿದ್ದಪ್ಪ ಚನ್ನೋಜಿ ಎಂಬುವವರಿಗೆ ಸೇರಿದ ಪಿಟ್ ಬುಲ್ ಶ್ವಾನ ಏಕಾಏಕಿ ದಾಳಿ ಮಾಡಿದೆ. ಬಾಲಕನನ್ನ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಬೀದಿ ನಾಯಿಗಳ ಜೊತೆಗೆ ಸಾಕು ನಾಯಿಗಳಿಂದಲೂ ದಾಳಿ ನಡೆಸಿದ್ದು, ನಾಯಿಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಆಗ್ರಹಿಸಲಾಗಿದೆ. ಈಗಾಗಲೇ ನಾಯಿ ಕಾರ್ಯಾಚರಣೆ ಆರಂಭಿಸಿರೋ ಪಾಲಿಕೆ, ಹಲವು ನಾಯಿಗಳನ್ನು ಹಿಡಿದು ಸಂತಾನ ಹರಣ ಶಸ್ತ್ರಚಿಕಿತ್ಸೆ ಮಾಡಿದ್ದಾರೆ. ಬೇಂಡಿಗೇರಿ ಠಾಣಾ ವ್ಯಾಪ್ತಿಯಲ್ಲಿ ನಡೆದ ಘಟನೆ.

ಪಿಟ್ ಬುಲ್ ನಾಯಿ ಬಹುತೇಕ ಕಡೆ ನಿಷೇಧಿಸಲಾಗಿದೆ. ಆದರೂ ಹುಬ್ಬಳ್ಳಿಯಲ್ಲಿ ಅದನ್ನು ಸಾಕಲು ಅನುಮತಿ ಕೊಟ್ಟಿದ್ಯಾರು, ಅದನ್ನು ಹುಬ್ಬಳ್ಳಿಗೆ ತಂದರಾದರೂ ಹೇಗೆ ಅನ್ನೋ ಪ್ರಶ್ನೆ ಎದುರಾಗಿದೆ. ಭಾರತದ ಬಹುತೇಕ ನಗರ ಪ್ರದೇಶದಲ್ಲಿ ಪಿಟ್ ಬುಲ್ ಬ್ಯಾನ್ ಮಾಡಲಾಗಿದೆ. ಈ ಹಿನ್ನೆಲೆಯಲ್ಲಿ ನಾಯಿ ಮಾಲಕ ಪಿಟ್ ಬುಲ್ ಸಮೇತ ಮನೆಗೆ ಬೀಗ ಜಡಿದು ಮಾಯವಾಗಿದ್ದಾನೆ

Tags: