hubbali

ರೈತರ ಬೇಡಿಕೆ ಈಡೇರಿಸದಿದ್ದರೇ ಹೋರಾಟ : ಮಲ್ಲಿಕಾರ್ಜುನ ಕುನ್ನೂರ

Share

ರೈತರ ಸಾಲ ಮನ್ನಾ, ಕೃಷಿ ಕಾಯ್ದೆ ಸೇರಿದಂತೆ ರೈತರ ವಿವಿಧ ಬೇಡಿಕೆಗಳನ್ನು ಸರ್ಕಾರ ಶೀಘ್ರವಾಗಿ ಈಡೇರಿಸಬೇಕು ಇಲ್ಲದಿದ್ದರೆ ಡಿಸೆಂಬರ್ ತಿಂಗಳಲ್ಲಿ ಎಲ್ಲಾ ಜಿಲ್ಲಾ ವಾರುಗಳಲ್ಲಿ ರಸ್ತೆ ಬಂದ್ ಮಾಡಿ ಆಯಾ ಜಿಲ್ಲಾ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲಾಗುವುದು, ಸ್ಪಂದಿಸದಿದ್ದರೆ ಹೋರಾಟ ಮಾಡಲಾಗುವುದು
ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾಧ್ಯಕ್ಷ ಮಲ್ಲಿಕಾರ್ಜುನ ಕುನ್ನೂರ ಹೇಳಿದರು.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರೈತರು ಬೆಳೆದ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿಪಡಿಸಬೇಕು, ರೈತರ ಬೆಳೆ ಹಾನಿ ಬಿಡುಗಡೆ ಮಾಡಬೇಕು, ರೈತರ ಬೆಳೆಗೆ ಖರೀದಿ ಕೇಂದ್ರವನ್ನು ಪ್ರತಿ ಹೋಬಳಿ ಮಟ್ಟದಲ್ಲಿ ಸ್ಥಾಪಿಸುವುದು, ಅತೀ ವೃಷ್ಠಿಯಿಂದ ಹಾನಿಗೀಡಾದ ಮನೆಗಳನ್ನು ಪರಿಶೀಲನೆ ಮಾಡಿ, ಪರಿಹಾರ ಘೋಷಣೆ ಮಾಡಬೇಕು, ಆಲಮಟ್ಟಿ ಡ್ಯಾಮ್ ಜಲಾಶಯದ ಎತ್ತರವನ್ನು ೫೧೨ ರಿಂದ ೫೨೪ ಮೀಟರ್ ಕ್ಕೆ ಎತ್ತರಿಸಬೇಕು, ರಾಷ್ಟ್ರೀಕೃತ ಬ್ಯಾಂಕ್ ಹಾಗೂ ಸಹಕಾರಿ ಸಂಘಗಳಲ್ಲಿ ತೆಗೆದುಕೊಂಡ ರೈತರ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದರು.

ಡಿಸೆಂಬರ್ ೫ ರಂದು ರಾಜ್ಯಾದ್ಯಂತ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಸರ್ಕಾರಕ್ಕೆ ಮನವಿ ನೀಡಲಾಗುವುದು. ಸರ್ಕಾರ ಬೇಡಿಕೆ ಈಡೇರಿಸದಿದ್ದರೇ ಪ್ರತಿಭಟನೆ ಮಾಡಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ವೈ, ಎನ್.ಪಾಟೀಲ್, ಅನ್ನಪೂರ್ಣ ಪಾಟೀಲ್, ನಾಗರತ್ನಾ ಹೊಗರಿ, ಮಂಜುನಾಥ, ಶಿವಾನಂದ ಮಾಯಕಾರ, ಮಧು ಏನಿಗಿಮಠ ಉಪಸ್ಥಿತರಿದ್ದರು.

Tags: