Kagawad

ಕಾಗವಾಡ ಮತಕ್ಷೇತ್ರದ, ಕಿಡಿಗೇಡಿ-ಐನಾಪುರ್, ಮತ್ತು ಕೆಂಪವಾಡ-ಸಿದ್ಧೆವಾಡಿ ಮಾರ್ಗದ 4.10 ಕೋಟಿ ರೂ ವೆಚ್ಚದಲ್ಲಿ ರಸ್ತೆ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲರಿಂದ ಚಾಲನೆ

Share

ಕಾಗವಾಡ ಮತಕ್ಷೇತ್ರದ ಕಿಡಿಗೇಡಿ-ಐನಾಪುರ್, 3.50 ಕೋಟಿ ರೂ. ಮತ್ತು ಕೆಂಪವಾಡ-ಸಿದ್ದೆವಾಡಿ 60 ಲಕ್ಷ ರೂ. ಹೀಗೆ 4.10 ಕೋಟಿ ರೂ. ವೆಚ್ಚದಲ್ಲಿ ರಸ್ತೆ ನಿರ್ಮಿಸುವ ಕಾಮಗಾರಿಗೆ ಶಾಸಕ ಶ್ರೀಮಂತ ಪಾಟೀಲರು ಚಾಲನೆ ನೀಡಿದರು.

ಮಂಗಳವಾರ ರಂದು ಶಾಸಕ ಶ್ರೀಮಂತ ಪಾಟೀಲರು ಪೂಜೆ ಸಲ್ಲಿಸಿ ಮಾತನಾಡುವಾಗ, ಕಳೆದ ಅನೇಕ ವರ್ಷಗಳಿಂದ ಈ ಮಾರ್ಗದ ರಸ್ತೆ ನಿರ್ಮಾಣಕ್ಕಾಗಿ ಇಲ್ಲಿಯ ರೈತರ ಬೇಡಿಕೆಯಾಗಿತ್ತು. ಇದನ್ನು ಗಮನಿಸಿ ವಿಶೇಷ ಅನುದಾನ ಮಂಜೂರು ಗೊಳಿಸಿ ಕಾಮಗಾರಿಗೆ ಪೂಜೆ ಸಲ್ಲಿಸುತ್ತಿದ್ದೇನೆ, ಎಂದು ಹೇಳಿ ಕಾಗವಾಡ ಮತಕ್ಷೇತ್ರದ ಅಭಿವೃದ್ಧಿಗಾಗಿ 200 ಕೋಟಿ ರೂಪಾಯಿ ವಿಶೇಷ ಅನುದಾನ ತಂದಿದ್ದೇನೆ ಎಂದು ಹೇಳಿದರು.

ಮುಖ್ಯಮಂತ್ರಿಗಳಾದ ಬಸವರಾಜ್ ಬೊಮ್ಮಾಯಿವರು ಮಂತ್ರಿಮಂಡಳ ವಿಸ್ತರಣೆ ಹಮ್ಮಿಕೊಳ್ಳಲಿದ್ದಾರೆ. ಅದರಲ್ಲಿ ತಮಗೆ ಸಚಿವ ಸ್ಥಾನ ನೀಡಲಿದ್ದಾರೆ ಎಂದು ಕೇಳಿ ಬರುತ್ತಿದೆ ಎಂದು ಕೇಳಿದಾಗ ನಾನು ಸಚಿವ ಸ್ಥಾನದ ಆಕಾಂಕ್ಷಿಯಲ್ಲ. ಈ ಮೊದಲೇ ಮುಖ್ಯಮಂತ್ರಿಗಳಿಗೆ ನನಗೆ ಸಚಿವಸ್ಥಾನ ಬೇಡ. ಮತಕ್ಷೇತ್ರದ ಅಭಿವೃದ್ಧಿಗಾಗಿ ವಿಶೇಷ ಅನುದಾನ ನೀಡಿರಿ ಎಂದು ಕೇಳಿದಾಗ ಬೇರೆ ಬೇರೆ ಕ್ಷೇತ್ರದ ಶಾಸಕರಿಗೆ 50 ಕೋಟಿ ರಸ್ತೆ ಅಭಿವೃದ್ಧಿಗಾಗಿ ಅನುದಾನ ನೀಡಿದ್ದಾರೆ. ನನಗೆ 200 ಕೋಟಿ ಅನುದಾನ ನೀಡಿದ್ದಾರೆ. ಕ್ಷೇತ್ರದ ಅಭಿವೃದ್ಧಿ ಒಂದೇ ಗುರಿಯಾಗಿದೆ ಸಚಿವ ಸ್ಥಾನದ ಆಕಾಂಕ್ಷಿ ನಾನಲ್ಲ ಎಂದು ಸ್ಪಷ್ಟ ಪಡಿಸಿದ್ರು.

ಕಿಡಿಗೇಡಿ-ಐನಾಪುರ್ ಮಾರ್ಗದ ರಸ್ತೆ ಅಭಿವೃದ್ಧಿ ಕಾಮಗಾರಿಗಳ ಪೂಜಾ ಕಾರ್ಯಕಮ್ರದಲ್ಲಿ ಲೋಕೋಪಯೋಗಿ ಇಲಾಖೆ ಅಭಿಯಂತರಾದ ಜೆ.ಎ.ಹಿರೇಮಠ, ಎಂ.ಎಸ್.ಮಗದುಮ್, ಗುತ್ತಿಗೆದಾರರಾದ ಮಹಾಂತೇಶ ಬೆನಾಳಿ, ಕಾರ್ಯಕರ್ತರಾದ ಮಲ್ಲಪ್ಪಾ ಚಾವರೆ, ನಾನಾ ಶಿಂದೆ, ಸಂಜು ಸಾವಂತ್, ದಿಲೀಪ್ ರಾಣಗಟ್ಟೆ, ರಾಯ್‍ಗೌಡ ಪಾಟೀಲ್ ಸೇರಿದಂತೆ ಅನೇಕರು ಇದ್ದರು. ಕೆಂಪುವಾಡ-ಸಿದ್ದೇವಾಡಿ ಮಾರ್ಗದ ರಸ್ತೆ ಪೂಜೆ ಕಾರ್ಯಕ್ರಮದಲ್ಲಿ ಅಭಿಯಂತರದ ವೀರಣ್ಣಾ ವಾಲಿ, ಅಮರ್ ಮೇತ್ರಿ, ಗುತ್ತಿಗೆದಾರರಾದ ರವಿ ಪಾಟೀಲ್, ಮಹಾಬಲ ಚೌಗುಲೆ, ರಮೇಶ್ ಅಜೂರೆ, ತಾಯಪ್ಪ ಖಿಲಾರೆ, ಭರತೇಶ್ ಡಿಗರಜ, ರಾಜು ಮಾಲಗಾವೆ ಸೇರಿದಂತೆ ಅನೇಕರು ಇದ್ದರು.

Tags: