hubbali

ಹುಬ್ಬಳ್ಳಿಯಲ್ಲಿ ಹಂದಿಗಳ ಕಾರ್ಯಾಚರಣೆ : 100 ಕ್ಕೂ ಹಂದಿಗಳನ್ನು ಸೆರೆ ಹಿಡಿದ ಆರೋಗ್ಯಾಧಿಕಾರಿಗಳು

Share

ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಹಂದಿಗಳ ಕಾಟದಿಂದ ಜನರು ಬೇಸತ್ತು ಹೋಗಿದ್ದರು. ವಿವಿಧ ಪ್ರದೇಶಗಳಲ್ಲಿ ಹಂದಿಗಳ ಕಾಟದಿಂದ ಪಾಲಿಕೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಆಯುಕ್ತರಿಗೆ ದಿನಂಪ್ರತಿ ದೂರು ಬರುತ್ತಿದ್ದವು. ಇದನ್ನು ಗಮನಿಸಿದ ಪಾಲಿಕೆ ಆಯುಕ್ತ ಡಾ. ಗೋಪಾಲಕೃಷ್ಣ ಅವರ ಮಾರ್ಗದರ್ಶನದಲ್ಲಿ ಪಾಲಿಕೆ ವೈದ್ಯಾಧಿಕಾರಿಗಳು ಬೆಳ್ಳಂ ಬೆಳಗ್ಗೆ 5 ಘಂಟೆಗೆ ಹಂದಿಗಳ ಕಾರ್ಯಾಚರಣೆಗೆ ಮುಂದಾಗಿದ್ದಾರೆ.

ಪಾಲಿಕೆ ಮುಖ್ಯ ವೈದ್ಯಾಧಿಕಾರಿ ಡಾ. ಶ್ರೀಧರ ದಂಡೆಪ್ಪನವರ ಅವರು ಧಾರವಾಡ ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿನ ವಿವಿಧ ಪ್ರದೇಶಗಳಲ್ಲಿ ಹಂದಿಗಳ ಕಾರ್ಯಾಚರಣೆ ಮಾಡಿ

ಸುಮಾರು 100 ಕ್ಕೂ ಹೆಚ್ಚು ಹಂದಿಗಳನ್ನು ಸೆರೆ ಹಿಡಿದಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಪಶು ವೈದ್ಯಾಧಿಕಾರಿ ಕುಲಕರ್ಣಿ, ಪೊಲೀಸ್ ಇಲಾಖೆ ಸಿಬ್ಬಂದಿ, ಆರೋಗ್ಯ ನಿರೀಕ್ಷಕರು ತೊಡಗಿದ್ದರು. ಹಂದಿಗಳನ್ನು ಸೆರೆ ಹಿಡಿದಿದ್ದ ಕಾರಣ ಜನರು ನೆಮ್ಮದಿಯಾಗಿ ಜೀವನ ಮಾಡುತ್ತಿದ್ದಾರೆ.

Tags: