Chikkodi

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ  ಸುವರ್ಣಸೌಧದವರೆಗೆ ಪಾದಯಾತ್ರೆಗೆ ಚಾಲನೆ…

Share

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಗೆ ಆಗ್ರಹಿಸಿ ಸುವರ್ಣಸೌಧದವರೆಗೆ ಪಾದಯಾತ್ರೆಗೆ ಯಡೂರ ಗ್ರಾಮದಲ್ಲಿ ಚಾಲನೆಯನ್ನು ನೀಡಲಾಯಿತು…

ಚಿಕ್ಕೋಡಿ ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡುವಂತೆ ಆಗ್ರಹಿಸಿ ಚಿಕ್ಕೋಡಿ ತಾಲೂಕಿನ ಯಡೂರ ಗ್ರಾಮದಿಂದ ಬೆಳಗಾವಿಯ ಸುವರ್ಣಸೌಧದವರೆಗೆ ಪಾದಯಾತ್ರೆಗೆ ಚಾಲನೆಯನ್ನು ನೀಡಲಾಯಿತು. ಯಡೂರಿನ ವೀರಭದ್ರೇಶ್ವರ ದೇವಸ್ಥಾನದಲ್ಲಿ ವೀರಭದ್ರೇಶ್ವರ ದೇವರಿಗೆ ಪೂಜೆಯನ್ನು ಸಲ್ಲಿಸಿ ಪಾದಯಾತ್ರೆಗೆ ಚಾಲನೆಯನ್ನು ನೀಡಲಾಯಿತು. ಇದಕ್ಕೂ ಮುಂಚಿತವಾಗಿ ಕಾಡಸಿದ್ದೇಶ್ವರ ಕಲ್ಯಾಣ ಭವನದಲ್ಲಿ ಪಾದಯಾತ್ರೆಯ ಚಾಲನೆಯ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.ಈ ಕಾರ್ಯಕ್ರಮದಲ್ಲಿ ಭಾಗಿಯಾಗಿ ಮಾತನಾಡಿದ ಮಾಜಿ ಶಾಸಕ ಕಲ್ಲಪ್ಪಣಾ ಮಗೆನ್ನವರ ಜಾತಿ,ಧರ್ಮ,ಭೇದ,ಭಾವವಿಲ್ಲದೆ ರಾಜಕೀಯವನ್ನು ಮಾಡದೇ ಚಿಕ್ಕೋಡಿ ಜಿಲ್ಲೆಗೆ ಎಲ್ಲರೂ ಒಗ್ಗಟಾಗಿ ಶ್ರಮಿಸಬೇಕು ಎಂದರು.

 

ಚಿಕ್ಕೋಡಿ ಜಿಲ್ಲಾ ಹೋರಾಟ ಸಮೀತಿಯ ಅಧ್ಯಕ್ಷ ಎಸ್.ವೈ ಹಂಜಿ‌ ಮಾತನಾಡಿ ಚಿಕ್ಕೋಡಿ ಜಿಲ್ಲಾ ಹೋರಾಟದ ಕಿಚ್ಚು ಪ್ರಾರಂಭವಾಗಿದೆ.ಜಿಲ್ಲಾ ಹೋರಾಟವನ್ನು ಜೀವಂತ ಇಡುವ ಸದುದೇಶದಿಂದ ಈ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ ಎಂದರು.

ಈ ಸಂಧರ್ಭದಲ್ಲಿ ವಕೀಲರಾದ ನಾಗೇಶ ಕೀವಡ,ಪುರಸಭೆ ಸದಸ್ಯ ರಾಮಾಮಾನೆ, ,ಗ್ರಾ.ಪಂ ಉಪಾಧ್ಯಕ್ಷ ರಾಹುಲ ದೇಸಾಯಿ,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅನೀಲ ಪಾಟೀಲ, ತುಕಾರಾಮ ಕೋಳಿ,ಸುರೇಶ ಬ್ಯಾಕೂಡೆ, ಉದ್ಯಮಿ ರವಿ ಹಂಪನ್ನವರ,ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ದುಂಡಪ್ಪ ಬೆಂಡವಾಡೆ,ಖ್ಯಾತ ವೈದ್ಯರಾದ ಡಾ! ಎನ್ ಎ ಮಗದುಮ್,ಸಮಾಜ ಸೇವಕ ಪ್ರದೀಪ ಮಾಳಗೆ,ಅನೀತಾ ವಿಕ್ರಮ ಬನಗೆ,ತ್ಯಾಗರಾಜ ಕದಮ,ಅಪ್ಪಾಸಾಹೇಬ ಚೌಗಲಾ,ಬಸವರಾಜ ಢಾಕೆ,ದಾದು ಕಾಗವಾಡೆ,ಶಿವಾನಂದ ಕರೋಶಿ,ಮಹೇಶ ಕಾಗವಾಡೆ ,ಜಯಪಾಲ ಬೋರಗಾಂವೆ,ಅಜೀತ ಕಿಲ್ಲೆದಾರ,ಸಂಜಯ ಪಿರಾಜೆ,ಸೇರಿದಂತೆ ಕರವೇ ಕಾರ್ಯಕರ್ತರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…

Tags: